ಮತ್ತೆ ಸಮ್ಮಿಶ್ರ ಸರ್ಕಾರ, ಇಬ್ಬರೂ ನಮ್ಮ ಬಳಿ ಬರಹುದು: ದೇವೇಗೌಡ ಭವಿಷ್ಯ

Published : Feb 12, 2022, 10:14 PM IST
ಮತ್ತೆ ಸಮ್ಮಿಶ್ರ ಸರ್ಕಾರ, ಇಬ್ಬರೂ ನಮ್ಮ ಬಳಿ ಬರಹುದು: ದೇವೇಗೌಡ ಭವಿಷ್ಯ

ಸಾರಾಂಶ

* ಮತ್ತೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಬರಹುದು * ಎರಡೂ ಪಕ್ಷದವರು ನಮ್ಮ ಬಳಿ ಬರಬಹುದು * ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡ‌ ಭವಿಷ್ಯ

ಮಂಗಳೂರು, (ಫೆ.12): ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ (Coalition Government) ಬರಬಹುದು. ಆಗ ಎರಡೂ ಪಕ್ಷದವರು ನಮ್ಮ ಬಳಿ ಬರಬಹುದು. ಆಗ ತೀರ್ಮಾನ ಮಾಡೋಣ ಎಂದು ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡ‌HD Devegowda) ಭವಿಷ್ಯ ನುಡಿದಿದ್ದಾರೆ.

ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ದೇವಸ್ಥಾನದಲ್ಲಿ ಅಕ್ಕಿ, ಕಾಯಿ, ಬೆಲ್ಲದಿಂದ  ತುಲಾಭಾರ ಸೇವೆಯನ್ನು ನೆರವೇರಿಸಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದಲ್ಲಿ ಕೂಡ ಪ್ರಾದೇಶಿಕ ಪಕ್ಷ ಇಲ್ಲದೆ ದೇಶ ಆಳಲು ಕಷ್ಟ ಇದೆ. ಬಿಜೆಪಿ, ಸೋನಿಯಾ ಇಬ್ಬರೂ ನನ್ನನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದಾರೆ, ಯಾರನ್ನೂ ದೂರಲ್ಲ. ಕುಮಾರಸ್ವಾಮಿ ಟಾಪ್ ಲೀಡರ್, ಎಲ್ಲಿಂದಲೂ ಸ್ಪರ್ಧಿಸಬಹುದು, ಆದರೆ ರಾಮನಗರ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

HD Kumaraswamy: ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮುಂದೆ ನಾನೇ ಬರ್ತೇನೆ

ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸುತ್ತಾರೆ ಗೊತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಕೆ ಕುಮಾರಸ್ವಾಮಿ (HD Kumaraswamy) ಸ್ಪರ್ಧಿಸ್ತಾರೆ? ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಹಲವಾರು ಭಾವನೆ ಬರ್ತಿದೆ ಅಷ್ಟೇ. ಹೆಚ್​ಡಿಕೆ ಜೆಡಿಎಸ್​ ಪಕ್ಷದ ಮುಖ್ಯ ನಾಯಕ ಸ್ಥಾನದಲ್ಲಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಎಲ್ಲಿ ಬೇಕಾದರೂ ನಿಲ್ಲಬಹುದು. ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಹೇಳಲಾಗಲ್ಲ.ಏನೇ ಆದರೂ ಕುಮಾರಸ್ವಾಮಿರಾಮನಗರ ಜಿಲ್ಲೆ ಬಿಟ್ಟು ಹೋಗಲ್ಲ. ಒಬ್ಬರಿಗೊಬ್ಬರು ಮಾತನಾಡುವಾಗ ಚರ್ಚೆಯಾಗುತ್ತಿದೆ ಅಷ್ಟೇ  ಎಂದರು.

 ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಗೌಡ್ರು, ಈ ವಿವಾದ ಹೇಗೆ, ಎಲ್ಲಿಂದ, ಯಾಕೆ ಪ್ರಾರಂಭ ಆಯ್ತು ಎಂದು ಹೇಳೊದು‌ ಕಷ್ಟ. ಒಬ್ಬೊಬ್ರು ಒಂದೊಂದು ರೀತಿ ಹೇಳ್ತಿದ್ದಾರೆ. ಎರಡು ಪ್ರಮುಖ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡ್ತಿದೆ. ನಾನು ಯಾರ ಮೇಲೂ ಅಪಾಧನೆ ಮಾಡಲ್ಲ ಎಂದು ಹೇಳಿದರು.

ಒಂದಲ್ಲ ಒಂದು ಸಮಸ್ಯೆಯನ್ನು ಉದ್ಬವ ಮಾಡೋದಕ್ಕೆ ಕಾಯುತ್ತಿರುತ್ತಾರೆ. ಇದರಿಂದ ರಾಜಕೀಯ ಲಾಭ ಪಡಿಬೇಕು ಎಂದು ಲೆಕ್ಕಾಚಾರ ಹಾಕ್ತಾರೆ. ನಾನು ಧರ್ಮದ ಆಧಾರದಲ್ಲಿ ವೈಷಮ್ಯ ಸೃಷ್ಟಿ ಮಾಡಿ ಎಂದು ರಾಜಕೀಯ ಲಾಭ ಪಡೆದಿಲ್ಲ. ಸಮಾಜದಲ್ಲಿ ಶಾಂತಿ ಕದಡೋದು ರಾಜಕೀಯ ಲಾಭ ಪಡೆಯೋದು ನಡೆಯುತ್ತಿದೆ. ಕರಾವಳಿ ಭಾಗದಲ್ಲಿ ಇದು ಹೆಚ್ಚಾಗ್ತಿದೆ ಇದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

 ದೇವೆಗೌಡ ದಂಪತಿಯಿಂದ ತುಲಾಭಾರ ಸೇವೆ
ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ದಂಪತಿ ಇಂದು (ಶನಿವಾರ) ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. 

ದೇವಸ್ಥಾನದಲ್ಲಿ ಅಕ್ಕಿ, ಕಾಯಿ, ಬೆಲ್ಲದಿಂದ  ತುಲಾಭಾರ ಸೇವೆಯನ್ನು ನೆರವೇರಿಸಿ ಶ್ರೀ ದೇವರ ದರ್ಶನ ಪಡೆದಿದ್ದಾರೆ. ಬಳಿಕ ಕುಕ್ಕೆ ಸುಬ್ರಮಣ್ಯ ದೇಗುಲದ ಗೋಪುರದ ಬಳಿ ದೇವೆಗೌಡ ದಂಪತಿ ಗಿಡ ನೆಟ್ಟಿದ್ದಾರೆ. ಬಳಿಕ ಸಂಪುಟ ನರಸಿಂಹಪಡೆದರು ಸ್ವಾಮಿ ಮಠಕ್ಕೆ ಆಗಮಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಕರ್ನಾಟಕದ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿದೆ. ಸುಬ್ರಹ್ಮಣ್ಯ ಸ್ವಾಮಿ, ನಾಗ ದೇವರ ಸೇವಾಕಾರ್ಯಗಳಿಗೆ ಬಹಳಷ್ಟು ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!