ಇದೇ ಮೊದಲ ಬಾರಿ ರಾಜ್ಯಸಭೆಯಲ್ಲಿ NDA ಸಂಖ್ಯಾಬಲ 104ಕ್ಕೆ: ಕಾಂಗ್ರೆಸ್‌ ಐತಿಹಾಸಿಕ ಕುಸಿತ

Published : Nov 04, 2020, 11:06 AM ISTUpdated : Nov 04, 2020, 11:32 AM IST
ಇದೇ ಮೊದಲ ಬಾರಿ ರಾಜ್ಯಸಭೆಯಲ್ಲಿ NDA ಸಂಖ್ಯಾಬಲ 104ಕ್ಕೆ: ಕಾಂಗ್ರೆಸ್‌ ಐತಿಹಾಸಿಕ ಕುಸಿತ

ಸಾರಾಂಶ

ಇದೇ ಮೊದಲ ಬಾರಿಗೆ ಎನ್‌ಡಿಎ ರಾಜ್ಯಸಭೆ ಸಂಖ್ಯಾಬಲ 104ಕ್ಕೆ | ಕಾಂಗ್ರೆಸ್‌ನ ಅತ್ಯಂತ ಕನಿಷ್ಠ ಪ್ರಾತಿನಿಧ್ಯ | ಇನ್ನಷ್ಟು ಬೆಂಬಲ ಸಿಗುವ ಸಾಧ್ಯತೆ

ನವದೆಹಲಿ(ನ.04): ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಸೇರಿ ಬಿಜೆಪಿಯ 9 ಅಭ್ಯರ್ಥಿಗಳು ಸೋಮವಾರ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ತನ್ಮೂಲಕ 242 ಸಂಖ್ಯಾಬಲದ ಸಂಸತ್ತಿನ ಮೇಲ್ಮನೆಯಲ್ಲಿ ಇದೇ ಮೊದಲ ಬಾರಿಗೆ ಎನ್‌ಡಿಎ ಸಂಖ್ಯಾಬಲ 104ಕ್ಕೇರಿದೆ. ಮತ್ತೊಂದೆಡೆ ದೀರ್ಘಕಾಲೀನವರೆಗೂ ರಾಜ್ಯಸಭೆಯಲ್ಲಿ ಪ್ರಾಬಲ್ಯ ಮೆರೆದಿದ್ದ ಪ್ರತಿಪಕ್ಷ ಕಾಂಗ್ರೆಸ್‌ ಸಂಖ್ಯೆ 38ಕ್ಕೆ ಕುಸಿದಿದೆ.

DMK ಜೊತೆ ಮೈತ್ರಿ ಇಲ್ಲ, 2021ರ ಚುನಾವಣೆಯಲ್ಲಿ ಕಮಲ್ ಹಾಸನ್ ಪಕ್ಷ ಏಕಾಂಗಿ ಸ್ಪರ್ಧೆ

ಇದು ರಾಜ್ಯಸಭೆಯಲ್ಲಿ ಈವರೆಗಿನ ಕಾಂಗ್ರೆಸ್‌ನ ಅತ್ಯಂತ ಕನಿಷ್ಠ ಪ್ರಾತಿನಿಧ್ಯವಾಗಿದೆ. ಉತ್ತರಪ್ರದೇಶದಲ್ಲಿ 10 ಮತ್ತು ಉತ್ತರಾಖಂಡದಲ್ಲಿ 1 ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳು 9 ಸ್ಥಾನ ಗೆದ್ದಿದ್ದಾರೆ. ಈ ಮೂಲಕ ಪಕ್ಷದ ಟಾಲಿ 92 ಸ್ಥಾನಗಳಿಗೆ ಏರಿಕೆಯಾಗಿತ್ತು.

ಎನ್‌ಡಿ ಸಂಖ್ಯೆ ಈಗ ಸದ್ಯ 104 ಆಗಿದ್ದು ಮತ್ತು ಇನ್ನು ನಾಲ್ಕು ನಾಮನಿರ್ದೇಶಿತ ಸದಸ್ಯರ ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ. ಈ ಮೂಲಕ ರಾಜ್ಯಸಭೆಯಲ್ಲಿ ಒಟ್ಟು ಸಂಖ್ಯಾ ಬಲದ ಅರ್ಧ 121ರ ಗಡಿ ಮುಟ್ಟುವ ಸಾಧ್ಯತೆ ಇದೆ.

ಮೊದಲ ಬಾರಿ ಕೋವಿಡ್‌ ಸೋಂಕಿ​ತ​ರಿಂದ ಮತ​ದಾ​ನ

ಒಐಎಡಿಎಂಕೆಯಿಂದ ಒಂಬತ್ತು, ಬಿಜೆಡಿಯಿಂದ 9, ಏಳು ಸಂಸದರೊಂದಿಗೆ ಟಿಆರ್ಎಸ್ ಮತ್ತು ರಾಜ್ಯಸಭೆಯಲ್ಲಿ ಆರು ಸಂಸದರನ್ನು ಹೊಂದಿರುವ ವೈಎಸ್ಆರ್ಸಿಪಿ ಮುಂತಾದ ಕೆಲವು ಸ್ನೇಹಪರ ಪಕ್ಷಗಳಿಂದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಬೆಂಬಲ ಪಡೆಯಬಹುದು. ಈ ಪಕ್ಷಗಳು ಎನ್‌ಡಿಎಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್