ನಾನು ಟೈರ್ಡೂ ಆಗಿಲ್ಲ, ರಿಟೈರ್ಡೂ ಆಗಿಲ್ಲ: ಅಜಿತ್‌ ಪವಾರ್‌ಗೆ ಚಿಕ್ಕಪ್ಪನ ಟಾಂಗ್‌

By Kannadaprabha NewsFirst Published Jul 9, 2023, 11:30 AM IST
Highlights

ಅಜಿತ್‌ ಪವಾರ್‌ ತಮ್ಮ ಚಿಕ್ಕಪ್ಪನ ವಿರುದ್ಧ ಹರಿಹಾಯುವಾಗ ‘ಅವರಿಗೀಗ 83 ವರ್ಷ. ಇನ್ನೂ ಎಷ್ಟು ವರ್ಷ ರಾಜಕೀಯದಲ್ಲಿರುತ್ತಾರೆ’ ಎಂದು ಹೇಳಿದ್ದರು. ಅದಕ್ಕೆ ಶನಿವಾರ ವಿವಿಧ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮತ್ತೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಶರದ್‌ ಪವಾರ್‌, ನಾನು ಟೈರ್ಡೂ ಆಗಿಲ್ಲ, ರಿಟೈರ್ಡೂ ಆಗಿಲ್ಲ’ ಎಂದು ಹೇಳಿದರು.

ಮುಂಬೈ:  ಎನ್‌ಸಿಪಿಯ ಅಜಿತ್‌ ಪವಾರ್‌ ನೇತೃತ್ವದಲ್ಲಿ ಆ ಪಕ್ಷದ ಶಾಸಕರು ಆಡಳಿತಾರೂಢ ಶಿವಸೇನೆ ಹಾಗೂ ಬಿಜೆಪಿಯ ಮೈತ್ರಿ ಸರ್ಕಾರದಲ್ಲಿ ಸೇರ್ಪಡೆಗೊಂಡ ಬಳಿಕ ಮಹಾರಾಷ್ಟ್ರದ ರಾಜಕೀಯದಲ್ಲಿ ದಿನಕ್ಕೊಂದು ಕುತೂಹಲಕರ ಬೆಳವಣಿಗೆಗಳು ನಡೆಯುತ್ತಿವೆ. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ‘ನಾನು ಟೈರ್ಡೂ ಆಗಿಲ್ಲ, ರಿಟೈರ್ಡೂ ಆಗಿಲ್ಲ’ (ನನಗೆ ಸುಸ್ತಾಗಿಲ್ಲ, ನಾನು ನಿವೃತ್ತಿಯನ್ನೂ ಪಡೆದಿಲ್ಲ) ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಇತ್ತೀಚೆಗೆ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ತಮ್ಮ ಚಿಕ್ಕಪ್ಪನ ವಿರುದ್ಧ ಹರಿಹಾಯುವಾಗ ‘ಅವರಿಗೀಗ 83 ವರ್ಷ. ಇನ್ನೂ ಎಷ್ಟು ವರ್ಷ ರಾಜಕೀಯದಲ್ಲಿರುತ್ತಾರೆ’ ಎಂದು ಹೇಳಿದ್ದರು. ಅದಕ್ಕೆ ಶನಿವಾರ ವಿವಿಧ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮತ್ತೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಶರದ್‌ ಪವಾರ್‌, ‘ಮೊರಾರ್ಜಿ ದೇಸಾಯಿ ಎಷ್ಟು ವರ್ಷಕ್ಕೆ ಪ್ರಧಾನಿಯಾಗಿದ್ದರು ಗೊತ್ತಾ? ನನಗೆ ಪ್ರಧಾನಿಯೂ ಆಗಬೇಕಿಲ್ಲ, ಮಂತ್ರಿಯೂ ಆಗಬೇಕಿಲ್ಲ. ಬದಲಿಗೆ ಜನರ ಸೇವೆ ಮಾಡಬೇಕಾಗಿದೆ. ನನಗಿನ್ನೂ ವಯಸ್ಸಾಗಿಲ್ಲ. ಈಗಲೂ ಕೆಲಸ ಮಾಡಬಲ್ಲೆ. ಜನರು ಬಯಸುವವರೆಗೆ ರಾಜಕೀಯದಲ್ಲಿರುತ್ತೇನೆ. ನಾನು ರಿಟೈರಾಗಬೇಕು ಎಂದು ಹೇಳಲು ಅವರು ಯಾರು ಎಂದು ಅಜಿತ್‌ ಪವಾರ್‌ಗೆ ತಿರುಗೇಟು ನೀಡಿದರು. ಜೊತೆಗೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಮಾತನ್ನು ನೆನೆಸಿಕೊಂಡು ‘ನಾನು ಟೈರ್ಡೂ ಆಗಿಲ್ಲ, ರಿಟೈರ್ಡೂ ಆಗಿಲ್ಲ’ ಎಂದು ಹೇಳಿದರು.

ನಾನು ಕೆಲವರನ್ನು ನಂಬಿ ತಪ್ಪು ಮಾಡಿದೆ. ಇನ್ನೆಂದು ಆ ತಪ್ಪು ಮಾಡುವುದಿಲ್ಲ ಎಂದ ಶರದ್ ಪವಾರ್, ಈ ಮೂಲಕ ತಮ್ಮ ಆಪ್ತರಾದ ಅಜಿತ್ ಪವಾರ್, ಪ್ರಫುಲ್ ಪಟೇಲ್, ಸುನೀಲ್ ತತ್ಕರೆ, ಛಗನ್ ಭುಜಬಲ್ ಕೈ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 

ಸಿಎಂ ಶಿಂಧೆ ರಾಜೀನಾಮೆಗೆ ಸೂಚನೆ ಹೋಗಿದೆ: ಆದಿತ್ಯ ಠಾಕ್ರೆ

ಈ ಮಧ್ಯೆ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಹೇಳಿಕೆಯೊಂದು ಸಂಚಲನ ಸೃಷ್ಟಿಸಿದೆ. ಶೀಘ್ರದಲ್ಲೇ ಸರ್ಕಾರದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಶಿಂಧೆಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ ಎಂದು ನನಗೆ ಮಾಹಿತಿಯಿದೆ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಹೇಳಿದ್ದಾರೆ. ಸರ್ಕಾರಕ್ಕೆ ಎನ್‌ಸಿಪಿ ಶಾಸಕರು ಬೆಂಬಲ ನೀಡಿ ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾದ ಬಳಿಕ ಬಿಜೆಪಿಯು ಶಿಂಧೆಯನ್ನು ದೂರ ಇರಿಸುತ್ತಿದೆ ಎಂದು ವರದಿಯಾಗಿತ್ತು. ಅದರ ಬೆನ್ನಲ್ಲೇ ಆದಿತ್ಯ ಠಾಕ್ರೆಯಿಂದ ಈ ಹೇಳಿಕೆ ಬಂದಿರುವುದು ಕುತೂಹಲ ಮೂಡಿಸಿದೆ.

ಬಿಜೆಪಿಗರು 75ಕ್ಕೆ ನಿವೃತ್ತಿ ಆಗ್ತಾರೆ, ನಿಮ್ದು 83 ಆಯ್ತು, ಇನಿಂಗ್ಸ್‌ ಮುಗಿಸಿ: ಶರದ್‌ ಪವಾರ್‌ಗೆ ಅಜಿತ್‌ ಟಾಂಗ್‌

click me!