ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ತಾಕತ್ತಿದ್ದರೆ ಬೇರೆ ಪಕ್ಷದಿಂದ ಗೆಲ್ಲು, ಸುಧಾಕರ್‌ಗೆ ವಿಶ್ವನಾಥ್‌ ಸವಾಲ್

Published : Jan 31, 2025, 07:18 AM IST
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ತಾಕತ್ತಿದ್ದರೆ ಬೇರೆ ಪಕ್ಷದಿಂದ ಗೆಲ್ಲು,  ಸುಧಾಕರ್‌ಗೆ ವಿಶ್ವನಾಥ್‌ ಸವಾಲ್

ಸಾರಾಂಶ

ನೀವು ಸಚಿವರಾಗಿದ್ದಾಗ ತೋರಿದ ದುರಹಂಕಾರ, ಶಾಸಕರು, ಮಂತ್ರಿಗಳ ಕರೆ ಸ್ವೀಕರಿಸದಿರುವುದು, ಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನು ಮನೆ ಬಾಗಿಲಿಗೆ ಸೇರಿಸದ ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಕ್ಷೇತ್ರದಲ್ಲಿ ಸೋಲು ಅನುಭವಿಸಿದಿರಿ' ಎಂದೂ ಅವರು ವಾಗ್ದಾಳಿ ನಡೆಸಿದ  ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ 

ಬೆಂಗಳೂರು(ಜ.31):  'ನೀನು ಯಾವತ್ತಿದ್ದರೂ ಪಕ್ಷ ಬಿಟ್ಟು ಹೋಗುವವನೇ. ಹೋಗುವುದಾದರೆ ಹೋಗು. ಪಕ್ಷ ಶುದ್ಧವಾಗಲಿ. ಒಂದು ಕಾಲು ಹೊರಗಿರಿಸಿ ರಾಜಕೀಯ ಮಾಡುತ್ತಿದ್ದೀಯ. ತಾಕತ್ ಇದ್ದರೆ ಬಿಜೆಪಿ ಬಿಟ್ಟು ಬೇರೆ ಪಕ್ಷದಿಂದ ಸ್ಪರ್ಧಿಸಿ ಗೆದ್ದು ತೋರಿಸು' ಎಂದು ಚಿಕ್ಕಬಳ್ಳಾಪುರದ ಸಂಸದ ಡಾ.ಕೆ.ಸುಧಾಕರ್ ಅವರ ವಿರುದ್ಧ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಏಕವಚನದಲ್ಲೇ ಅಬ್ಬರಿಸಿದ್ದಾರೆ. 

'ನೀವು ಸಚಿವರಾಗಿದ್ದಾಗ ತೋರಿದ ದುರಹಂಕಾರ, ಶಾಸಕರು, ಮಂತ್ರಿಗಳ ಕರೆ ಸ್ವೀಕರಿಸದಿರುವುದು, ಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನು ಮನೆ ಬಾಗಿಲಿಗೆ ಸೇರಿಸದ ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಕ್ಷೇತ್ರದಲ್ಲಿ ಸೋಲು ಅನುಭವಿಸಿದಿರಿ' ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ. 

ನಮ್ಮನ್ನು ಸಮಾಧಿ ಮಾಡಲು ವಿಜಯೇಂದ್ರ ಹೊರಟಿದ್ದಾರೆ: ಬಿವೈವಿ ವಿರುದ್ಧ ತಿರುಗಿ ಬಿದ್ದ ಸುಧಾಕರ್‌

ಗುರುವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ಹಾಗೂ ನಾಯಕರ ಬಗ್ಗೆ ಮಾತನಾಡುವಾಗ ಹುಷಾ‌ರ್ ಎಂದು ಸುಧಾಕರ್‌ ಅವರಿಗೆ ನೇರವಾಗಿ ಎಚ್ಚರಿಕೆ ನೀಡಿದರು. ಸುಧಾಕರ್‌ ಅವರು ಬಿಜೆಪಿರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ದುರಹಂಕಾರಿ, ಸರ್ವಾಧಿಕಾರಿ ಪದ ಬಳಸಿದ್ದಾರೆ. ಪರೋಕ್ಷವಾಗಿ ನನ್ನ ಯಲಹಂಕ ಕ್ಷೇತ್ರ ಹಾಗೂ ಕಾರ್ಯಕರ್ತರ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ನಾನು ಮಾತನಾಡುವ ಅನಿವಾರ್ಯತೆ ಎದುರಾಗಿದೆ ಎಂದರು.
ಎರಡೆರಡುಖಾತೆಪಡೆದು, ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತೆಗೆದುಕೊಂಡರೂ ಕಳೆದವಿಧಾನಸಭಾಚುನಾವಣೆಯಲ್ಲಿ ಯಾಕೆ ಸೋತಿರಿ? ಪಕ್ಷದ ವರಿಷ್ಠರು, ರಾಷ್ಟ್ರೀಯ ನಾಯ ಕರು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ನಾವು ಆ ಸ್ಥಾನಕ್ಕೆ ಗೌರವ ಕೊಡಬೇಕು. ನನಗೂ ಸೇರಿ ಕೆಲವರಿಗೆ ರಾಜ್ಯಾಧ್ಯಕ್ಷರ ಮೇಲೆ ಸಣ್ಣ ಪುಟ್ಟ ಅಸಮಾಧಾನ ಇರಬಹುದು. ಹಾಗಂತ ಬಹಿರಂಗವಾಗಿ ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನನ್ನ ಮಗನ ಹೆಸರು ಚಲಾವಣೆಗೆ ಬಂದಿತು. ನಾನೇನು ಟಿಕೆಟ್ ಕೊಡಿ ಎಂದು ಕೇಳಿರಲಿಲ್ಲ. ನಿಮಗೆ ಟಿಕೆಟ್ ಸಿಗುವುದಿಲ್ಲ ಎಂದು ನೀವು ಏನೆಲ್ಲಾ ಮಾತನಾಡಿದಿರಿ? ಕೊನೆಗೆ, ಪಕ್ಷದ ವರಿಷ್ಠರು ತೀರ್ಮಾನಿಸಿ ನಿಮಗೆ ಟಿಕೆಟ್ ಕೊಟ್ಟರು. ಈ ನಡುವೆ ನೀವು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮಾತುಕತೆ ಮಾಡಿದ್ದು ಸುಳ್ಳೇ? ನೀವು ಕಾಂಗ್ರೆಸ್‌ನವರನ್ನು ಸಂಪರ್ಕಿಸಿರಲಿಲ್ಲ ಎಂದು ಪ್ರಮಾಣ ಮಾಡಿ, ನಾನೂ ಪ್ರಮಾಣ ಮಾಡುತ್ತೇನೆ. ಆಗ ನಿಮ್ಮ ಪಕ್ಷ ನಿಷ್ಠೆ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದರು.

ಆಂತರಿಕ ಪ್ರಜಾಪ್ರಭುತ್ವ ಇದೆ: 

ಸುಧಾಕರ್‌ ಅವರೇ ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಜಿಲ್ಲಾಧ್ಯಕ್ಷರ ನೇಮಕದ ವೇಳೆ ಕ್ಷೇತ್ರದ ಉಸ್ತುವಾರಿ, ಸಹ ಉಸ್ತುವಾರಿ, ಎಂಟು ಮಂಡಲದ ಅಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಿ ಮೂರು ಹೆಸರುಗಳನ್ನು ವರಿಷ್ಠರಿಗೆ ಕಳುಹಿಸಲಾಗಿತ್ತು. ಅದರಂತೆ ಈಗ ಸಂದೀಪ್ ರೆಡ್ಡಿಯನ್ನು ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿದೆ. ಸಂದೀಪ್ ರೆಡ್ಡಿ ನನ್ನ ಹಿಂಬಾಲಕ ಅಲ್ಲ. ನಿನ್ನ ಸಂಬಂಧಿಕ ಎಂದು ತಿರುಗೇಟು ನೀಡಿದರು.

ಅಭಿವೃದ್ಧಿ ಮರೆತ ಸರ್ಕಾರದಿಂದ ಬರೀ ಮುಖ್ಯಮಂತ್ರಿ ಬದಲಾವಣೆ ಚರ್ಚೆ: ಸುಧಾಕರ್ ವಾಗ್ದಾಳಿ

ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹತಾಶೆಯಾಗಿ ಪಕ್ಷ ಹಾಗೂ ನಾಯಕರ ಬಗ್ಗೆ ಬಹಿರಂಗ ಚರ್ಚೆ ಮಾಡುವುದು ತಪ್ಪು. ಅಸಮಾಧಾನ ಇದ್ದರೆ ನೇರವಾಗಿ ರಾಜ್ಯಾಧ್ಯಕ್ಷರನ್ನೇ ಕೇಳಿ. ಈಗ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಸಂದೀಪ್‌ ರೆಡ್ಡಿನನ್ನ ಶಿಷ್ಯ ಅಲ್ಲ. ಬಿಜೆಪಿ ಶಿಷ್ಯ. ಐದಾರು ತಿಂಗಳು ಆತನೊಂದಿಗೆ ಕೆಲಸಮಾಡಿ, ಸರಿ ಕಾಣಿಸದಿದ್ದರೆ ರಾಜ್ಯದ ನಾಯಕರು, ವರಿಷ್ಠರ ಗಮನಕ್ಕೆ ತರಬೇಕು. ಪಕ್ಷದ ತೀರ್ಮಾನದ ವಿರುದ್ಧ ಮಾತನಾಡು ವುದು ಸರಿಯಲ್ಲ ಎಂದರು.

ಸುಧಾಕರ್ ಪಕ್ಷದ ವಿರುದ್ಧ ಮಾತನಾಡಿ ಡ್ಯಾಮೇಜ್ ಮಾಡಬೇಡ. ಇಷ್ಟ ಇದ್ದರೆ ಪಕ್ಷದಲ್ಲಿ ಇರು. ಇಲ್ಲವಾದರೆ ಪಕ್ಷ ಬಿಟ್ಟು ಹೋಗು. ನಿನ್ನಂತಹ ಲಕ್ಷಾಂತರ ಮಂದಿ ಬಿಜೆಪಿ ಪಕ್ಷದಲ್ಲಿದ್ದಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!