ಅಸೆಂಬ್ಲಿ ಚುನಾವಣೆ ಮುನ್ನ ಸಿದ್ದರಾಮಯ್ಯ ಜೈಲಿಗೆ: ನಳಿನ್‌ ಕುಮಾರ್‌ ಕಟೀಲ್‌

By Govindaraj S  |  First Published Jan 3, 2023, 2:00 AM IST

ಸುಳ್ಳು ದೂರು ನೀಡಿದ ಕಾರಣಕ್ಕೆ ಈಗಾಗಲೇ ಗುತ್ತಿಗೆದಾರ ಕೆಂಪಣ್ಣರನ್ನು ಬಂಧಿಸಲಾಗಿದೆ. ಮುಂದಿನ ಚುನಾವಣೆ ಮೊದಲು ಸಿದ್ದರಾಮಯ್ಯ ಕೂಡ ಜೈಲಿನಲ್ಲಿರುತ್ತಾರೆ. ಅವರ ಎಲ್ಲ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ, ನೋಡುತ್ತಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.


ಮಂಗಳೂರು (ಜ.03): ಸುಳ್ಳು ದೂರು ನೀಡಿದ ಕಾರಣಕ್ಕೆ ಈಗಾಗಲೇ ಗುತ್ತಿಗೆದಾರ ಕೆಂಪಣ್ಣರನ್ನು ಬಂಧಿಸಲಾಗಿದೆ. ಮುಂದಿನ ಚುನಾವಣೆ ಮೊದಲು ಸಿದ್ದರಾಮಯ್ಯ ಕೂಡ ಜೈಲಿನಲ್ಲಿರುತ್ತಾರೆ. ಅವರ ಎಲ್ಲ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ, ನೋಡುತ್ತಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. 

ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲಾ ಮಟ್ಟದ ‘ಬಿಜೆಪಿ ಬೂತ್‌ ವಿಜಯ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಶೇ.40 ಪರ್ಸೆಂಟ್‌ ಸರ್ಕಾರ ಎಂದು ಆರೋಪಿಸಿದ ಸಿದ್ದರಾಮಯ್ಯರ ಏಜೆಂಟ್‌ ಕೆಂಪಣ್ಣ ಕೇಸ್‌ ಹಾಕಿದರು, ಗಲಾಟೆ ಮಾಡಿದರು. ಈ ಬಗ್ಗೆ ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ನಾವು ಹೇಳಿದೆವು. ಅಂಥ ದಾಖಲೆ ಇದ್ದರೆ ಯಾರೇ ಪ್ರಭಾವಿ ಶಾಸಕ, ಸಚಿವನಾದರೂ ಕಿತ್ತೆಸೆಯುತ್ತೇವೆ ಎಂದು ಹೇಳಿದ್ದೆವು. ಆದರೆ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಅಥವಾ ಸಿದ್ದರಾಮಯ್ಯನವರು ಈ ಬಗ್ಗೆ ಗಲಾಟೆ ಮಾಡಿಲ್ಲ, ಲೋಕಾಯುಕ್ತಕ್ಕೆ ದೂರು ನೀಡಿಲ್ಲ ಎಂದರು.

Tap to resize

Latest Videos

ಶಿರಾಡಿ ಘಾಟ್ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 1976 ಕೋಟಿ ಬಿಡ್ ಆಹ್ವಾನ: ನಳಿನ್ ಕಟೀಲ್‌ಗೆ ನಿತಿನ್ ಗಡ್ಕರಿ ಪತ್ರ

ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಕಾಂಗ್ರೆಸ್‌ ಭ್ರಷ್ಟಾಚಾರದ ಪಿತಾಮಹ, ಭಯೋತ್ಪಾದಕರ ಪಕ್ಷ. ಅಡಕೆ ಹಾನಿಕಾರ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದೇ ಕಾಂಗ್ರೆಸ್‌. ಈಗ ಅಡಕೆ ಬೆಳೆಗಾರರ ಪರ ಹೋರಾಟ ಮಾಡುವ ನಾಟಕವಾಡುತ್ತಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಮೂರು ಹೋಳು: ಡಿಕೆಶಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ಮೂರು ತುಂಡಾಗಿದೆ. ಆದರೆ ನಳಿನ್‌ ಕುಮಾರ್‌ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಒಂದೇ ಆಗಿದೆ. ಕಾಂಗ್ರೆಸ್‌ ರಾಜ್ಯದಲ್ಲಿ ಒಡೆದು ಹೋಗಿದೆ, ಬಿಜೆಪಿ ಮನೆ, ಮನಗಳನ್ನ ಕಟ್ಟುತ್ತಿದೆ. ಕಲಬುರಗಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಅಂಗಡಿ ಬಂದ್‌ ಆಗಿದೆ, ಹಾಗಾಗಿ ಪ್ರಿಯಾಂಕ್‌ ಖರ್ಗೆ ಬಾಯಿ ಓಪನ್‌ ಆಗಿದೆ ಎಂದರು.

ಕಾಂಗ್ರೆಸ್‌ ಭ್ರಷ್ಟಾಚಾರಿಗಳ, ಭಯೋತ್ಪಾದಕರ ಪಕ್ಷ: ನಳಿನ್‌ ಕುಮಾರ್‌ ಕಟೀಲ್‌

ಶರ್ಟ್‌ ಹೊಲಿಸಿದ ನಾಯಕರು!: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಮುಖ್ಯಮಂತ್ರಿ ಶರ್ಟ್‌ ಹೊಲಿಸಿದ್ದಾರೆ. ದ.ಕ ಜಿಲ್ಲೆಯಲ್ಲೂ ಯು.ಟಿ.ಖಾದರ್‌, ರಮಾನಾಥ್‌ ರೈ, ಲೋಬೋ ಸಚಿವರಾಗಲು ಶರ್ಟ್‌ ಹೊಲಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಪುಸ್ತಕ ಮಾಡಲು ಜನ ಸಿಗುವುದಿಲ್ಲ, ಆದರೆ ಬಿಜೆಪಿಯಲ್ಲಿ ಪೇಜ್‌ಗೊಬ್ಬರು ಪ್ರಮುಖರು ಸಿಗುತ್ತಾರೆ. ಕಾಂಗ್ರೆಸ್‌ಗೆ ಬೂತ್‌ಗೆ ಒಬ್ಬನೇ ಒಬ್ಬ ಹಿಂದೂ ಸಿಗುವುದಿಲ್ಲ ಎಂದರು.

click me!