* ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ ಆಗುವುದಕ್ಕೂ ಲಾಯಕ್ ಅಲ್ಲ
* ಕಟೀಲ್ ರಾಜಕೀಯವಾಗಿ ನಮ್ಮ ವಿರೋಧಿ. ಅವರು ಹೇಳಿದ್ದೆಲ್ಲ ಸತ್ಯ ಎಂದು ನಾವು ನಂಬಬೇಕಾ?
* ಕಟೀಲ್ ಪ್ರಬುದ್ಧ ರಾಜಕಾರಣಿಯೂ ಅಲ್ಲ
ಬೆಳಗಾವಿ(ಜೂ.08): ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್ ಅಭ್ಯರ್ಥಿ ಪರವಾಗಿದ್ದರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಕಿಡಿಕಾರಿದ್ದಾರೆ.
ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ ಆಗುವುದಕ್ಕೂ ಲಾಯಕ್ ಅಲ್ಲ, ಅವರು ಪ್ರಬುದ್ಧ ರಾಜಕಾರಣಿಯೂ ಅಲ್ಲ ಎಂದು ಆರೋಪಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅಧ್ಯಕ್ಷ ಕಟೀಲ್ ರಾಜಕೀಯವಾಗಿ ನಮ್ಮ ವಿರೋಧಿ. ಅವರು ಹೇಳಿದ್ದೆಲ್ಲ ಸತ್ಯ ಎಂದು ನಾವು ನಂಬಬೇಕಾ? ಕಟೀಲ್ ಆಧಾರರಹಿತ ಆರೋಪ ಮಾಡುತ್ತಾರೆ, ಸುಳ್ಳು ಹೇಳುತ್ತಾರೆ. ಅವರು ಬಿಜೆಪಿ ಅಧ್ಯಕ್ಷ ಆಗಲೂ ಲಾಯಕ್ ಅಲ್ಲ. ಬಾಯಿಗೆ ಏನೇನು ಬರುತ್ತೋ ಅದನ್ನೇ ಮಾತನಾಡುತ್ತಾರೆ. ಅವರ ಮಾತು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಏಕೆಂದರೆ ಕಟೀಲ್ ಪ್ರಬುದ್ಧ ರಾಜಕಾರಣಿಯೂ ಅಲ್ಲ ಎಂದರು.
ಸಿದ್ದು- ಬಿಎಸ್‌ವೈ ಭೇಟಿ ವಿಡಿಯೋ ಬಹಿರಂಗ ಯಾವ ಸಂದೇಶಕ್ಕಾಗಿ?: ಎಚ್‌ಡಿಕೆ
ನಮ್ಮ ಪಕ್ಷದಲ್ಲಿ ಎಲ್ಲರೂ ಒಪ್ಪಿಕೊಂಡೇ ಎರಡನೇ ಅಭ್ಯರ್ಥಿ ಹಾಕಲಾಗಿದೆ. ಖರ್ಗೆ ಅವರು ಜೆಡಿಎಸ್ ಅಭ್ಯರ್ಥಿ ಬೆಂಬಲಿಸಿದ್ದಾರೆಂಬುದೆಲ್ಲ ಸುಳ್ಳು ಎಂದರು.