ಸಿದ್ದು- ಬಿಎಸ್‌ವೈ ಭೇಟಿ ವಿಡಿಯೋ ಬಹಿರಂಗ ಯಾವ ಸಂದೇಶಕ್ಕಾಗಿ?: ಎಚ್‌ಡಿಕೆ

By Kannadaprabha News  |  First Published Jun 8, 2022, 8:02 AM IST

*  ಜಾತ್ಯತೀತ ಅಸ್ಮಿತೆ ಕಾಪಾಡಬೇಕಾದರೆ ಅಲ್ಪಸಂಖ್ಯಾತ ಅಭ್ಯರ್ಥಿ ಬೆಂಬಲಿಸಬೇಕು 
*  ಅಸ್ಮಿತೆ ಉಳಿಸುವ ಕಾರ್ಯವನ್ನು ಅವರೇ ಗುತ್ತಿಗೆ ಪಡೆದಿದ್ದೀರಾ? 
*  ಯಾರ ಕಡೆಯಿಂದ ಆ ವಿಡಿಯೋ ಬಿಡುಗಡೆಯಾಗಿದೆ? 


ಮೈಸೂರು(ಜೂ.08): ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜತೆಗಿನ ಭೇಟಿಗೆ ಸಂಬಂಧಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

ಯಾವ ಸಂದೇಶ ನೀಡಲು ಆ ವಿಡಿಯೋ ಹಾಕಿಸಿದ್ದೀರಿ? ಎಂದು ಕಾಲೆಳೆದಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಮಾನ ನಿಲ್ದಾಣದ ವಿಐಪಿ ಕೊಠಡಿಯಲ್ಲಿ ಯಡಿಯೂರಪ್ಪ ಹಾಗೂ ನೀವು ಕುಳಿತು ಮಾತನಾಡುತ್ತಿರುವ ವಿಡಿಯೋ ಬಿಡುಗಡೆಯಾಗಿದೆ. ಯಾವ ಉದ್ದೇಶಕ್ಕೆ, ಯಾರ ಕಡೆಯಿಂದ ಆ ವಿಡಿಯೋ ಬಿಡುಗಡೆಯಾಗಿದೆ? ಯಾವ ಸಂದೇಶ ನೀಡಲು ಆ ವಿಡಿಯೋ ಹಾಕಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ನನ್ನ ಪಕ್ಷ ಉಳಿಸುವ ಕೆಲಸ ನಿಮಗೆ ಬೇಡ. ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಕಾಂಗ್ರೆಸ್‌ ಪಕ್ಷವನ್ನು ಉಳಿಸಲು ಶ್ರಮಿಸಿ. 2023ಕ್ಕೆ ಆ ಋುಣವನ್ನು ತೀರಿಸಿಕೊಳ್ಳಿ ಎಂದಿದ್ದಾರೆ.

Latest Videos

undefined

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್​ಗೆ ಓಪನ್ ಆಫರ್​ ಕೊಟ್ಟ ಕುಮಾರಸ್ವಾಮಿ

ನಿಮ್ಮ ಬುರುಡೆ ಭಾಷಣ ಕೇಳಿ ಯಾರೂ ಮತ ನೀಡುವುದಿಲ್ಲ. ಬಿಜೆಪಿ ನಿರ್ಮೂಲನೆ ಮಾಡಬೇಕಾದರೆ ಸಿದ್ದರಾಮಯ್ಯ ಅವರು ಸಂಕುಚಿತ ಮನೋಭಾವ, ಕಲ್ಮಶದಿಂದ ಹೊರ ಬರಬೇಕು. ಹೊಸ ರಾಜಕಾರಣ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಜಾತ್ಯತೀತ ಅಸ್ಮಿತೆ ಕಾಪಾಡಬೇಕಾದರೆ ಅಲ್ಪಸಂಖ್ಯಾತ ಅಭ್ಯರ್ಥಿ ಬೆಂಬಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಸ್ಮಿತೆ ಉಳಿಸುವ ಕಾರ್ಯವನ್ನು ಅವರೇ ಗುತ್ತಿಗೆ ಪಡೆದಿದ್ದೀರಾ? ನಾವೇನು ಅವರ ಗುಲಾಮರೇ? ಬಿಜೆಪಿ 105 ಸ್ಥಾನ ಗೆಲ್ಲಲು ಸಿದ್ದರಾಮಯ್ಯ ಕಾರಣರಲ್ಲವೇ? ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಬಿಂಬಿಸಲು ಹೋಗಿ 70 ಸ್ಥಾನಗಳಿಗೆ ಬಂದು ನಿಂತಿದ್ದೀರಿ. ನಿಜವಾದ ಬಿ ಟೀಂ ನಾಯಕ ಯಾರು ಎಂಬುದು ಜೂ.10 ರಂದು ಬಹಿರಂಗವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

click me!