ನಾಗಠಾಣ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ: ಜೆಡಿಎಸ್‌ ಅಭ್ಯರ್ಥಿ ದೇವಾನಂದ ಚವ್ಹಾಣ

By Kannadaprabha News  |  First Published May 8, 2023, 2:00 AM IST

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ. ಬಿಜೆಪಿ ಅಭ್ಯರ್ಥಿ ಮಹಾರಾಷ್ಟ್ರ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಯಾವ ಗ್ರಾಮ, ಹಳ್ಳಿ ಬರುತ್ತದೆ ಎಂಬ ಅರಿವೂ ಬಿಜೆಪಿ ಅಭ್ಯರ್ಥಿಗಿಲ್ಲ. ಹೀಗಾಗಿ ಜನತೆ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದ ಡಾ.ದೇವಾನಂದ ಚವ್ಹಾಣ. 


ವಿಜಯಪುರ(ಮೇ.08): ಬಿಜೆಪಿ ಅಭ್ಯರ್ಥಿಗಳಿಗೆ ಹಳ್ಳಿಗಳ ಮಾಹಿತಿ ಇಲ್ಲ, ಕಾರ್ಯಕರ್ತರ ಪರಿಚಯವೂ ಇಲ್ಲ, ಮಹಾರಾಷ್ಟ್ರ ವ್ಯಾಪ್ತಿಯ ನಂದೂರ ಗ್ರಾಮಕ್ಕೆ ಹೋಗಿ ಬಿಜೆಪಿ ಅಭ್ಯರ್ಥಿ ಪ್ರಚಾರ ಮಾಡಿದ್ದಾರೆ ಎಂದು ಶಾಸಕ, ನಾಗಠಾಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಾ.ದೇವಾನಂದ ಚವ್ಹಾಣ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ. ಬಿಜೆಪಿ ಅಭ್ಯರ್ಥಿ ಮಹಾರಾಷ್ಟ್ರ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಯಾವ ಗ್ರಾಮ, ಹಳ್ಳಿ ಬರುತ್ತದೆ ಎಂಬ ಅರಿವೂ ಬಿಜೆಪಿ ಅಭ್ಯರ್ಥಿಗಿಲ್ಲ. ಹೀಗಾಗಿ ಜನತೆ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಗಠಾಣ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಪರ ಅಲೆ ಪ್ರಬಲವಾಗಿದೆ. 2018ರ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ನಿಶ್ಚಿತ. ಜನಾಶೀರ್ವಾದವೇ ನನ್ನ ಮೇಲಿದೆ. ಕಾಂಗ್ರೆಸ್‌ ಪಕ್ಷ ಈಗಾಗಲೇ ವಾರಂಟಿ ಮುಗಿದಿದೆ, ಹೀಗಾಗಿ ಅವರ ಗ್ಯಾರಂಟಿಗೆ ಯಾವ ಮಾನ್ಯತೆಯೂ ಇಲ್ಲ, ಕಾಂಗ್ರೆಸ್‌ ಅಭ್ಯರ್ಥಿಗೆ ಕಾರ್ಯಕರ್ತರ ಬಲವೇ ಇಲ್ಲ ಎಂದರು.

Tap to resize

Latest Videos

ಬಜರಂಗದಳ ನಿಷೇಧದ ಕಾಂಗ್ರೆಸ್‌ ಪ್ರಣಾಳಿಕೆಗೆ ರಮ್ಯಾ ಆಕ್ಷೇಪ

ಕಳೆದ ಐದು ವರ್ಷಗಳ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಪ್ರಗತಿಗಾಗಿ, ಜನಸೇವೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಮಹಾತ್ಮರ ಸಿದ್ಧಾಂತಗಳನ್ನು ಆಧರಿಸಿ ಕಾರ್ಯ ನಿರ್ವಹಿಸಿದ್ದೇನೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಕಷÜು್ಟಅನುದಾನ ತಂದು ಅಭಿವೃದ್ಧಿಗೆ ವೇಗ ನೀಡಿದೆ. ಐತಿಹಾಸಿಕ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಅನುದಾನವನ್ನು ಸಮ್ಮಿಶ್ರ ಸರ್ಕಾರದಲ್ಲಿ ಮೀಸಲಿರಿಸಿದ ಪರಿಣಾಮ ಯೋಜನೆಗೆ ಚಾಲನೆ ದೊರಕಿದೆ ಎಂದು ಹೇಳಿದರು.

ಗೆದ್ದರೆ ಮಂತ್ರಿಗಿರಿ ಭರವಸೆ:

ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಜನತೆ ಒಲವು ಸಹ ಜೆಡಿಎಸ್‌ ಮೇಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಾಗಠಾಣ ಕ್ಷೇತ್ರನಲ್ಲಿ ನನ್ನನ್ನು ಗೆಲ್ಲಿಸಿದರೆ ಮಂತ್ರಿ ಸ್ಥಾನ ನೀಡುವುದಾಗಿ ಕುಮಾರಣ್ಣ ನೀಡಿರುವ ಭರವಸೆಯಿಂದ ಜನತೆಯ ಉತ್ಸಾಹ ಇಮ್ಮಡಿಯಾಗಿದೆ ಎಂದರು.

ಉಮರಾಣಿ ಬಾಂದಾರ್‌ ನಿರ್ಮಾಣ, 110 ಕೆವಿ ಸಾಮರ್ಥ್ಯದ 9 ವಿದ್ಯುತ್‌ ವಿತರಣಾ ಕೇಂದ್ರ, ಶಾಲಾ ಕೊಠಡಿಗಳ ನಿರ್ಮಾಣ, ಅಂಗನವಾಡಿ ಕೇಂದ್ರಗಳ ನಿರ್ಮಾಣ-ರಾಜ್ಯದಲ್ಲೇ ಅತಿ ಹೆಚ್ಚು ರಸ್ತೆಗಳನ್ನು ಅಭಿವೃದ್ಧಿಗೊಳಿಸಿದೆ ಹೆಮ್ಮೆ ಇದೆ. ಇದು ಸಾಧ್ಯವಾಗಿದ್ದು ಜನತೆಯ ಆಶೀರ್ವಾದ ಬಲದಿಂದ ಮಾತ್ರ ಎಂದರು.

ಪಂಚಮಸಾಲಿ ಸಮಾಜ ಬಿಜೆಪಿ ಬೆಂಬಲಿಸಲಿ: ಯತ್ನಾಳ

ಕೋವಿಡ್‌ ಸಂಕಷ್ಟದ ಕಾಲಘಟ್ಟದಲ್ಲಿಯೂ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಸೇವೆಯನ್ನು ಕರ್ತವ್ಯ ಎಂದು ಪರಿಭಾವಿಸಿ ಜನರ ಸೇವೆ ಮಾಡಿದ್ದೇನೆ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಮಹಾರಾಷ್ಟ್ರ, ಗೋವಾ ಮೊದಲಾದ ರಾಜ್ಯಗಳಲ್ಲಿ ಸಿಲುಕಿದ ಜನರಿಗೆ ನೆರವಾಗಿದ್ದೇನೆ. ಅವರನ್ನು ವಾಪಾಸ್ಸು ಕರೆ ತರುವಲ್ಲಿ ಸೇವೆ ಸಲ್ಲಿಸಿದ್ದೇನೆ. ಭೀಮಾ ಪ್ರವಾಹ ಸಂದರ್ಭದಲ್ಲಿ ಖುದ್ದಾಗಿ ಸಂತ್ರಸ್ತರ ಜತೆಗಿದ್ದು ಅವರಿಗೆ ನೆರವಾಗಿ ಅವರ ಸ್ಥಳಾಂತರಕ್ಕಾಗಿ ದುಡಿದಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಮುಂದೆಯೂ ಇದೇ ರೀತಿಯ ಸೇವೆ ಮಾಡುವ ಅವಕಾಶ ಕೊಡಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಾನಪ್ಪ ಶಿರೂರ, ಸುರೇಶ ಸೇರಿದಂತೆ ಮುಂತಾದವರು ಇದ್ದರು.

ನಾಗಠಾಣ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಪರ ಅಲೆ ಪ್ರಬಲವಾಗಿದೆ. 2018ರ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ನಿಶ್ಚಿತ. ಜನಾಶೀರ್ವಾದವೇ ನನ್ನ ಮೇಲಿದೆ. ಕಾಂಗ್ರೆಸ್‌ ಪಕ್ಷ ಈಗಾಗಲೇ ವಾರಂಟಿ ಮುಗಿದಿದೆ, ಹೀಗಾಗಿ ಅವರ ಗ್ಯಾರಂಟಿಗೆ ಯಾವ ಮಾನ್ಯತೆಯೂ ಇಲ್ಲ, ಕಾಂಗ್ರೆಸ್‌ ಅಭ್ಯರ್ಥಿಗೆ ಕಾರ್ಯಕರ್ತರ ಬಲವೇ ಇಲ್ಲ ಅಂತ ನಾಗಠಾಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಾ.ದೇವಾನಂದ ಚವ್ಹಾಣ ತಿಳಿಸಿದ್ದಾರೆ. 

click me!