ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು. ಯಾವುದೋ ಇತಿಹಾಸ ತಿರುಚುವುದು ಬಿಜೆಪಿ ಕೆಲಸ. ಅವರ ಅಧಿಕಾರವಧಿಯಲ್ಲಿ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಅದಕ್ಕಾಗಿ ಉರಿಗೌಡ-ನಂಜೇಗೌಡರ ವಿಚಾರವನ್ನು ಚರ್ಚೆಗೆ ತಂದಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಟೀಕಿಸಿದರು.
ಮದ್ದೂರು (ಮಾ.21): ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು. ಯಾವುದೋ ಇತಿಹಾಸ ತಿರುಚುವುದು ಬಿಜೆಪಿ ಕೆಲಸ. ಅವರ ಅಧಿಕಾರವಧಿಯಲ್ಲಿ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಅದಕ್ಕಾಗಿ ಉರಿಗೌಡ-ನಂಜೇಗೌಡರ ವಿಚಾರವನ್ನು ಚರ್ಚೆಗೆ ತಂದಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಟೀಕಿಸಿದರು. ತಾಲೂಕಿನ ಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉರಿಗೌಡ ನಂಜೇಗೌಡ ಪ್ರಸ್ತಾಪ ಬೇಡ ಎಂಬ ಚುಂಚನಗಿರಿ ಸ್ವಾಮೀಜಿ ಅವರ ಹೇಳಿಕೆ ಸರಿಯಾಗಿದೆ. ಇತಿಹಾಸವನ್ನು ಯಾರೂ ತಿರುಚಬಾರದು. ಅದರಿಂದ ಸಮಾಜಕ್ಕೆ ಕೆಟ್ಟಸಂದೇಶ ರವಾನೆಯಾಗುತ್ತದೆ. ಚಿತ್ರ ನಿರ್ಮಾಣ ಕೈಬಿಟ್ಟಿರುವುದು ಸಮಯೋಚಿತ ನಿರ್ಧಾರವಾಗಿದೆ ಎಂದರು.
ಜೆಡಿಎಸ್ ಮತ್ತು ಬಿಜೆಪಿಯವರು ಐದು ವರ್ಷ ರಾಜ್ಯದಲ್ಲಿ ಕೆಟ್ಟಆಡಳಿತ ನೀಡಿದ್ದಾರೆ. ಬಿಜೆಪಿಯವರು ಚುನಾವಣೆಗೆ ಬರುವುದಕ್ಕೆ ನೈತಿಕ ಹಕ್ಕಿಲ್ಲ. ಅವರಲ್ಲಿ ನಾಯಕತ್ವದ ಕೊರತೆ ಇದೆ. ಯಡಿಯೂರಪ್ಪ ಅವರನ್ನು ದೂರವಿಟ್ಟಮೇಲೆ ರಾಜ್ಯದೊಳಗೆ ಬಿಜೆಪಿ ನಾಯಕತ್ವ ಕುಗ್ಗಿದೆ ಎಂದರು. ಮೋದಿ, ಅಮಿಶ್ ಶಾ ಅವರನ್ನು ರಾಜ್ಯ ನಾಯಕತ್ವದಲ್ಲಿ ಜನರು ಒಪ್ಪುವುದಿಲ್ಲ. ಇದಕ್ಕಾಗಿ ಬಿಜೆಪಿ ಉರಿಗೌಡ ನಂಜೇಗೌಡ ತರಹದ ಗೊಂದಲವನ್ನು ಮೂಡಿಸುತ್ತಿದ್ದಾರೆ. ಅವರ ಸರ್ವೇ ಪ್ರಕಾರ ರಾಜ್ಯದಲ್ಲಿ 60 ಸ್ಥಾನ ಬರುತ್ತಿಲ್ಲ. ಅದಕ್ಕೆ ಚುನಾವಣೆ ಒಳಗೆ ಏನಾದರೂ ಗೊಂದಲ ಸೃಷ್ಟಿಸಬೇಕೆಂಬ ಕಾರಣಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದರು.
ದೊಡ್ಡ ರಾಜ್ಯಗಳಲ್ಲೇ ಕಾಂಗ್ರೆಸ್‌ಗೆ ಅಡ್ರೆಸ್ ಇಲ್ಲ, ಅವರಿಗೆ ನಾಚಿಕೆ ಆಗಬೇಕು: ಬಿ.ಎಸ್.ಯಡಿಯೂರಪ್ಪ
ಸಿದ್ದರಾಮಯ್ಯಗೆ ಕ್ಷೇತ್ರ ಸಿಗುತ್ತಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ನೂರು ಕ್ಷೇತ್ರವಿದೆ. ಆದರೆ, ಕೆಲವರಿಗೆ ಒಂದೆರೆಡು ಕ್ಷೇತ್ರವಿರುತ್ತದೆ. ಎಲ್ಲಿಂದ ಸ್ಪರ್ಧಿಸಬೇಕೆಂಬ ಆಯ್ಕೆಯನ್ನು ಹೈಕಮಾಂಡ್ ಸಿದ್ದರಾಮಯ್ಯನವರ ತೀರ್ಮಾನಕ್ಕೆ ಬಿಟ್ಟಿದೆ. ನೀವು ಎಲ್ಲಾದರು ನಿಲ್ಲಬಹುದು ಎಂದು ಮುಕ್ತ ಸ್ವಾತಂತ್ರ್ಯ ನೀಡಿದೆ. ಬಾದಾಮಿಯಲ್ಲಿಯೂ ಹಂಡ್ರೆಂಡ್ ಪರ್ಸೆಂಟ್ ಗೆಲ್ಲುವ ರಿಪೋರ್ಚ್ ಬಂದಿದೆ. ಬಾದಾಮಿ ಜನರು ಬಹಳಷ್ಟುಒತ್ತಾಯ ಮಾಡುತ್ತಿರುವುದರಿಂದ ಯೋಚನೆ ಮಾಡಿ ಎಂದಿದೆ. ಮೈಸೂರು-ಚಾಮರಾಜನಗರ ಜನ ವರುಣಾಕ್ಕೆ ಬನ್ನಿ ಎನ್ನುತ್ತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಜನರು ಕೋಲಾರಕ್ಕೆ ಬನ್ನಿ ಎನ್ನುತ್ತಿದ್ದಾರೆ. ಹಾಗಾಗಿ ನಮ್ಮ ಹೈಕಮಾಂಡ್ ನೀವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಅಪೇಕ್ಷೆ ಪಡುವ ಜನರನ್ನು ಬೇಸರ ಮಾಡಬೇಡಿ ಎನ್ನುವ ಸಲಹೆ ಕೊಟ್ಟಿದೆ ಎಂದು ನಯವಾಗಿ ಉತ್ತರಿಸಿದರು.
ಆದಾಯ ಮೀರಿ ಶೇ.216ರಷ್ಟು ಆಸ್ತಿ: ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್ ಅಮಾನತು
ಸಿದ್ದರಾಮಯ್ಯ ಒಂದೆ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂಬ ಮಾಹಿತಿ ಇದೆ. ಆದರೆ, ಎಲ್ಲಿ ನಿಲ್ಲುತ್ತಾರೆ ಎನ್ನುವುದನ್ನು ಯುಗಾದಿ ಹಿಂದೆ ಮುಂದೆ ತಿಳಿಸುತ್ತಾರೆ. ಇದೇ ನಿಮ್ಮ ಕೊನೆ ಚುನಾವಣೆ. ಹಾಗಾಗಿ ವರುಣಾದಿಂದಲೇ ಸ್ಪರ್ಧೆ ಮಾಡುವಂತೆ ಕ್ಷೇತ್ರದ ಜನರು ಹೇಳುತ್ತಿದ್ದಾರೆ. ಹೀಗಾಗಿ ಅವರಿಗೇ ಗೊಂದಲ ಇದೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಸ್ಪರ್ಧೆಗಿಳಿಯಿರಿ. ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಈ ವಿಚಾರವಾಗಿ ಕ್ಷೇತ್ರದ ಮುಖಂಡರು, ನಮ್ಮ ಬಳಿ ಹಾಗೂ ನಮ್ಮ ಪಕ್ಷದ ನಾಯಕರ ಜೊತೆಯೂ ಮಾತನಾಡಿಸಿದ್ದಾರೆ. ಸಿದ್ದರಾಮಯ್ಯನವರ ನಿರ್ಧಾರ ಶೀಘ್ರ ಹೊರಬೀಳಲಿದೆ ಎಂದರು.