ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿದ್ದಂತೆ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಬಿಸಿಲು ಲೆಕ್ಕಿಸದೇ ಲೋಕಸಭಾ ಚುನಾವಣೆ ತಯಾರಿ ಸಕತ್ ಆಗಿ ನಡೆದಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತಿದೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಮಾ.10): ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿದ್ದಂತೆ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಬಿಸಿಲು ಲೆಕ್ಕಿಸದೇ ಲೋಕಸಭಾ ಚುನಾವಣೆ ತಯಾರಿ ಸಕತ್ ಆಗಿ ನಡೆದಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತಿದೆ. ಇತ್ತ ಚುನಾವಣೆ ಆಯೋಗವೂ ಸಹ ಲೋಕಸಭೆ ಚುನಾವಣೆಗಾಗಿ ಎಲ್ಲಾ ರೀತಿಯ ತಯಾರಿ ನಡೆಸಿದೆ. ಇದೇ ತಿಂಗಳು ನಿಂತಿ ಸಂಹಿತೆ ಜಾರಿ ಆಗುವ ಸೂಚನೆ ಸಿಕ್ಕಿದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಹೆಸರಿನ ಪಟ್ಟಿ ಬಿಡುಗಡೆ ಮಾಡುತ್ತಿವೆ. ಬಿಜೆಪಿ ನಾಯಕರು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370ಕ್ಕೂ ಅಧಿಕ ಸ್ಥಾನ ಬರುತ್ತವೆ. 400ಕ್ಕೂ ಅಧಿಕ ಲೋಕಸಭಾ ಕ್ಷೇತ್ರದಲ್ಲಿ ಎನ್ ಡಿಎ ಒಕ್ಕೂಟದ ಅಭ್ಯರ್ಥಿಗಳು ಜಯ ಗಳಿಸುವುದು ಪಕ್ಕ ಅಂತ ಬಿಜೆಪಿ ನಾಯಕರು ಪ್ರಚಾರ ಶುರು ಮಾಡಿದ್ದಾರೆ. ಹೀಗಾಗಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ನಡುವೆ ಬಿಗ್ ಫೈಟ್ ಶುರುವಾಗಿದೆ. ಅದೇ ರೀತಿಯಲ್ಲಿ ರಾಯಚೂರು ಲೋಕಸಭಾ ಟಿಕೆಟ್ ಗಾಗಿ ಭಾರೀ ಕಸರತ್ತು ನಡೆದಿದೆ.
undefined
ಬಿಜೆಪಿ ಟಿಕೆಟ್ ಗಾಗಿ ಮೂವರು ಆಕಾಂಕ್ಷಿಗಳ ನಡುವೆ ಪೈಪೋಟಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ, ನನಗೆ ಬಿಜೆಪಿ ಟಿಕೆಟ್ ಸಿಕ್ಕರೇ ಗೆಲುವು ಗ್ಯಾರಂಟಿ ಅಂತ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆಗಿದೆ. ಹೀಗಾಗಿ ರಾಯಚೂರು- ಯಾದಗಿರಿ ಲೋಕಸಭಾ ಟಿಕೆಟ್ ನೀಡುವಂತೆ ಹಾಲಿ ಮತ್ತು ಮಾಜಿ ಸಂಸದರು ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲು ಶುರು ಮಾಡಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಹೈಕಮಾಂಡ್ ಕೂಡ ಸಂಘ ಪರಿಹಾರ ಮತ್ತು ಖಾಸಗಿಯವರಿಂದ ಕ್ಷೇತ್ರದಲ್ಲಿ ಎರಡು- ಮೂರು ಸುತ್ತಿನ ಸರ್ವೇ ನಡೆಸಿದ್ದು, ಸರ್ವೇಯಲ್ಲಿ ಹಾಲಿ ಸಂಸದರ ವಿರುದ್ಧ ಕೆಲ ಅಪಸ್ವರದ ಮಾತುಗಳು ಕೇಳಿಬಂದಿವೆ. ಹೀಗಾಗಿ ಹಾಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದು ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತ ಮಾಜಿ ಸಂಸದ ಬಿ.ವಿ.ನಾಯಕ ಈಗ ಎಂಪಿ ಟಿಕೆಟ್ ಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರ ಭೇಟಿಗೆ ಮುಂದಾಗಿದ್ದಾರೆ. ಇಡೀ ಕ್ಷೇತ್ರದ ಜನರು ನನಗೆ ಲೋಕಸಭಾ ಚುನಾವಣೆ ಸ್ಪರ್ಧೆ ಮಾಡಿ ಎಂದು ಹೇಳಿದ್ದಾರೆ. ಕಾರ್ಯಕರ್ತರ ಒತ್ತಾಯದಿಂದ ನಾನು ಎಂಪಿ ಟಿಕೆಟ್ ಕೇಳಿದ್ದೇನೆ. ಹೈಕಮಾಂಡ್ ಟಿಕೆಟ್ ಕೊಟ್ಟರೇ ಚುನಾವಣೆ ಸ್ಪರ್ಧೆ ಮಾಡುವೆ ಎಂದು ತಮ್ಮ ಮನದಾಳದ ಮಾತು ಹೊರಹಾಕಿದ್ದಾರೆ. ಇತ್ತ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಸಹ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.
ತುಮಕೂರಲ್ಲಿ ವಿ.ಸೋಮಣ್ಣ ಸ್ಪರ್ಧೆಗೆ ವಿರೋಧ ಇಲ್ವೇನ್ರಿ?: ಸಚಿವ ರಾಮಲಿಂಗಾರೆಡ್ಡಿ
ಮೂವರು ಆಕಾಂಕ್ಷಿಗಳಲ್ಲಿ ಯಾರಿಗೆ ಮಣೆ ಹಾಕುತ್ತೆ ಬಿಜೆಪಿ ಹೈಕಮಾಂಡ್: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಸೋಲು ಆಗಿದೆ. ಆದ್ರೆ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬ ಸರ್ವೇಗಳು ಹೇಳುತ್ತಿವೆ. ಹೀಗಾಗಿ ಆಕಾಂಕ್ಷಿಗಳು ಸಹ ಬಿಜೆಪಿ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆಸಿದ್ದಾರೆ.
ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ವಾದವೇನು?: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಅದೇ ರೀತಿಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆ ಅಪಾರವಾಗಿದೆ. ಕೇಂದ್ರ ಸರ್ಕಾರ ನಮ್ಮ ಲೋಕಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿನ ಯೋಜನೆ ಆಗಿರಬಹುದು, ಜಲಾಧಾರ ಯೋಜನೆ, ರೈಲ್ವೆ ಯೋಜನೆ, ಹೈವೇ ಮತ್ತು ರಾಷ್ಟ್ರೀಯ ಹೆದ್ದಾರಿ ಕಚೇರಿ ರಾಯಚೂರಿನಲ್ಲಿ ಆರಂಭಿಸಲಾಗಿದೆ. ಯಾದಗಿರಿಗೆ ಮೆಡಿಕಲ್ ಕಾಲೇಜು ಕೊಟ್ಟಿದ್ದಾರೆ. ಇಎಸ್ ಐ ಆಸ್ಪತ್ರೆ ಆಗಿದೆ. ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 3670 ಕೋಟಿಗೂ ಅಧಿಕ ಹಣ ಸರ್ಕಾರ ನೀಡಿದೆ. ಈ ಎಲ್ಲಾ ಯೋಜನೆಗಳ ಕಾಮಗಾರಿ ಮುಗಿಯಲು ಎರಡು ವರ್ಷಗಳು ಬೇಕು. ಹೀಗಾಗಿ ನಾನು ಮತ್ತೊಮ್ಮೆ ಟಿಕೆಟ್ ಕೇಳುತ್ತಿರುವೆ. ಬಿಜೆಪಿ ಹೈಕಮಾಂಡ್ ಕೂಡ ನನಗೆ ಟಿಕೆಟ್ ನೀಡುತ್ತೆ ಎಂಬ ಭರವಸೆ ಇದೆ. ಎಲ್ಲಾ ಪಕ್ಷದಲ್ಲಿಯೂ ಚುನಾವಣೆ ವೇಳೆ ಆಕಾಂಕ್ಷಿಗಳು ಇರುವುದು ಸಹಜ. ನಾನು ಸಕ್ರಿಯ ಸಂಸದನಾಗಿ ಕೆಲಸ ಮಾಡಿದ್ದೇನೆ.ಟಿಕೆಟ್ ನನಗೆ ಸಿಕ್ಕೇ ಸಿಗುತ್ತೆ ಎಂದು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ.
ಮಾಜಿ ಸಂಸದ ಬಿ.ವಿ.ನಾಯಕ ಹೇಳಿದ್ದೇನು: ಮಾಜಿ ಸಂಸದ ಬಿ.ವಿ.ನಾಯಕ 2023ರ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಮೌನವಾಗಿದ್ರು.ಆದ್ರೆ ಕಳೆದ ಒಂದು ತಿಂಗಳಿಂದ ಭಾರೀ ಎಕ್ವಿವ್ ಆಗಿ ಓಡಾಟ ಶುರು ಮಾಡಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹೈಕಮಾಂಡ್ ನನಗೆ ನೀಡುತ್ತೆ ಎಂಬ ವಿಶ್ವಾಸದಿಂದ ಪ್ರಚಾರಕ್ಕೆ ಇಳಿದಿದ್ದಾರೆ. ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಒಂದು ಅವಕಾಶ ನೀಡಿದ್ರು. ನಾನು ಮಾಜಿ ಸಂಸದರಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆ ಇದೇ ಕ್ಷೇತ್ರಕ್ಕೆ ನಾಲ್ಕು ಬಾರಿ ಸಂಸದರು ಆಗಿದ್ರು. ಇಡೀ ಕ್ಷೇತ್ರದ ನಾಡಿಮಿಡಿತ ನಮಗೆ ಗೊತ್ತು. ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ನಿಮಗೆ ಒಂದು ಅವಕಾಶವಿದೆ. ಕೇಂದ್ರದಲ್ಲಿ ಮತ್ತೆ ಮೋದಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಈ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತೆ, ಈ ಹಿಂದೆ ವಿರೋಧ ಪಕ್ಷದಲ್ಲಿ ಸಂಸದರಾಗಿ ಕೆಲಸ ಮಾಡಿದವರು ನೀವೂ, ಈಗ ಆಡಳಿತ ಪಕ್ಷದಲ್ಲಿ ಸಂಸದರಾಗಿ ಕೆಲಸ ಮಾಡಲು ಒಂದು ಒಳ್ಳೆಯ ಅವಕಾಶವಿದೆ. ನಿಮ್ಮ ನಾಯಕತ್ವದಲ್ಲಿ ನಮಗೆ ವಿಶ್ವಾಸವಿದೆ. ನೀವೂ ಲೋಕಸಭಾ ಬಿಜೆಪಿ ಟಿಕೆಟ್ ನೀಡುವಂತೆ ಮನವಿ ಮಾಡಿ ಎಂದು ಕಾರ್ಯಕರ್ತರು ಒತ್ತಾಯ ಮಾಡಿದ್ರು. ಹೀಗಾಗಿ ಅವಕಾಶ ನೀಡುವಂತೆ ಹೈಕಮಾಂಡ್ ನಾಯಕರಲ್ಲಿ ಮನವಿ ಮಾಡಿದ್ದೇನೆ. ಅವಕಾಶ ಸಿಕ್ಕರೆ ಸ್ಪರ್ಧೆಗೆ ಸಿದ್ಧವೆಂದು ಬಿ.ವಿ.ನಾಯಕರು ಹೇಳುತ್ತಿದ್ದಾರೆ.
ನಾನು ಆಕಾಂಕ್ಷಿ ಅಲ್ಲ..ಪ್ರಬಲ ಆಕಾಂಕ್ಷಿ ತಿಪ್ಪರಾಜು ಹವಾಲ್ದಾರ್: ನಾನು ರಾಜಕೀಯ ಜೀವನ ಆರಂಭಿಸಿದೆ ಬಿಜೆಪಿಯಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ. 2013ರಲ್ಲಿ ಇಡೀ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ನಾನು ಒಬ್ಬನೇ ಬಿಜೆಪಿ ಶಾಸಕನಾಗಿ ಕ್ಷೇತ್ರದಲ್ಲಿ ಪಕ್ಷ ಕಟ್ಟಿದ್ದೇನೆ. ನಾನು 2019ರಲ್ಲಿ ನಾನು ಕೂಡ ಬಿಜೆಪಿಯ ಪ್ರಬಲ ಆಕಾಂಕ್ಷಿ ಆಗಿದ್ದೇ..ಅದಕ್ಕಾಗಿ ಇಡೀ ಕ್ಷೇತ್ರದಲ್ಲಿ ಓಡಾಟ ಮಾಡಿ ಪಕ್ಷ ಸಂಘಟನೆ ಮಾಡಿದೆ. ಆದ್ರೆ ಟಿಕೆಟ್ ಬೇರೆಯವರಿಗೆ ನೀಡಿದ್ರು. ಆದ್ರೂ ನಾನು ಪಕ್ಷ ಬಿಟ್ಟು ಹೋಗದೇ ಪಕ್ಷ ವಿರೋಧಿ ಚಟುವಟಿಕೆ ಮಾಡದೇ ಪಕ್ಷಕ್ಕಾಗಿ ದುಡಿದು ಲೋಕಸಭಾ ಅಭ್ಯರ್ಥಿಯನ್ನ ಗೆಲ್ಲಿಸುವಲ್ಲಿ ನನ್ನ ಪಾತ್ರವೂ ಮುಖ್ಯವಾಗಿತ್ತು. ಕಳೆದ ನಾಲ್ಕುವರೆ ವರ್ಷದಿಂದ ಎಸ್ ಟಿ ಮೋರ್ಚಾದ ಅಧ್ಯಕ್ಷನಾಗಿ ಪಕ್ಷ ಬಲಪಡಿಸಿದ್ದೇನೆ. ಹೀಗಾಗಿ ಈ ಬಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸವಿದೆ.
ಪ್ರಧಾನಿ ಮೋದಿ ಜನಪರ ಯೋಜನೆ ಸಾಕಾರ: ಶಾಸಕ ಆರಗ ಜ್ಞಾನೇಂದ್ರ
ರಾಯಚೂರು ಲೋಕಸಭಾ ಬಿಜೆಪಿ ಸಕತ್ ತಯಾರಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸೋತ ಬಳಿಕ ಇಡೀ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಪಡೆ ಬದಲಾವಣೆ ಆಗಿದೆ. ಮೊದಲು ರಾಯಚೂರು ಜಿಲ್ಲಾಧ್ಯಕ್ಷ ಸ್ಥಾನವನ್ನ ರಾಯಚೂರು ನಗರದ ಹಾಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಗೆ ನೀಡಿದೆ. ಡಾ.ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಇಡೀ ಜಿಲ್ಲೆಯಾದ್ಯಂತ ಮಂಡಲ ಅಧ್ಯಕ್ಷರ ನೇಮಕ ನಡೆದಿದೆ. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಯೋಜನೆಗಳಿಂದ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಹೇಳುತ್ತಾ ಪ್ರಚಾರ ಶುರು ಮಾಡಿದ್ದಾರೆ. ಒಟ್ಟಾರೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಎಲ್ಲಾ ಸಿದ್ಧತೆ ನಡೆಸಿದೆ. ನಮಗೆ ಅಭ್ಯರ್ಥಿ ಯಾರೇ ಆಗಿರಲಿ ನಮಗೆ ಪ್ರಧಾನಿ ಮೋದಿಯ ಗೆಲುವು ಮುಖ್ಯ..ಮತ್ತೆ ಮೋದಿ ಪ್ರಧಾನಿ ಆಗಬೇಕು ಎಂದು ಬಿಜೆಪಿ ಪ್ರಚಾರ ಶುರು ಮಾಡಿದೆ.