ಬಿಜೆಪಿಯಲ್ಲಿ ಶುದ್ದೀಕರಣ ಆಗುವವರೆಗೂ ನನ್ನ ಹೋರಾಟ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

By Govindaraj SFirst Published Sep 8, 2024, 11:38 PM IST
Highlights

ಬಿಜೆಪಿ ಶುದ್ಧೀಕರಣ ಆಗಬೇಕು ಎಂಬ ಉದ್ದೇಶದಿಂದ ನಾನು ಸ್ಪರ್ಧೆ ಮಾಡಿದ್ದೆ ಎಂದು ಮಾಡಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಜಯಪುರ (ಸೆ.08): ಬಿಜೆಪಿ ಶುದ್ಧೀಕರಣ ಆಗಬೇಕು ಎಂಬ ಉದ್ದೇಶದಿಂದ ನಾನು ಸ್ಪರ್ಧೆ ಮಾಡಿದ್ದೆ ಎಂದು ಮಾಡಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್- ಬಿಜೆಪಿ ಮಧ್ಯೆ ಸಾಕಷ್ಟು ಹೊಂದಾಣಿಕೆ ಇದೆ. ಕಾಂಗ್ರೆಸ್ ಪಕ್ಷದ ಭಿಕ್ಷೆಯಿಂದ ನೀನು ಗೆದ್ದಿದ್ದೀಯಾ ಎಂದು ಡಿ.ಕೆ.ಶಿವಕುಮಾರ ಅವರು ವಿಜಯೇಂದ್ರನಿಗೆ ನೇರವಾಗಿಯೇ ಆಪಾದನೆ ಮಾಡಿದ್ದಾರೆ. 

ಇದರ ಅರ್ಥ ಕಾಂಗ್ರೆಸ್ ನಾಯಕರು ಯಡಿಯೂರಪ್ಪನವರ ಕುಟುಂಬದವರು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂಬುದನ್ನು ನಾಚಿಕೆ ಇಲ್ಲದೆ ಬಹಿರಂಗವಾಗಿಯೇ ಡಿ.ಕೆ.ಶಿವಕುಮಾರ ಅವರು ಒಪ್ಪಿಕೊಂಡಿದ್ದಾರೆ. ಇಂತಹ ಹೊಂದಾಣಿಕೆ ರಾಜಕಾರಣ ಮಾಡುವುದರಿಂದ ರಾಜ್ಯದಲ್ಲಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ. ಇಂತಹ ಕೆಟ್ಟ ರಾಜಕಾರಣವನ್ನು ಬಿಜೆಪಿಯಲ್ಲಿ ನಾನು ಕಂಡಿರಲಿಲ್ಲ. ಹೊಂದಾಣಿಕೆ ರಾಜಕಾರಣ, ಸೃಜನ ಪಕ್ಷಪಾತ ಬಿಜೆಪಿಯಲ್ಲಿಯೂ ಹೆಚ್ಚಾಗಿದೆ. ಬಿಜೆಪಿಯಲ್ಲಿ ಶುದ್ದೀಕರಣ ಆಗುವವರೆಗೆ ನನ್ನ ಹೋರಾಟ ಮುಂದುವರೆಯುತ್ತದೆ ಎಂದರು.

Latest Videos

ಸಿಎಂ ಸಿದ್ದರಾಮಯ್ಯಗೆ ಬೆಂಬಲ ನೀಡುವವರಿಂದಲೇ ಖುರ್ಚಿ ಮೇಲೆ ಕಣ್ಣು: ಕೆ.ಎಸ್‌.ಈಶ್ವರಪ್ಪ

ಬಿಜೆಪಿ ನನ್ನ ಮನೆ: ಬಿಜೆಪಿಗೆ ನಾನು ಯಾವುದೇ ನಿಮಿಷದಲ್ಲೂ ಹೋಗಬಹುದು. ಆದರೆ ಒಂದು ಕುಟುಂಬದಿಂದ ಪಕ್ಷ ಹೊರಗೆ ಬರಬೇಕು, ಹೊಂದಾಣಿಕೆ ಮುಕ್ತ ಆಗಬೇಕು, ಸೃಜನ ಪಕ್ಷಪಾತ ದೂರ ಆಗಬೇಕು. ರಾಜ್ಯದಲ್ಲಿ ಪಕ್ಷ ಕಟ್ಟಿದವರು ನೋವು ಅನುಭವಿಸಿದ್ದಾರೆ. ನೀವು ಅನುಭವಿಸಿದವರಿಗೆ ಸಮಾಧಾನ ಆಗುವ ನಿಟ್ಟಿನಲ್ಲಿ ಶುದ್ಧೀಕರಣ ಆಗಬೇಕು ಎಂಬ ಉದ್ದೇಶವಿದೆ. ಆ ನಿಟ್ಟಿನಲ್ಲಿ ನನಗೆ ಮಾತನಾಡಿಸಲು ಬಂದವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಸಿಎಂ ಪತ್ನಿಗೆ ತೊಂದರೆ ಆಗದಿರಲಿ: ಆ ತಾಯಿ ಸಿದ್ಧರಾಮಯ್ಯನವರ ಶ್ರೀಮತಿ ಗೌರಮ್ಮ ಯಾವುದೇ ತಂಟೆ ತಕಾರರಿಗೆ ಬರದೆ ದೇವರು ದಿಂಡರು ಎಂದು ಮನೆಯಲ್ಲಿರುವ ಹೆಣ್ಣುಮಗಳು. ಆ ತಾಯಿಗೆ ಯಾವುದೇ ತೊಂದರೆ ಆಗದಂತಗೆ ನೋಡಿಕೊಳ್ಳಪ್ಪ ಎಂದು ನಾನು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಯಾಕೆಂದರೆ ಸಿದ್ಧರಾಮಯ್ಯನವರು ಎಲ್ಲಿ ಹೇಳಿರುತ್ತಾರೋ ಅಲ್ಲಿ ಸಹಿ ಮಾಡಿರುತ್ತಾರೆ. ಯಾರದ್ದೇ ಮನೆಯಲ್ಲೂ ಅವರ ಮನೆಯ ಗಂಡಸರು ಹೇಳಿದ್ದಲ್ಲಿ ಆ ಹೆಣ್ಣುಮಕ್ಕಳು ಸಹಿ ಮಾಡಿರುತ್ತಾರೆ. ಹಾಗೆ ಆ ಯಮ್ಮಾ ಏನು ಗೊತ್ತಿಲ್ಲದೆ ಸಹಿ ಮಾಡಿರುತ್ತಾರೆ. ಆ ಯಮ್ಮನಿಗೆ ಮುಕ್ತಿ ಸಿಗಬೇಕು, ಇದರಲ್ಲಿ ಯಾವುದೇ ಅನ್ಯಾಯ ಆಗಬಾರದು ಎಂದು ನನ್ನ ಪ್ರಾರ್ಥನೆ ಎಂದರು.

ಸಿಎಂ ಆಗುವ ಆಸೆ ಇದೆ, ಸದ್ಯ ರೇಸ್‌ನಲ್ಲಿ ಇಲ್ಲ: ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟನೆ

ಐದು ನಿಮಿಷಕ್ಕೆ ನಾನು ರಾಜೀನಾಮೆಗೆ ಸಿದ್ಧವಾಗಿದ್ದೆ: ನನ್ನ ಮೇಲೆ ಒಂದು ಹಗರಣದ ಆಪಾದನೆ ಬಂದಾಗ ನಾನು ಐದು ನಿಮಿಷದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಕೇಂದ್ರದ ನಾಯಕರ ಒಪ್ಪಿಗೆ ಪಡೆಯಲು ಫೋನ್ ಮಾಡಿದ್ದೆ. ಅಷ್ಟರಲ್ಲೇ ಈಶ್ವರಪ್ಪ ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ದೊಡ್ಡ ಮೆರವಣಿಗೆ ಮಾಡಿದರು. ಆದರೆ, ಇವರ ಮೇಲೆ ಆಪಾದನೆ ಬಂದಂತಹ ಸಂರ್ದರ್ಭದಲ್ಲಿ ಪ್ರಾಸಿಕ್ಯೂಷನ್ ಆದರೂ ಕೂಡಾ ರಾಜೀನಾಮೆ ಕೊಟ್ಟರಾ?. ಇವರಿಗೊಂದು ಕಾನೂನು, ನನಗೊಂದು ಕಾನೂನಾ? ಎಂದು ಪ್ರಶ್ನಿಸಿದರು.

click me!