ಕೇವಲ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ನೆಹರು ಮತ್ತು ಗಾಂಧಿ ಕುಟುಂಬದ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅಂತಹ ಧೈರ್ಯ ಯಾಕೆ ತೋರಿಸುವುದಿಲ್ಲ? ಅವರಿಗೊಂದು ಲೆಕ್ಕ, ನಮಗೊಂದು ಲೆಕ್ಕ ಇದೆಯಾ? ಎಂದು ಖಾರವಾಗಿ ಪ್ರಶ್ನಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ
ಚನ್ನಪಟ್ಟಣ(ನ.07): ನಾನು ಟೂರಿಂಗ್ ಟಾಕೀಸ್ ಅಲ್ಲ, ರಾಮನಗರ ನನ್ನ ಪರ್ಮನೆಂಟ್ ಟಾಕೀಸ್ ಎಂದು ಉಪಮು ಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಟೂರಿಂಗ್ ಟಾಕೀಸ್ ಟೀಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ನೀಡಿದರು.
ಚನ್ನಪಟ್ಟಣ ಕ್ಷೇತ್ರದ ಸೋಗಾಲ ಗ್ರಾಮದಲ್ಲಿ ಪ್ರಚಾರ ಭಾಷಣ ಮಾಡಿದ ಅವರು, ನನ್ನದು ಪರ್ಮನೆಂಟ್ ಟಾಕೀಸ್ ರಾಮನಗರ, ಇಲ್ಲಿ ಬಿಟ್ಟು ನಾನೆಲ್ಲೂ ಹೋಗುವುದಿಲ್ಲ, ಯಾರಿಂದಲೂ ನನ್ನನ್ನು ಕಳುಹಿಸಲು ಸಾಧ್ಯವೂ ಇಲ್ಲ. ಅಡ್ಡದಾರಿ ರಾಜಕಾರಣ ಒಮ್ಮೆ ಯಶಸ್ಸು ಆಗಿರಬಹುದು. ಪ್ರತಿ ಬಾರಿಯೂ ಅದು ನಡೆಯಲ್ಲ ಎಂದು ಟಾಂಗ್ ಕೊಟ್ಟರು.
undefined
ಸಿಎಂ, ಡಿಸಿಎಂ ಚನ್ನಪಟ್ಟಣ ಅಭಿವೃದ್ಧಿ ಬದಲು, ಗೌಡರ ಕುಟುಂಬದ ಬಗ್ಗೆ ಟೀಕಿಸಿದ್ದಾರೆ; ಸಚಿವ ಕುಮಾರಸ್ವಾಮಿ!
ಕೇವಲ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ನೆಹರು ಮತ್ತು ಗಾಂಧಿ ಕುಟುಂಬದ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅಂತಹ ಧೈರ್ಯ ಯಾಕೆ ತೋರಿಸುವುದಿಲ್ಲ? ಅವರಿಗೊಂದು ಲೆಕ್ಕ, ನಮಗೊಂದು ಲೆಕ್ಕ ಇದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.
ಚನ್ನಪಟ್ಟಣ ಜನರು ಕಾಂಗ್ರೆಸ್‌ಗೆ ತಕ್ಕ ಶಾಸ್ತಿ ಮಾಡಬೇಕು: ಯಡಿಯೂರಪ್ಪ
ಕಾಂಗ್ರೆಸ್ ಪಕ್ಷಕ್ಷೆ ಅಭ್ಯರ್ಥಿಯೇ ಇರಲಿಲ್ಲ. ನಮ್ಮ ಅಭ್ಯರ್ಥಿಯನ್ನು ಹೈಜಾಕ್ ಮಾಡಿಕೊಂಡು ಹೋದರು. ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಜಿಗಿದು ಅಭ್ಯರ್ಥಿ ಆಗಿರುವ ವ್ಯಕ್ತಿಗೆ ರಾಜಕೀಯ ಜೀವದಾನ ಮಾಡಿದ್ದು ಇದೇ ಯಡಿಯೂರಪ್ಪ ಅವರು. ಆದರೆ, ಕೊನೆಗೆ ಅವರಿಗೆ ಚಿತ್ರಹಿಂಸೆ ಕೊಟ್ಟರು. ಅವರ ವಿಚಾರದಲ್ಲಿ ಅಮಾನುಷವಾಗಿ ವರ್ತಿಸಿದರು. ನಂಬಿಕೆಗೆ, ವಿಶ್ವಾಸಾರ್ಹತೆಗೆ ಅರ್ಹನಲ್ಲದ ಆ ವ್ಯಕ್ತಿಯನ್ನು ಜನರು ನಂಬಿ ಮೋಸ ಹೋಗುವುದು ಬೇಡ ಎಂದು ಜನರಲ್ಲಿ ಮನವಿ ಮಾಡಿದರು.
ನಾನು ಹದಿನೇಳು ಕೆರೆಗಳನ್ನು ತುಂಬಿಸಿದೆ ಎಂದು ಊರ ತುಂಬಾ ನಾನೇ ಭಗೀರಥ ಎಂದು ಪ್ಲೆಕ್ ಹಾಕಿಕೊಂಡರು. ನಾನೂ ತಾಲೂಕಿನ 107 ಕೆರೆಗಳಿಗೆ ನೀರು ತುಂಬಿಸಿದೆ. ಹಾಗಾದರೆ, ನಾನು ಏನೆಂದು ಕರೆದುಕೊಳ್ಳಬೇಕು. ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸಿದರು. ಅವರು ಆ ಜಲಾಶಯ ಕಟ್ಟಿಸದೇ ಇದ್ದಿದ್ದರೆ ಅವರು 17 ಕೆರೆ, ನಾನು 107 ಕೆರೆ ತುಂಬಿ ಸಲು ಎಲ್ಲಿ ಆಗುತ್ತಿತ್ತು ಎಂದು ಪ್ರಶ್ನಿಸಿದರು.