ಮುಂದಿನ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ಹಿಂಪಡೆವ ಹೇಳಿಕೆ ನೀಡಿ ಮುಸ್ಲಿಂ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಎಡೆ ಮಾಡುಕೊಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
ಹೊನ್ನಾಳಿ (ಡಿ.27): ಮುಂದಿನ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ಹಿಂಪಡೆವ ಹೇಳಿಕೆ ನೀಡಿ ಮುಸ್ಲಿಂ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಎಡೆ ಮಾಡುಕೊಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ. ಮಾಜಿ ಪ್ರಧಾನಿ ಅಟಿಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬ ಆಚರಣೆ ಸಮಾರಂಭದ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಎಲ್ಲರೂ ಸಮವಸ್ತ್ರ ಧರಿಸಬೇಕೆಂದು ಆದೇಶ ಹೊರಡಿಸಿತ್ತು, ಈ ಆದೇಶದ ವಿರುದ್ದವಾಗಿ ಕೆಲವರು ಕೋರ್ಟಿಗೆ ಹೋದಾಗಲೂ ಸರ್ಕಾರದ ಆದೇಶ ಎತ್ತಿ ಹಿಡಿಯಲಾಯಿತು.
ಮತ್ತೆ ಕೆಲವರು ಸುಪ್ರಿಂಕೋರ್ಟಿಗೆ ಹೋಗಿದ್ದಾರೆ. ಇಂತಹ ಸಮಯದಲ್ಲಿ ಮುಖ್ಯಮಂತ್ರಿ ಹಿಜಾಬ್ ನಿಷೇಧ ಹಿಂತೆಗೆತ ಮಾತನಾಡಿರುವುದು ನ್ಯಾಯಾಂಗ ಆದೇಶ ಉಲ್ಲಂಘನೆ ಅಲ್ಲವೆ ಎಂದು ಪ್ರಶ್ನಿಸಿದರು. ಅವರು ಹಿಜಾಬ್ ಧರಿಸಿ ಕಾಲೇಜಿಗೆ ಹೋಗಿ ಎಂದರೆ ನಾವೂ ಸಹ ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಬೇಕಾಗುತ್ತದೆ. ಆಗ ಕೋಮು ಸಂಘರ್ಷಕ್ಕೆ ದಾರಿಯಾಗಬಹುದು ಎಂದು ಎಚ್ಚರಿಸಿದರು. ಮೌಲ್ವಿಗಳ ಸಭೆಗೆ ಹೋಗುತ್ತಾರೆ. ಅಲ್ಲಿ 10 ಸಾವಿರ ಕೋಟಿ ಕೊಡುತ್ತೇವೆ ಎಂದು ಭರವಸೆ ನೀಡುತ್ತಾರೆ, ನಿಮ್ಮ ಓಟ್ ಬ್ಯಾಂಕ್ ರಾಜಕರಣಕ್ಕೆ ತೆರಿಗೆ ಹಣ ಬಳಸಿಕೊಳ್ಳಬೇಡಿ ಎಂದು ಸಿದ್ದರಾಮಯ್ಯಗೆ ಮನವಿ ಮಾಡಿದರು.
ರಾಜ್ಯದಲ್ಲಿ ಟಿಪ್ಪು ನೇತೃತ್ವದ ತುಘಲಕ್ ಸರ್ಕಾರ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ರಕ್ತದಾನದಿಂದ ಆರೋಗ್ಯ ಉತ್ತಮ: ರಕ್ತದಾನ ಮಾಡುವುರಿಂದ ರೋಗಿಗಳಿಗಷ್ಟೆ ಅಲ್ಲದೆ ರಕ್ತದಾನ ಮಾಡಿದವರೂ ಕೂಡ ಮತ್ತಷ್ಟು ಆರೋಗ್ಯವಂತರಾಗುತ್ತಾರೆ, ವಿಶೇಷವಾಗಿ ಯುವಕರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಆರೋಗ್ಯ ಮತ್ತಷ್ಟು ದೃಢವಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 99ನೇ ಜಯಂತಿ ಅಂಗವಾಗಿ ತಾಲೂಕು ಬಿಜೆಪಿ, ದಾವಣಗೆರೆ ಆರೈಕೆ ಆಸ್ಪತ್ರೆ ಹಾಗೂ ಬ್ಲಡ್ ಬ್ಯಾಂಕ್ ಸಹಯೋಗದಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ, ನಾವು ಕೊಡುವ ರಕ್ತದಿಂದ ಒಂದು ಜೀವ ಉಳಿದಾಗ ಆಗುವ ಸಂತೋಷ ಅನುಭವಿಸುವುದೇ ಒಂದು ತರಹದ ಆನಂದ. ರಕ್ತದ ಅವಶ್ಯಕತೆ ಕಂಡಾಗ ಹಿಂದು ಮುಂದು ನೋಡಬೇಡಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ, ಅಲ್ಲಿವರೆಗೂ ಮನೆ ಸೇರಲ್ಲ: ಬಿ.ವೈ.ವಿಜಯೇಂದ್ರ
ನಿಯಮಿತ ರಕ್ತದಾನದಿಂದ ಕಬ್ಬಿಣ ಅಂಶ ಸಮತೋಲನದಲ್ಲಿರುತ್ತದೆ ಹಾಗೂ ಹೃದಯಾಘಾತ ತಪ್ಪಿಸುತ್ತದೆ. ಬಹು ಮುಖ್ಯವಾಗಿ ವಿವಿಧ ರೀತಿ ಕ್ಯಾನ್ಸರ್ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ತಿಳಿಸಿದರು. ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಮಾತನಾಡಿ, ಆರೋಗ್ಯವಂತ ವ್ಯಕ್ತಿ 450 ಎಂ.ಎಲ್ ರಕ್ತದಾನ ಮಾಡಬಹುದು. ಪರುಷರು ಪ್ರತಿ ಮೂರು ತಿಂಗಳಿಗೊಮ್ಮೆ ಹಾಗೂ ಸ್ತ್ರೀಯರು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತ ಕೊಟ್ಟ ವ್ಯಕ್ತಿ ದೇಹ ಮತ್ತಷ್ಟು ಸದೃಢವಾಗುತ್ತದೆ. ರಕ್ತದಾನ ಮಾಡುವುದರಿಂದ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂಬ ತಪ್ಪು ಕಲ್ಪನೆ ಇಟ್ಟುಕೊಳ್ಳಬೇಡಿ ಎಂದು ತಿಳಿ ಹೇಳಿದರು.