* ತೀವ್ರ ಕುತೂಹಲ ಮೂಡಿಸಿದ ಸಚಿವ ಮುರುಗೇಶ್ ನಿರಾಣಿ ನಡೆ
* ಇದರ ಮಧ್ಯೆ ಹಿರಿಯ ಬಿಜೆಪಿ ನಾಯಕರನ್ನ ಭೇಟಿಯಾದ ನಿರಾಣಿ
* ಮುಖ್ಯಮಂತ್ರಿ ರೇಸ್‌ನಲ್ಲಿ ನಿರಾಣಿ ಹೆಸರು ಓಡಾಟ
ಕಲಬುರಗಿ, (ಜು.24): ಸಿಎಂ ಬಿಎಸ್ ಯಡಿಯಯೂರಪ್ಪ ಬದಲಾವಣೆ ಖಚಿತ ಎನ್ನಲಾಗುತ್ತಿದ್ದಂತೆಯೇ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವ ಮುರುಗೇಶ್ ನಿರಾಣಿ ಹೆಸರು ಕೇಳಿಬರುತ್ತಿದೆ. ಈ ಈಗಾಗಲೇ ಅವರು ದೆಹಲಿ, ವಾರಾಣಾಸಿ ಭೇಟಿ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದರ ಮಧ್ಯೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು, ಮಾಜಿ ಸಂಸದ ಪಕ್ಷದ ಹಿರಿಯ ನಾಯಕ ಡಾ. ಬಸವರಾಜ ಪಾಟೀಲ್ ಸೇಡಂ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
undefined
ಸಿಎಂ ರೇಸ್‌ನಲ್ಲಿರೋ ಮುರುಗೇಶ್ ನಿರಾಣಿಯ ಮನದ ಮಾತು
ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಸನ್ಮಾನಿಸಿ ಪಾದಗಳಿಗೆ ನಮಸ್ಕಾರ ಸಲ್ಲಿಸಿ, ಸಿಹಿ ತಿನ್ನಿಸಿ ಆಶೀರ್ವಾದ ಪಡೆದುಕೊಂಡರು. ಬಳಿಕ ಜೊತೆಗಿದ್ದ ಎಲ್ಲರನ್ನು ಹೊರಗೆ ಕಳುಹಿಸಿ ನಿರಾಣಿ ಹಾಗೂ ಸೇಡಂ ಮಾತುಕತೆ ನಡೆಸಿದರು. ನಾಯಕತ್ವ ಬದಲಾವಣೆ ಚರ್ಚೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿರಾಣಿ, ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ಗುರುಗಳಿಗೆ ಸನ್ಮಾನಿಸಲಾಗುತ್ತಿದೆ. ಇದರಲ್ಲಿ ಹೊಸದೇನು ಇಲ್ಲ ಎಂದು ಸ್ಪಷ್ಟಪಡಿಸಿದರು.