ವಿಪಕ್ಷ ನಾಯಕನಿಗೆ ಮಾಧ್ಯಮಗಳ ಮುಂದೆ ಸುಳ್ಳು ಹೇಳುವ ಹುಚ್ಚು ಹಿಡಿದಿದೆ: ಆರ್‌ ಅಶೋಕ್ ವಿರುದ್ಧ ಎಂ ಲಕ್ಷ್ಮಣ್ ಕಿಡಿ

By Ravi Janekal  |  First Published Jul 9, 2024, 6:55 PM IST

ಆರ್ ಅಶೋಕ್ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಆದರೆ ಅವರಿಗೆ ಮಾಧ್ಯಮಗಳ ಮುಂದೆ ಸುಳ್ಳು ಹೇಳುವ ಹುಚ್ಚು ಹಿಡಿದಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.


ಕೊಡಗು (ಜು.9): ಆರ್ ಅಶೋಕ್ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಆದರೆ ಅವರಿಗೆ ಮಾಧ್ಯಮಗಳ ಮುಂದೆ ಸುಳ್ಳು ಹೇಳುವ ಹುಚ್ಚು ಹಿಡಿದಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಕೊಡಗಿನ ವಿರಾಜಪೇಟೆಯಲ್ಲಿ ಮಾತನಾಡಿದ ಅವರು, ಆರ್‌ ಅಶೋಕ್ ಮೆಂಟಲಿ ಹಿಂಬ್ಯಾಲೆನ್ಸ್ ಆಗಿದೆ ಎನಿಸುತ್ತಿದೆ ಅಥವಾ ಹೈಕಮಾಂಡ್ ಮೆಚ್ಚಿಸುವುದಕ್ಕಾಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಯಾವುದಾದರೂ ಒಂದೇ ಒಂದು ದಾಖಲೆ ಇದ್ದರೆ ಅದರ ಸಮೇತ ಹೇಳಲಿ. ನಿಮ್ಮ ಎಂಎಲ್‌ಎ ಎಸ್‌ಟಿ ಸೋಮಶೇಖರ್ ಅವರೇ ಹೇಳಿದ್ದಾರೆ. ನಿಮ್ಮ ಸರ್ಕಾರವಿದ್ದಾಗ ನಡೆದಿರುವ ಹಗರಣ ಎಂದು. ನಿಮ್ಮದೇ ಸರ್ಕಾರದವಿದ್ದಾಗ ನಡೆದಿರುವ ಹಗರಣದ ಬಗ್ಗೆ ತನಿಖೆ ಮಾಡಲು ಸಮಿತಿ ರಚನೆಯಾಗಿದೆ. ಆ ಸಮಿತಿಯಿಂದ ತನಿಖಾ ವರದಿ ಬರುವವರೆಗೆ ತಡೆದುಕೊಳ್ಳಿ ಎಂದು ತಿರುಗೇಟು ನೀಡಿದರು.

Latest Videos

undefined

ಡಿಕೆ ಶಿವಕುಮಾರಗೆ ಸಿಎಂ ಕುರ್ಚಿ ಹುಚ್ಚು ಹಿಡಿದಿದೆ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ

ನಿಮ್ಮ ಕತ್ತಿಗೆ ನೀವೇ ಹಗ್ಗ ಹಾಕಿಕೊಂಡಿದ್ದೀರಿ:

ಮುಡಾ ಹಗರಣದಲ್ಲಿ ನಿಮ್ಮ ಕತ್ತಿಗೆ ನೀವೇ ಹಗ್ಗ ಹಾಕಿಕೊಂಡಿದ್ದೀರಿ. ಅದನ್ನು ಡೈವರ್ಟ್ ಮಾಡಲು ಸಿದ್ದರಾಮಯ್ಯ ಅವರ ಪತ್ನಿಯ ಹೆಸರನ್ನು ಮುನ್ನೆಲೆಗೆ ತಂದಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಒಂದುವರೆ ಲಕ್ಷ ಸ್ಕ್ವೇರ್ ಫೀಟ್ ಜಾಗ ವಶಪಡಿಸಿಕೊಂಡಿದ್ದಾರೆ. 32284 ಸ್ಕ್ವೇರ್ ಫೀಟ್ ಜಾಗವನ್ನು ಬದಲಿ ಪರಿಹಾರವಾಗಿ ನೀಡಿದ್ದೀರಿ. ಬಿಜೆಪಿ ಸಂದರ್ಭದಲ್ಲಿಯೇ ಆಗಿರುವ ಹಗರಣ ಎಂದು ಎಸ್‌ಟಿ ಸೋಮಶೇಖರ್ ಹೇಳಿರುವುದು ಸತ್ಯವಿದೆ, ನಾವೂ ಅದನ್ನೇ ಹೇಳುತ್ತಿದ್ದೇವೆ. ಸಿದ್ದರಾಮಯ್ಯ(Siddaramaiah)ನವರು ಮುಖ್ಯ ಮಂತ್ರಿ ಆದ ಮೇಲೆ ಮುಡಾ(MUDA Scam)ದಲ್ಲಿ ಒಂದೇ ಒಂದು ಹಗರಣ ಆಗಿದ್ದರೂ ದಾಖಲೆ ಸಮೇತ ತಿಳಿಸಿಅದುಬಿಟ್ಟು ಸುಳ್ಳು ಹೇಳುತ್ತಿರುವುದು ಸರಿಯಲ್ಲ ಎಂದರು.

ಮುಡಾ ಹಗರಣ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯೋ ನೈತಿಕತೆ ಇಲ್ಲ - ರವಿಕೃಷ್ಣಾ ರೆಡ್ಡಿ

ವಿಶ್ವನಾಥ್(H Vishwanath) ಅವರು ಗಾಜಿನ ಮನೆಯಲ್ಲಿ ಕುಳಿತುಕೊಂಡು ಬೇರೆಯವರ ಮೇಲೆ ಕಲ್ಲು ಹೊಡೆಯುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ಮಾಡಿಸಲಾಗುತ್ತಿದೆ ಇನ್ನೆರಡು ವಾರ ಕಾಯಿರಿ ಎಲ್ಲವನ್ನೂ ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ. ನನಗೆ ಇರುವ ಮಾಹಿತಿ ಪ್ರಕಾರ ಬಿಜೆಪಿ ಸರ್ಕಾರದಲ್ಲಿ 962 ನಿವೇಶನ ಅಕ್ರಮವಾಗಿ ಹಂಚಿಕೆ ಮಾಡಿಕೊಂಡಿದ್ದಾರೆ. ಬಿಜೆಪಿಯ ಉಸ್ತುವಾರಿಯಾಗಿದ್ದವರಿಗೆ, ಕಾರ್ಯದರ್ಶಿಗಳಿಗೆ ನಿವೇಶನ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

click me!