ನನ್ನ ಬೇಡಿಕೆಗಳಿಗೆ ಒಪ್ಪಿದರೆ ಮತ್ತೆ ಬಿಜೆಪಿಗೆ: ಈಶ್ವರಪ್ಪ

By Kannadaprabha News  |  First Published Jul 9, 2024, 7:02 AM IST

'ಪಕ್ಷ ನಿಷ್ಟನಾಗಿ ಪಕ್ಷ ಹೇಳಿದ ಎಲ್ಲಾ ಕಾರ್ಯ ನಿಭಾಯಿಸಿದ್ದೇನೆ. ನನ್ನ ಬೇಡಿಕೆಗೆ ನಾಯಕರು ಒಪ್ಪಿದರೆ ನಾನು ಮತ್ತೆ ಪಕ್ಷಕ್ಕೆ ಬರುತ್ತೇನೆ. ಈಗ ಸದ್ಯಕ್ಕೆ ತುರ್ತು ಇಲ್ಲ ಎಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ


ಶಿವಮೊಗ್ಗ(ಜು.09): ನಾನು ಮರಳಿ ಬಿಜೆಪಿ ಸೇರಿ ಪಕ್ಷವನ್ನು ಬಲಪಡಿಸುವಂತೆ ಬಿಜೆಪಿ ಮುಖಂಡರಿಂದ ನನಗೆ ಕರೆ ಬಂದಿರುವುದು ನಿಜ. ಆದರೆ, ನನಗೆ ನಾಲ್ಕು ಬಾರಿ ಪಕ್ಷದಿಂದ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಪಕ್ಷ ನಿಷ್ಟನಾಗಿ ಪಕ್ಷ ಹೇಳಿದ ಎಲ್ಲಾ ಕಾರ್ಯ ನಿಭಾಯಿಸಿದ್ದೇನೆ. ನನ್ನ ಬೇಡಿಕೆಗೆ ನಾಯಕರು ಒಪ್ಪಿದರೆ ನಾನು ಮತ್ತೆ ಪಕ್ಷಕ್ಕೆ ಬರುತ್ತೇನೆ. ಈಗ ಸದ್ಯಕ್ಕೆ ತುರ್ತು ಇಲ್ಲ' ಎಂದು ಹೇಳಿದರು. 

Latest Videos

undefined

ಬಿಜೆಪಿ ಸೇರಲು ವರಿಷ್ಟರಿಂದ ಆಹ್ವಾನ ಬಂದಿದೆ: ಈಶ್ವರಪ್ಪ

ಮುಡಾ ಸೈಟ್ ಹಗರಣದ ಬಗ್ಗೆ ಮಾತನಾಡಿದ ಈಶ್ವರಪ್ಪ, ಹಗರಣದಲ್ಲಿ ಹೆಣ್ಣು ಮಕ್ಕಳನ್ನು ಬೀದಿಗೆ ತರಲಾಗಿದೆ. ಹಗರಣ ನಡೆದೇ ಇಲ್ಲವೆಂದರೆ ತನಿಖೆಗೆ ಒಪ್ಪಿಸಿದ್ದೇಲೇಕೆ. ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ಇರುವುದು ಮಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಕೂಡ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

click me!