ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅನಿವಾರ್ಯತೆ ಬರುತ್ತೆ; ನಾವು ಹೋರಾಟ ನಿಲ್ಲಿಸೊಲ್ಲ: ಸಂಸದ ಬಿವೈ ರಾಘವೇಂದ್ರ ವಾಗ್ದಾಳಿ

By Ravi Janekal  |  First Published Aug 9, 2024, 1:32 PM IST

ಅನೇಕ ವರ್ಷಗಳಿಂದ ಸ್ವಾತಂತ್ರ್ಯ ನಂತರ ವಕ್ಫ್ ಸಮಿತಿ ರಚನೆ ಮಾಡಿದ್ದರು. ವಕ್ಫ್ ಆಸ್ತಿ ಬಗ್ಗೆ ಸುಪ್ರೀಂ ಕೋರ್ಟ್ ಸಹ ಪ್ರಶ್ನೆ ಮಾಡುವ ಅವಕಾಶ ಇಲ್ಲ. ಇಂತಹ ಅಧಿಕಾರ ಕಾಂಗ್ರೆಸ್ ಕೊಟ್ಟಿತ್ತು ಎಂದು ಸಂಸದ ಬಿವೈ ರಾಘವೇಂದ್ರ ಕಿಡಿಕಾರಿದರು.


ಶಿವಮೊಗ್ಗ (ಆ.9): ಅನೇಕ ವರ್ಷಗಳಿಂದ ಸ್ವಾತಂತ್ರ್ಯ ನಂತರ ವಕ್ಫ್ ಸಮಿತಿ ರಚನೆ ಮಾಡಿದ್ದರು. ವಕ್ಫ್ ಆಸ್ತಿ ಬಗ್ಗೆ ಸುಪ್ರೀಂ ಕೋರ್ಟ್ ಸಹ ಪ್ರಶ್ನೆ ಮಾಡುವ ಅವಕಾಶ ಇಲ್ಲ. ಇಂತಹ ಅಧಿಕಾರ ಕಾಂಗ್ರೆಸ್ ಕೊಟ್ಟಿತ್ತು ಎಂದು ಸಂಸದ ಬಿವೈ ರಾಘವೇಂದ್ರ ಕಿಡಿಕಾರಿದರು.

ವಕ್ಫ್ ಆಸ್ತಿ ಕಾಯ್ದೆ ತಿದ್ದುಪಡಿ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ವಕ್ಫ್‌ನಲ್ಲಿ ಅವಕಾಶ ಇಲ್ಲ.  ಮಹಿಳೆಯರಿಗೂ ಅವಕಾಶ ಮಾಡಿಕೊಡಬೇಕು. ವಕ್ಫ್ ಆಸ್ತಿ 1.5 ಲಕ್ಷ ಎಕರೆಯಿಂದ 9ಲಕ್ಷ ಎಕರೆಗೆ ಏರಿಕೆಯಾಗಿದೆ. ಬಡವರಿಗೂ ನ್ಯಾಯ ಸಿಗುವ ಕೆಲಸ ಆಗಬೇಕು.  ಕೆಲವೆಡೆ ಹಿಂದೂ ದೇವಸ್ಥಾನದ ಭೂಮಿಯನ್ನೂ ಕಬಳಿಸುವ ಯತ್ನ ಆಗಿದೆ ಎಂದರು.

Tap to resize

Latest Videos

undefined

ಇನ್ನು ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಂಸದರು, ಪಾದಯಾತ್ರೆಯಲ್ಲಿ ದಿನೇದಿನೆ ಭಾಗಿಯಾಗುವವರ ಸಂಖ್ಯೆ ಹೆಚ್ಚಳವಾಗ್ತಿದೆ. ಪಾದಯಾತ್ರೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕುಟುಂಬ ಸೈಟ್ ಪಡೆದಿದೆ. ಮುಡಾದಲ್ಲಿ 4-5 ಸಾವಿರ ಕೋಟಿ ಹಗರಣ ನಡೆದಿರವುದು ಗಂಭೀರವಾಗಿದೆ. ನಮಗೆ ಮುಖ್ಯಮಂತ್ರಿ ಬಗ್ಗೆ ಗೌರವ ಇದೆ. ಅವರ ಮೇಲೆ ಆರೋಪ ಬಂದಿದೆ. ಧಮ್ಕಿ ಹಾಕುವ ಕೆಲಸ ಕಾಂಗ್ರೆಸ್ ನವರು ಮಾಡ್ತಿದ್ದಾರೆ. ಮುಖ್ಯಮಂತ್ರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಸಂಗ ಬರುತ್ತದೆ. ನಾವು ವಿರೋಧ ಪಕ್ಷವಾಗಿ ಹೋರಾಟ ನಡೆಸುತ್ತೇವೆ. ಆದರೆ ಇತಿಹಾಸದಲ್ಲಿ ವಿರೋಧ ಪಕ್ಷದ ವಿರುದ್ಧ ಒಂದು ಆಡಳಿತ ಪಕ್ಷ ಸಮಾವೇಶ ನಡೆಸುತ್ತಿರುವುದು ಇದೇ ಮೊದಲು. ಒಂದು ಆಡಳಿತ ಪಕ್ಷವಾಗಿ ಅಭಿವೃದ್ಧಿ ಮಾಡಲು ನಿಮಗೆ ಅವಕಾಶ ಕೊಟ್ಟು ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಅಭಿವೃದ್ಧಿ ಬದಲು ಭ್ರಷ್ಟಾಚಾರ, ಹಗರಣ ತೊಡಗಿದ್ದಾರೆ. ಪ್ರಶ್ನಿಸಿದರೆ ಧಮ್ಕಿ ಹಾಕುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.

ಎನ್‌ಡಿಎ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕೋಪ ಇದೆ: ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಿಎಂ ಕಿಡಿ

ನಮ್ಮ ಹೋರಾಟ ದಿನೇದಿನೆ ತೀವ್ರಗೊಳ್ಳುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗುತ್ತಿದ್ದಾರೆ. ಜನಸ್ಪಂದನೆ ನೋಡಿದರೆ ಮುಖ್ಯಮಂತ್ರಿ ರಾಜೀನಾಮೆ ಕೊಡುವ ಅನಿವಾರ್ಯತೆ ಬರುತ್ತದೆ. ಹಗರಣ ಮುಚ್ಚಿಕೊಳ್ಳಲು ವಿರೋಧಪಕ್ಷಗಳ ವಿರುದ್ಧ ಬ್ಲಾಕ್‌ಮೇಲ್ ತಂತ್ರಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ನವರು ಬಿಜೆಪಿ ವಿರುದ್ಧವೂ ತನಿಖೆ ನಡೆಸಲಿ. ನಾವು ಮುಡಾ ಹಗರಣ, ವಾಲ್ಮೀಕಿ ಹಗರಣದ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇನ್ನು ಹಾಸನದಲ್ಲಿ ಪ್ರೀತಂಗೌಡ ಹಾಗೂ ಎಚ್‌ಡಿಕೆ ಬೆಂಬಲಿಗರ ನಡುವಿನ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು, ಒಂದೇ ತಾಯಿ ಹುಟ್ಟಿದ ಮಕ್ಕಳಲ್ಲಿ ವ್ಯತ್ಯಾಸ ಇರುತ್ತದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಯವರು ಒಂದಾಗಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದೇವೆ. ಈ ತರದ ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ಕುಳಿತು ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದರು. ಇದೇ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣ ನೈಟ್ ಲ್ಯಾಂಡಿಂಗ್ ಕಾಮಗಾರಿ‌ ವಿಚಾರ ಸಂಬಂಧ ಮಾತನಾಡಿದ ಸಂಸದರು, ಸರ್ಕಾರ ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ಬಿಲ್ ಬಿಡುಗಡೆ ಮಾಡಿಲ್ಲ. ಹೀಗಾಗಿ ಕಾಮಗಾರಿ ವಿಳಂಬ ಆಗುತ್ತಿದೆ. ನಾಳೆ ಶಿವಮೊಗ್ಗ ಏರ್ ಪೋರ್ಟ್ ಗೆ ಬೀಗ ಹಾಕುವ ಪರಿಸ್ಥಿತಿ ಬಂದರೆ ಅದಕ್ಕೆ ‌ಕಾಂಗ್ರೆಸ್ ಸರಕಾರ ಕಾರಣ ಆಗುತ್ತದೆ. ಕಾಂಗ್ರೆಸ್‌ನವರು ನಮ್ಮ ಮೇಲೆ ಆರೋಪ ಮಾಡುವ ಪ್ರಮೇಯವೇ ಇಲ್ಲ ಏಕೆಂದರೆ ಶೇ.99ರಷ್ಟು ಕೆಲಸಗಳು ಮುಗಿದುಹೋಗಿವೆ. ಕೇವಲ ಒಂದು ಪರ್ಸೆಂಟ್‌ನಷ್ಟು ಮಾತ್ರ ಬಾಕಿ ಉಳಿದಿತ್ತು. ಆ ಒಂದು ಪರ್ಸೆಂಟ್ ನಷ್ಟು ಕಾಮಗಾರಿಗೆ ಒಂದೂವರೆ ವರ್ಷ ತೆಗೆದುಕೊಂಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ನೈಟ್ ಲ್ಯಾಂಡ್‌ಗೆ ಒಪ್ಪಿಗೆ ನೀಡಿದೆ. ದೇವರ ದಯೆಯಿಂದ ನಾನು ಕೇಂದ್ರ ಸರ್ಕಾರದಿಂದ ಕ್ಲಿಯರೆನ್ಸ್ ಕೊಡಿಸಿದ್ದೇನೆ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿಮಾನ ಹಾರಾಟ ಮಾಡಲಾಗಿದೆ ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಂಸದರು, ನಾಚಿಕೆ ಆಗಬೇಕು ಅವರಿಗೆ ಅದನ್ನ ಬಿಟ್ಟು ಬೇರೆನೂ ಹೇಳೋಕೆ ಆಗೊಲ್ಲ. ಆ ತರಹದ ಮಾತುಗಳಿಗೆ ಪ್ರತಿಕ್ರಿಯಿಸಲು ನನಗೆ ನಾಚಿಕೆ ಆಗುತ್ತಿದೆ ಎಂದರು.

ದೇಶದಲ್ಲಿ ರೈಲ್ವೆ, ರಕ್ಷಣಾ ಇಲಾಖೆ ಬಿಟ್ರೆ ಅತಿ ಹೆಚ್ಚು ಭೂ ಆಸ್ತಿ ಇರೋದು ವಕ್ಫ್ ಬಳಿ! ಅಂಕಿ-ಅಂಶ ಸಮೇತ ಬಿಚ್ಚಿಟ್ಟ ಯತ್ನಾಳ್!

ಇನ್ನು ಬೈಂದೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಜಾಗ ರಿಸರ್ವ್ ಇಟ್ಟಿದ್ದೇವೆ. ರಾಜ್ಯದ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರಿಗೆ ಪತ್ರದ ಮೂಲಕ ತಿಳಿಸಿದ್ದೇವೆ. ಅವರು ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ. ಕೇಂದ್ರ ಸರ್ಕಾರ ವಿಮಾನ ನಿಲ್ದಾಣ ನಿರ್ಮಿಸಲು ಸಿದ್ಧವಿದೆ. ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬರಬೇಕು ಎಂಬ ಆಪೇಕ್ಷೆ ಇದೆ. ಅದಕ್ಕೆ ಬೇಕಾದ ಎಲ್ಲ ಪ್ರಪೊಸಲ್ ಸಿದ್ಧವಾಗಿವೆ ಎಂದರು.

click me!