ಮುಡಾ ಹಗರಣ ತನಿಖೆ:ಕುರಿ ಕಾಯೋಕೆ ತೋಳ ನೇಮಕ ಮಾಡಿದಂತಾಗಿದೆ: ಸಿಟಿ ರವಿ ಆಕ್ರೋಶ

By Ravi Janekal  |  First Published Jul 25, 2024, 4:27 PM IST

ಮುಡಾ ಹಗರಣ ವಿರುದ್ಧ ಮೈಸೂರಿಗೆ ಪಾದಯಾತ್ರೆ ಮಾಡುವ ತೀರ್ಮಾನ ಮಾಡಿದ್ದೇವೆ.  28ಕ್ಕೆ ಎನ್‌ಡಿಎ ಸಭೆ ನಡೆಸುತ್ತೇವೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಸಿಟಿ ರವಿ ತಿಳಿಸಿದ್ದಾರೆ.


ಬೆಂಗಳೂರು (ಜು.25): ಮುಡಾ ಹಗರಣ ವಿರುದ್ಧ ಮೈಸೂರಿಗೆ ಪಾದಯಾತ್ರೆ ಮಾಡುವ ತೀರ್ಮಾನ ಮಾಡಿದ್ದೇವೆ.  28ಕ್ಕೆ ಎನ್‌ಡಿಎ ಸಭೆ ನಡೆಸುತ್ತೇವೆ. ಆ ಸಭೆಯಲ್ಲಿ ಯಾವಾಗ ಪಾದಯಾತ್ರೆ ಮಾಡಬೇಕು, ಅದರ ರೂಪರೇಷಗಳೇನು ಎಂಬ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಅಗತ್ಯಬಿದ್ದ ರಾಜಭವನಕ್ಕೂ ನಾವು ಭೇಟಿ ನೀಡುತ್ತೇವೆ ಎಂದು ಪರಿಷತ್ ಸದಸ್ಯ ಸಿಟಿ ರವಿ ತಿಳಿಸಿದರು.

ಮುಡಾ ಹಗರಣ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ತನಿಖೆ ಮಾಡಲು ನಿವೃತ್ತ ನ್ಯಾಯಾಧೀಶರಿಗೆ ಕೊಟ್ಟಿದ್ದಾರೆ. ಸಿಎಂ ವಿರುದ್ಧ ಅದ್ಹೇಗೆ ತನಿಖೆ ಮಾಡಿ ವರದಿ ಕೊಡ್ತಾರೆ? ಸಿದ್ದರಾಮಯ್ಯ ನೇಮಕ ಮಾಡಿರೋದು ಇದೊಂದು ರೀತಿ ಕುರಿ ಕಾಯೋಕೆ ತೋಳವನ್ನು ನೇಮಕ ಮಾಡಿದಂತಾಗಿದೆ. ಇದು ಸರಿಯಲ್ಲ, ಹಾಲಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದಲೇ ಹಗರಣದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

Tap to resize

Latest Videos

 

ಮುಡಾ ಹಗರಣದ ವಿರುದ್ಧ ಹೋರಾಟಕ್ಕೆ ಬಿಜೆಪಿಗೆ ಕಾಂಗ್ರೆಸ್ಸಿಂದಲೇ ಒತ್ತಡ: ವಿಜಯೇಂದ್ರ

ನಾವು ಮುಡಾ ಹಗರಣ ವಿಚಾರವಾಗಿ ಎರಡೂ ಸದನದಲ್ಲಿ ಸಭಾಧ್ಯಕ್ಷ, ಸಭಾಪತಿ ಇಬ್ಬರಿಗೂ ಮನವರಿಕೆ ಕೇಳಿದ್ದೇವೆ. ನಮ್ಮ ಚರ್ಚೆಗೆ ಅವಕಾಶ ಕೊಡದೇ ಬಿ ರಿಪೋರ್ಟ್ ಕೊಟ್ಟುಕೊಂಡಿದ್ದಾರೆ. ಚರ್ಚೆ ಅವಕಾಶ ಕೊಡದೇ ಮಿಸ್ಟರ್ ಕ್ಲೀನ್ ಚಿಟ್ ಎಂದಿದ್ದಾರೆ. 

'ವೆದರ್ ಚೆನ್ನಾಗಿದೆ ನಡೆದುಕೊಂಡೇ ಹೋಗ್ಲಿ' ಮುಡಾ ಹಗರಣ ವಿರುದ್ಧ ಬಿಜೆಪಿ ಮೈಸೂರು ಪಾದಯಾತ್ರೆಗೆ ಪ್ರಿಯಾಂಕ್ ಖರ್ಗೆ ಲೇವಡಿ

ಸೋಮವಾರ ಬಹುತೇಕ ಮೈಸೂರಿಗೆ ಪಾದಯಾತ್ರೆ ನಡೆಯುವುದು ಖಚಿತವಾಗಿದೆ. ಬಿಜೆಪಿ ಜೆಡಿಎಸ್ ಶಾಸಕರಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಲಾಗಿದೆ. ಒಂದು ವಾರಗಳ ಕಾಲ ನಡೆಯುವ ಪಾದಯಾತ್ರೆ ಮೂಲಕ ಮೈಸೂರಿಗೆ ತಲುಪಲಿರುವ ನಾಯಕರು. ಮೈಸೂರು ತಲುಪಿದ ನಂತರ ಮುಡಾ ಕಚೇರಿಗೆ ಮುತ್ತಿಗೆ ಮತ್ತು ಅಲ್ಲಿಂದ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸುತ್ತಿರವು ಮೈತ್ರಿ ನಾಯಕರು. ಭಾನುವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಸಭೆಯಲ್ಲಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸಹ ಭಾಗಿಯಾಗಲಿದ್ದಾರೆ.

click me!