ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೇ ನೀಡುವ ಪ್ರಶ್ನೆಯೇ ಇಲ್ಲ. ಏಕೆಂದರೆ ಇಡೀ ಪಕ್ಷ ಮತ್ತು ನಾವು ಅವರ ಜೊತೆಗಿದ್ದೇವೆ. ಅವರೇನೂ ತಪ್ಪು ಮಾಡಿಲ್ಲ. ಸುಖಾ ಸುಮ್ಮನೆ ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಚಿಕ್ಕಬಳ್ಳಾಪುರ (ಅ.6) : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೇ ನೀಡುವ ಪ್ರಶ್ನೆಯೇ ಇಲ್ಲ. ಏಕೆಂದರೆ ಇಡೀ ಪಕ್ಷ ಮತ್ತು ನಾವು ಅವರ ಜೊತೆಗಿದ್ದೇವೆ. ಅವರೇನೂ ತಪ್ಪು ಮಾಡಿಲ್ಲ. ಸುಖಾ ಸುಮ್ಮನೆ ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶನಿವಾರ ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಎಚ್. ನರಸಿಂಹಯ್ಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕು ಎನ್ನುತ್ತಾರೆ. ವಿಜಯೇಂದ್ರ ಮೊದಲು ಅವರ ತಂದೆ ಯಡಿಯೂರಪ್ಪನವರ ಭ್ರಷ್ಟಾಚಾರದ ವಿರುದ್ದ ಹೋರಾಡಲಿ ಎಂದರು.
undefined
ವಾಲ್ಮೀಕಿ, ಮುಡಾ ಹಗರಣದಿಂದ ರಾಜ್ಯದ ಜನರಿಗೆ ಅನ್ಯಾಯ: ಸಿದ್ದು ವಿರುದ್ಧ ವಿಜಯೇಂದ್ರ ವಾಗ್ದಾಳಿ
ಭ್ರಷ್ಟಾಚಾರದಲ್ಲಿ ಹೆಸರಾದವರು?
ಭ್ರಷ್ಟಾಚಾರದಲ್ಲಿ ಅತೀ ಹೆಚ್ಚು ಹೆಸರು ಮಾಡಿದವರು ಯಾರು, ಯಡಿಯೂರಪ್ಪ ಸಿಎಂ ಆಗಿದ್ದಾಗ ಎಲ್ಲ ಫೈಲ್‌ಗಳು ವಿಜಯೇಂದ್ರ ಬಳಿಗೇ ಹೋಗುತ್ತಿರಲಿಲ್ಲವೇ. ನೈತಿಕತೆ ಇಟ್ಟುಕೊಂಡು ಮಾತನಾಡಿದರೆ ಉತ್ತರಿಸಬಹುದು. ಇಂತಹವರು ನಮ್ಮ ಸಿಎಂ ಬಗ್ಗೆ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ, ಕುಮಾರಸ್ವಾಮಿ ಮೇಲೆ ಎಫ್ ಐ ಆರ್ ಆಗಿದೆ, ತನಿಖೆ ನಡೆಯುತ್ತಿದೆ. ಅವರಿಗೆ ಐಡಿಯಾಲಜಿಯೇ ಇಲ್ಲ. ಮೊದಲೇ ಪ್ರಿನ್ಸಿಪಲ್ಸ್ ಇಲ್ಲ, ಅವರೇ ಹೇಳಿದ್ದಾರೆ, ಅವರಿಗೆ ಅಧಿಕಾರವೇ ಮುಖ್ಯ ಎಂದು. ಅವರ ಮೇಲೆ ಎಷ್ಟು ಆರೋಪ, ತನಿಖೆ ಏನಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಸಿದ್ದರಾಮಯ್ಯ ಪ್ರಕರಣವೇ ಬೇರೆ. ಅವರ ಹೆಸರನ್ನು ಕೆಡಿಸಿಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಸ್ಟಾಂಡರ್ಡ್ ಬೇರೆ, ಕುಮಾರಸ್ವಾಮಿ ಸ್ಟಾಂಡರ್ಡ್ ಬೇರೆ ಎಂದರು. ಉಪಕರಣ ಖರೀದಿ ಅವ್ಯವಹಾರ ತನಿಖೆ
ಕೋವಿಡ್ ವಿಚಾರವಾಗಿ ತನಿಖೆ ಮಾಡಲಾಗುತ್ತಿದೆ. ಈಗ ಮಧ್ಯತರ ವರದಿ ನೀಡಿದ್ದಾರೆ ಅಷ್ಟೇ, ಇನ್ನೂ ಅಂತಿಮ ವರದಿ ಬರಬೇಕಿದೆ. ಯಾರು ಎಲ್ಲೆಲ್ಲಿ ಹೆಚ್ಚು ಬೆಲೆಗೆ ಖರೀದಿ ಮಾಡಿದರು. ಎಲ್ಲಿ ಅನಗತ್ಯವಾಗಿ ಖರೀದಿ ಮಾಡಿದರು ಎಂದು ತನಿಖೆ ನಡೆಯುತ್ತಿದೆ. ಯಾವುದೇ ರೀತಿಯ ವೈಯಕ್ತಿಕ ವಿಚಾರ ಇಟ್ಟುಕೊಂಡು ತನಿಖೆ ಮಾಡುತ್ತಿಲ್ಲ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಭ್ರಷ್ಟ ಸಿಎಂ ಪ್ರಭಾವಕ್ಕೆ ಒಳಗಾಗಿ ಸೈಟು ಖಾತೆ ರದ್ದು: ಸಿದ್ದು ವಿರುದ್ಧ ಸಿಡಿದೆದ್ದ ವಿಜಯೇಂದ್ರ
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಕೆ.ಹೆಚ್.ಪುಟ್ಟಸ್ವಾಮಿಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಎಸ್ಪಿ ಕುಶಾಲ್ ಚೌಕ್ಸೆ, ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್ ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಮಂಜುಳಾ ದೇವಿ, ಆರೋಗ್ಯ ಶಿಕ್ಷಣಾಧಿಕಾರಿ ಸುಧಾ ಮತ್ತಿತರರು ಇದ್ದರು.