ಹಗರಣಗಳ ಮುಚ್ಚಿಕೊಳ್ಳಲು ಸಿಎಂ, ಡಿಸಿಎಂರಿಂದ ಆಪರೇಷನ್ ಕಮಲದ ಸುಳ್ಳು ಆರೋಪ: ಸಂಸದ ಯದುವೀರ್ ಒಡೆಯರ್

By Govindaraj S  |  First Published Nov 15, 2024, 8:12 PM IST

ವಿಶ್ವ ವಿಖ್ಯಾತ ಮೈಸೂರು ದಸರಾ ಮುಗಿದು ಸರಿಯಾಗಿ ಒಂದು ತಿಂಗಳಾಗಿದ್ದು, ನಾಡ ಹಬ್ಬದಲ್ಲಿ ಭಾಗವಹಿಸಿದ್ದ ಗಜಪಡೆಯ ಮಾವುತ ಕವಾಡಿಗರ ಸಮಸ್ಯೆಯನ್ನು ಮೈಸೂರಿನ ಮಹಾರಾಜ, ಮೈಸೂರು, ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಆಲಿಸಿದ್ದಾರೆ. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ನ.15): ವಿಶ್ವ ವಿಖ್ಯಾತ ಮೈಸೂರು ದಸರಾ ಮುಗಿದು ಸರಿಯಾಗಿ ಒಂದು ತಿಂಗಳಾಗಿದ್ದು, ನಾಡ ಹಬ್ಬದಲ್ಲಿ ಭಾಗವಹಿಸಿದ್ದ ಗಜಪಡೆಯ ಮಾವುತ ಕವಾಡಿಗರ ಸಮಸ್ಯೆಯನ್ನು ಮೈಸೂರಿನ ಮಹಾರಾಜ, ಮೈಸೂರು, ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಆಲಿಸಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನಲ್ಲಿ ಇರುವ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ಅವರಯ ಮಾವುತರು, ಕವಾಡಿಗರ ಅಹವಾಲು ಸ್ವೀಕರಿಸಿದರು. ಬೋಟ್ ಏರಿ ಕಾವೇರಿ ನದಿ ದಾಟಿ ದುಬಾರೆ ಸಾಕಾನೆ ಶಿಬಿರಕ್ಕೆ ಹೋದ ಅವರು ಎಲ್ಲಾ ಆನೆಗಳಿಗೂ ಬೆಲ್ಲ ನೀಡಿ ಮಾವುತರಿಂದ ಅವುಗಳ ಆರೋಗ್ಯ ವಿಚಾರಿಸಿದರು. 

Tap to resize

Latest Videos

undefined

ಅದರಲ್ಲೂ ಈ ಬಾರಿ ಪಟ್ಟದ ಆನೆಯಾಗಿದ್ದ ಕಂಜನ್ ಆನೆಗೂ ಬೆಲ್ಲ ತಿನ್ನಿಸಿ ವಿಶೇಷವಾಗಿ ಮುದ್ದು ಮಾಡಿದರು. ಇದು ನಮ್ಮ ಪಟ್ಟದ ಆನೆ ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಪ್ರಶಾಂತ, ಹರ್ಷ, ಶ್ರೀರಾಮ ಸೇರಿದಂತೆ ಎಲ್ಲಾ ಆನೆಗಳಿಗೂ ಬೆಲ್ಲ ತಿನ್ನಿಸಿದರು. ನಂತರ ಮಾವುತರನ್ನು ಭೇಟಿಯಾದ ಯದುವೀರ್ ಒಡೆಯರ್ ಅವರ ಸಮಸ್ಯೆಗಳನ್ನು ಆಲಿಸಿ ಮನವಿ ಸ್ವೀಕರಿಸಿದರು. ಮಾವುತರು ಕವಾಡಿಗರಲ್ಲಿ ಪ್ರಮುಖವಾಗಿ ಇರುವುದಕ್ಕೆ ಮನೆ, ಓಡಾಡುವುದಕ್ಕೆ ರಸ್ತೆ, ವಿದ್ಯುತ್ ಸಂಪರ್ಕವನ್ನು ಒದಗಿಸುವಂತೆ ಮನವಿ ಮಾಡಿದರು. ದುಬಾರೆ ಹಾಡಿಯಲ್ಲಿ ಇರುವವರಿಗೆ ಯಾವುದೇ ಅಗತ್ಯಕ್ಕಾದರೂ ಮಾಲ್ದಾರೆಗೆ ಹೋಗಿ ಬರಬೇಕು. 

75 ಕಿಲೋ ಮೀಟರ್ ರಸ್ತೆ ಅಭಿವೃದ್ದಿ ಪಡಿಸಿಲು ಅನುದಾನ ಬಿಡುಗಡೆ: ಡಬಲ್ ರಸ್ತೆ ಬಗ್ಗೆ ಅಪಸ್ವರ!

ಹೀಗಾಗಿ ಅಲ್ಲಿಗೆ ರಸ್ತೆ ಸಂಪರ್ಕ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ಹಲವು ವರ್ಷಗಳಿಂದ ಈ ಸಮಸ್ಯೆ ಬಗೆಹರಿಯದೆ ಹಾಗೆಯೇ ಉಳಿದಿದೆ ಎಂದರು. ಈ ಸಂದರ್ಭ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು ದುಬಾರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಾಜ್ಯ ಸರ್ಕಾರದಿಂದಲೂ ಆಗಬೇಕಾಗಿರುವ ಕೆಲಸಗಳು ಬಾಕಿ ಇವೆ. ರಾಜ್ಯ ಸರ್ಕಾರದೊಂದಿಗೆ ಮಾತನಾಡಿ ಆ ಕೆಲಸಗಳನ್ನು ಮಾಡಿಸಲು ಪ್ರಯತ್ನಿಸುವೆ ಎಂದಿದ್ದಾರೆ. ನಮ್ಮ ಅನುದಾನದಿಂದಲೂ ಆಗಬಹುದಾದ ಕೆಲಸ ಮಾಡುವೆ ಎಂದು ಭರವಸೆ ನೀಡಿದ್ದಾರೆ. 

ಯಾವುದೇ ಅಭಿವೃದ್ಧಿ ಕೆಲಸಗಳನ್ನೇ ಮಾಡದ ಕಾಂಗ್ರೆಸ್ ಸರ್ಕಾರದ ಹಲವು ಹಗರಣಗಳು ಬೆಳಕಿಗೆ ಬರುತ್ತಿವೆ. ಈ ಹಗರಣಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಸಿಎಂ ಸಿದ್ದರಾಮಯ್ಯನವರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಶಾಸಕರನ್ನು 50 ಕೋಟಿ ರೂಪಾಯಿಗೆ ಖರೀದಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಾಂಗ್ರೆಸ್ನ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದರು. 

ರಾಜ್ಯವನ್ನೇ ಬೆಚ್ಚಿಬೀಳಿಸುವ ಕಹಾನಿ: ಗೋರಿಯಿಂದ ಹೊರ ಬಂದ 6 ತಿಂಗಳ ಹಿಂದೆ ಹೂತಿದ್ದ ಶವ!

ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ್ದ ಸಂದರ್ಭ ಸುವರ್ಣ ನ್ಯೂಸ್ ನೊಂದಿಗೆ ಅವರು ಮಾತನಾಡಿದರು. ಇವೆಲ್ಲಾ ಆಧಾರವಿಲ್ಲದ ಆರೋಪ, ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇದರ ನಡುವೆ ವಾಲ್ಮೀಕಿ ಹಗರಣ ಬಯಲಿಗೆ ಬಂದಿದೆ. ಇದನ್ನು ಮುಚ್ಚಿಕೊಳ್ಳಲು ಇಂತಹ ಸಲ್ಲದ ಆರೋಪ ಮಾಡಲಾಗುತ್ತಿದೆ. ಇಂತಹ ಆರೋಪಗಳನ್ನು ನಾನು ಒಪ್ಪಲ್ಲ ಎಂದು ಯದುವೀರ್ ಒಡೆಯರ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. 

click me!