ನಾನು ಬಿಜೆಪಿ ರಾಜ್ಯಾಧ್ಯಕ್ಷನಾ? ಪತ್ರಕರ್ತರ ಪ್ರಶ್ನೆಗೆ ಸಂಸದ ಯದುವೀರ್ ಒಡೆಯರ್ ಉತ್ತರ

Published : Nov 18, 2026, 08:49 AM IST
Yaduveer Wadiyar

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಅರ್ಹ ವ್ಯಕ್ತಿಯನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ ಎಂದು ಸಂಸದ ಯದುವೀರ್ ಹೇಳಿದ್ದಾರೆ. ಸೋನಿಯಾ ಗಾಂಧಿ ಅವರ ಪುಸ್ತಕದಲ್ಲಿ ಅರ್ಧ ಸತ್ಯವಿದ್ದು, ನಾನು ಅದನ್ನು ಓದುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸರಿಯಾದ ಅರ್ಹತೆ ಇರುವವರು ಆಯ್ಕೆಯಾಗುತ್ತಾರೆ. ಸಮರ್ಥ ಗುಣಗಳಿರುವವರು ಆ ಸ್ಥಾನವನ್ನು ನಿಭಾಯಿಸುತ್ತಾರೆ‌ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಮರ್ಥ ಗುಣಗಳಿರುವವರು ಆ ಸ್ಥಾನವನ್ನು ನಿಭಾಯಿಸುತ್ತಾರೆ‌. ಈ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಯಾರೇ ಅಧ್ಯಕ್ಷರಾದರೂ ಪಕ್ಷವನ್ನು ಬಲವರ್ಧನೆ ಮಾಡಬೇಕು. ಈಗಿರುವವರು ಮುಂದುವರೆದರೂ ಸಂತೋಷ. ಬೇರೆಯವರು ಆದರೂ ಸಂತೋಷವೆ. ಯಾರೇ ಅಧ್ಯಕ್ಷರಾದರೂ ಪಕ್ಷ ಸಂಘಟನೆಗೆ ಮುಂದಾಗಬೇಕು. ನಾವು ನಮ್ಮ ಇತಿಮಿತಿಯಲ್ಲಿ ಪಕ್ಷ ಕಟ್ಟುತ್ತಿದ್ದೇವೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಬಾರಿ ಬಿಜೆಪಿ ಮತ್ತಷ್ಟು ಬಲವರ್ಧನೆಯಾಗಲಿದೆ ಎಂದರು.

ನಿಮಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸಲು ಸಿದ್ಧರಿದ್ದೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಶಾಕ್ ಆದ ಯದುವೀರ್ ಅವರು, ನಾನು ರಾಜ್ಯಾಧ್ಯಕ್ಷನಾ? ಎಂದು ಪುನರುಚ್ಛರಿಸಿ ತಬ್ಬಿಬ್ಬಾದರು. ಬಳಿಕ ಮಾತನಾಡಿದ ಅವರು, ಆ ಸ್ಥಾನಕ್ಕೆ ಸರಿಯಾದ ಅರ್ಹತೆ ಇರುವವರು ಆಯ್ಕೆ ಆಗುತ್ತಾರೆ.

ಹಿರಿಯೂರು ಕ್ಷೇತ್ರಕ್ಕೆ ಎನ್‌ಡಿಎ ಅಭ್ಯರ್ಥಿ

ಹಿರಿಯೂರು ಉಪ ಚುನಾವಣೆ ಟಿಕೆಟ್‌ಗಾಗಿ ಬಿಜೆಪಿ- ಜೆಡಿಎಸ್ ನಡುವೆ ಹಗ್ಗಜಗ್ಗಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಿರಿಯೂರಿನಲ್ಲಿ ಎನ್‌ಡಿಎ ಅಭ್ಯರ್ಥಿ ನಿಲ್ಲುತ್ತಾರೆ‌. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಚುನಾವಣೆ ಗೆಲ್ಲುವುದೇ ನಮ್ಮ ಏಕೈಕ ಗುರಿ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.

ಸೋನಿಯಾ ಪುಸ್ತಕ ಓದಲ್ಲ, ಓದಲು ಬೇರೆ ಪುಸ್ತಕ ಇದೆ: ಯದುವೀರ್‌

ನಾನು ಸೋನಿಯಾ ಗಾಂಧಿ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್‌’ ಪುಸ್ತಕ ಓದೋದಿಲ್ಲ. ನನಗೆ ಓದಲು ಬೇರೆ ಪುಸ್ತಕಗಳಿವೆ ಎಂದು ಸಂಸದ ಯದವೀರ್ ಒಡೆಯರ್ ವ್ಯಂಗ್ಯವಾಡಿದರು. ಸೋನಿಯಾ ಗಾಂಧಿ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕುರಿತು ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಅದರಲ್ಲಿ ಅರ್ಧ ಸತ್ಯ, ಅರ್ಧ ಸುಳ್ಳುಗಳಿರುತ್ತವೆ‌. ಕಾಂಗ್ರೆಸ್ ಇತಿಹಾಸವೇ ಅದು. ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಪುಸ್ತಕ, ಕಾಂಗ್ರೆಸ್ ಪೇಪರ್ ಓದುವುದನ್ನು ಬಿಟ್ಟು ನ್ಯೂಸ್ ಚಾನಲ್‌ ನೋಡಲಿ. ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ಗೊತ್ತಾಗುತ್ತದೆ ಎಂದು ಬಿಜೆಪಿ ಅಭಿವೃದ್ಧಿ ಬಗ್ಗೆ ಟೀಕಿಸಿದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ರಾಹುಲ್ ಗಾಂಧಿ ಬಗ್ಗೆ ಪ್ರತಿಕ್ರಿಯಿಸಿ, ಅವರು ವಿದೇಶಿ ಶಕ್ತಿಗಳ ಜೊತೆ ಕೈ ಜೋಡಿಸಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದಾರೆ‌ ಎಂದು ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪತಿಯ ತೊಡೆಯ ಮೇಲೆ ಕುಳಿತೇ ಊಟ ಮಾಡ್ತಿದ್ದ ಸೋನಿಯಾ: ಅಪ್ಪ-ಅಮ್ಮನ ಪ್ರೀತಿ ನೆನಪಿಸಿಕೊಂಡ ರಾಹುಲ್
ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ₹1,000 ಕೋಟಿ ಕೊಡ್ತಿದ್ದಾರೆ: ಹೆಚ್‌ಡಿಕೆ