ಧರ್ಮಸ್ಥಳ ಕೇಸ್ ಕೊಟ್ಟವರ ಒಂದೊಂದೇ ಬಣ್ಣ ಈಗ ಬಯಲಾಗುತ್ತಿದೆ: ಸಂಸದ ಯದುವೀರ್ ಒಡೆಯರ್ ಕಿಡಿ

Published : Oct 30, 2025, 01:40 PM IST
Yaduveer Wadiyar

ಸಾರಾಂಶ

ಕೇಸ್ ಕೊಟ್ಟವರ ಒಂದೊಂದೇ ಬಣ್ಣ ಈಗ ಬಯಲಾಗುತ್ತಿದೆ. ಧರ್ಮಸ್ಥಳದ ಹೆಸರಿಗೆ ಕಪ್ಪು ಮಸಿ ಬಳಿಯಲು ಷಡ್ಯಂತ್ರ ನಡೆದಿತ್ತು ಎಂಬುದು ಮೊದಲಿನಿಂದಲೂ ಗೊತ್ತು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.

ಮೈಸೂರು (ಅ.30): ಕೇಸ್ ಕೊಟ್ಟವರ ಒಂದೊಂದೇ ಬಣ್ಣ ಈಗ ಬಯಲಾಗುತ್ತಿದೆ. ಧರ್ಮಸ್ಥಳದ ಹೆಸರಿಗೆ ಕಪ್ಪು ಮಸಿ ಬಳಿಯಲು ಷಡ್ಯಂತ್ರ ನಡೆದಿತ್ತು ಎಂಬುದು ಮೊದಲಿನಿಂದಲೂ ಗೊತ್ತು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ಧರ್ಮಸ್ಥಳ ಕೇಸ್ ವಾಪಸ್ ವಿಚಾರವಾಗಿ ಮಾತನಾಡಿದ ಅವರು, ಈಗ ಕಾನೂನಾತ್ಮಕವಾಗಿ ಅದು ಸಾಬೀತಾಗುತ್ತಿದೆ. ಯಾವ ಅಸ್ತಿ ಪಂಜರಗಳು ಸಿಗಲಿಲ್ಲ. ಹೀಗಾಗಿ ಕೇಸ್ ವಾಪಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸೌಜನ್ಯ ಕೇಸ್ ಬಗ್ಗೆಯೂ ಪೂರ್ಣವಾಗಿ ತನಿಖೆಯಾಗಲಿ‌. ಎಲ್ಲ ಸತ್ಯಗಳು ಹೊರಬರಲಿ ಎಂದು ತಿಳಿಸಿದರು.

ಸಾಂವಿಧಾನಿಕ ಸಂಸ್ಥೆಗಳಲ್ಲಿ ಇರುವವರಿಗೆ ಗೌರವದಿಂದ ಮಾತನಾಡಬೇಕು. ಅವರ ಸರ್ಕಾರ ಬಂದಿದ್ದು ಕೂಡ ಇದೇ ಚುನಾವಣೆ ವ್ಯವಸ್ಥೆಯಿಂದ. ಸರ್ಕಾರ ಬಂದಾಗ ಸರಿ ಎನ್ನುವುದು ಬರದಿದ್ದಾಗ ತಪ್ಪು ಎನ್ನುವುದು ಎಷ್ಟು ಸರಿ ಎಂಬುದನ್ನ ಅವರೇ ಹೇಳಲಿ. ಯಾರೋ ಒಂದಿಬ್ಬರ ಹೇಳಿಗಳಿಂದ ಈ ವ್ಯವಸ್ಥೆಗೆ ಅನುಮಾನಗಳು ಮೂಡುವುದಿಲ್ಲ. ಅಂತಹ ಅಭಿಪ್ರಾಯಗಳಿಗೆ ಬೆಲೆ ಕೊಡುವುದು ಬೇಡ ಎಂದು ಕೇಂದ್ರ ಚುನಾವಣಾ ಆಯುಕ್ತರನ್ನ ರಾಜಕೀಯ ಪುಡಾರಿ ಎಂದ ಯತೀಂದ್ರ ಸಿದ್ದರಾಮಯ್ಯಗೆ ಯದುವೀರ್ ಒಡೆಯರ್ ತಿರುಗೇಟು ಕೊಟ್ಟರು.

ಕೇಂದ್ರ ಸರ್ಕಾರದ ಕಾರಣಕ್ಕೆ ಕರ್ನಾಟಕದಿಂದ ಉದ್ಯಮಗಳು ಬೇರೆ ಕಡೆ ಹೋಗುತ್ತಿದೆ ಎಂಬ ಆರೋಪ ವಿಚಾರವಾಗಿ, ರಾಜ್ಯ ಸರ್ಕಾರ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೆ ಉದ್ಯಮಗಳು ರಾಜ್ಯದ ಕೈತಪ್ಪುತ್ತಿದೆ ಎಂಬುದು ಯೋಚನೆ ಮಾಡಬೇಕು. ಸುಮ್ಮನೆ ರಾಜಕೀಯವಾಗಿ ಹೇಳುವುದು ಸರಿಯಲ್ಲ. ಕರ್ನಾಟಕದಲ್ಲಿ ವ್ಯವಸ್ಥೆಗಳ ಸರಿಯಿಲ್ಲದ ಕಾರಣ ಉದ್ಯಮಗಳು ಬೇರೆ ಕಡೆ ಹೋಗುತ್ತಿದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎಲ್ಲಾ ವ್ಯವಸ್ಥೆ ಸಿಗುತ್ತಿದೆ. ಹೀಗಾಗಿ ಪಕ್ಕದ ರಾಜ್ಯಕ್ಕೆ ಉದ್ಯಮಗಳು ಹೋಗುತ್ತಿದೆ. ಕರ್ನಾಟಕ ಸರ್ಕಾರ ಯಾವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿದೆ ನೀವೆ ಹೇಳಿ. ಗ್ಯಾರಂಟಿ ಯೋಜನೆ ಬಿಟ್ಟರೆ ಅವರ ಬಾಯಲಿ ಇನ್ನೂ ಏನೂ ಬರುತ್ತಿಲ್ಲ. ಗುಂಡಿ ಮುಚ್ಚಲು ಸಹ ಇಲ್ಲಿ ಹಣ ಇಲ್ಲದಂತಾಗಿದೆ ಎಂದರು.

ಸರ್ಕಾರದ ಚಿಂತನೆ ದಿಕ್ಕು ತಪ್ಪಿಸುವ ಕೆಲಸ

ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ಎಸ್ ಕಾರ್ಯಕ್ರಮ ನಿಷೇಧಿಸಲು ಸರ್ಕಾರ ಚಿಂತಿಸಿರುವುದು ದಿಕ್ಕು ತಪ್ಪಿಸುವ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸೃಷ್ಟಿಸಿದೆ. ಈ ಸರ್ಕಾರಕ್ಕೆ ಒಂದು ರಸ್ತೆ ಮಾಡುವ ಶಕ್ತಿ ಇಲ್ಲ. ಇದನ್ನು ಮುಚ್ಚಿಕೊಳ್ಳಲು ಆರ್ ಎಸ್ಎಸ್ ಬ್ಯಾನ್ ವಿಷಯವನ್ನು ತೆಗೆದುಕೊಂಡಿದೆ. ಇದು ಆರ್ ಎಸ್ ಎಸ್ ನ ಶತಮಾನೋತ್ಸವ ಆಚರಣೆಗೆ ವಿರೋಧ ಅಂತಲ್ಲ. ಬದಲಾಗಿ ಏನೋ ಒಂದು ಸುದ್ದಿ ಸೃಷ್ಟಿಸಬೇಕಾಗಿದೆ. ಏನೋ ಒಂದು ಸುದ್ದಿ ಸೃಷ್ಟಿಸಿ ತನ್ನ ವೈಫಲ್ಯ ಮುಚ್ಚಿಕೊಳ್ಳಬೇಕಾಗಿದೆ. ಅದಕ್ಕಾಗಿ ಹೀಗೆ ಸೃಷ್ಟಿಸಿದೆ ಎಂದರು.

ಇದರ ವಿರುದ್ಧ ನಮ್ಮ ಪಕ್ಷ ಹೋರಾಟ ರೂಪಿಸುತ್ತದೆ. ಸಂಘ ಕೂಡ ಹೋರಾಟ ನಡೆಸುತ್ತದೆ ಎಂದು ಸರ್ಕಾರದ ವಿರುದ್ಧ ಸಂಸದ ಯದುವೀರ್ ಒಡೆಯರ್ ವಾಗ್ದಾಳಿ ನಡೆಸಿದ ಅವರು, ಆರ್ ಎಸ್ ಎಸ್ ಒಂದು ರಾಷ್ಟ್ರಭಕ್ತ ಸಂಘಟನೆ, ಭಾರತೀಯರ ಸಂಸ್ಕೃತಿ ಇರಬಹುದು ಧರ್ಮ ಇರಬಹುದು. ಅವುಗಳನ್ನು ರಕ್ಷಣೆ ಮಾಡುತ್ತಾ ಬಂದಿರುವ ಸಂಸ್ಥೆ ಅದು. ನೂರು ವರ್ಷ ಪೂರೈಸಿರುವಾಗ ಸೇವೆ ದೃಷ್ಟಿಯಿಂದ ಹಲವು ಚಟುವಟಿಕೆ ಮಾಡುತ್ತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಎಸ್ಪಿ ಒಪ್ಪಿಗೆ ಪಡೆಯಬೇಕೆಂಬ ಸರ್ಕಾರದ ನಿಯಮ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಆಸ್ತಿಗಳಲ್ಲಿ ಕಾರ್ಯಕ್ರಮಕ್ಕೆ ನಿಯಮ ಮಾಡಲಿ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ