ಖರ್ಗೆ ಪ್ರಧಾನಿ ಆದರೆ ನನಗೇನೂ ಪ್ರಾಬ್ಲಂ ಇಲ್ಲ: ಸಂಸದ ಉಮೇಶ್‌ ಜಾಧವ್‌

By Kannadaprabha News  |  First Published Aug 1, 2023, 3:00 AM IST

ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಮಂತ್ರಿ ಆಗುತ್ತಾರೆ ಎನ್ನುವುದಾದರೆ ಅದರಿಂದ ನನಗೇನೂ ತೊಂದರೆ ಇಲ್ಲ ಎಂದು ಕಲಬುರಗಿ ಸಂಸದ ಡಾ.ಉಮೇಶ್‌ ಜಾಧವ್‌ ಹೇಳಿದರು.


ಕಲಬುರಗಿ (ಆ.01): ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಮಂತ್ರಿ ಆಗುತ್ತಾರೆ ಎನ್ನುವುದಾದರೆ ಅದರಿಂದ ನನಗೇನೂ ತೊಂದರೆ ಇಲ್ಲ ಎಂದು ಕಲಬುರಗಿ ಸಂಸದ ಡಾ.ಉಮೇಶ್‌ ಜಾಧವ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರನ್ನು ಪರಾಭವಗೊಳಿಸಿದ ಕಾರಣಕ್ಕೆ ತಮ್ಮನ್ನು ಕೇಂದ್ರ ಮಂತ್ರಿ ಮಾಡುವಂತೆ ತಾವು ಕೇಳಿದ್ದೀರಿ ಎಂಬ ವದಂತಿಯಿದೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಸಂಸದ ಜಾಧವ್‌ ಹೀಗೆ ಪ್ರತಿಕ್ರಿಯಿಸಿದರು. ಅವರು ಖರ್ಗೆಯಾದರೆ, ನಾನು ಜಾಧವ್‌. ಎಲ್ಲರಿಗೂ ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ. ಇಷ್ಟಕ್ಕೂ ಅವರು ಪ್ರಧಾನಿ ಆಗೋದಾದರೆ ಅದರಲ್ಲಿ ನನಗೇನೂ ಪ್ರಾಬ್ಲಂ ಇಲ್ಲ. 

ಇಡೀ ದೇಶದಲ್ಲಿ ಹಿಂದುಳಿದ ಬಂಜಾರ ಸಮುದಾಯದಿಂದ ಆಯ್ಕೆಗೊಂಡಿರುವ ಏಕೈಕ ಸಂಸದನಾಗಿ ಕಾರ್ಯನಿರ್ವಹಿಸುತ್ತಿದ್ದು, ಅತ್ಯಂತ ಹಿಂದುಳಿದ ಜಾತಿಯಿಂದ ಬಂದಿದ್ದರೂ ಒಳ್ಳೆಯ ವಿದ್ಯಾರ್ಹತೆಯಿದೆ. ಮೇಲಾಗಿ, ಸದನದಲ್ಲಿ ಅತಿ ಹೆಚ್ಚು ಕ್ರಿಯಾಶೀಲ ಸಂಸದ ಎಂಬುದು ಎಲ್ಲರಿಗೂ ಗೊತ್ತಿದೆ. ಇಷ್ಟಕ್ಕೂ ಮಂತ್ರಿ ಸ್ಥಾನ ಸಿಕ್ಕರೂ-ಸಿಗದಿದ್ದರೂ ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಬರುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ರಾಜ್ಯದ 13 ಹಾಲಿ ಸಂಸದರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆಯಿದೆ ಎಂಬ ವದಂದಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೇ ಟಿಕೆಟ್‌ ಕೊಟ್ಟರೂ; ಅವರ ಪರವಾಗಿ ನಾವೆಲ್ಲರೂ ಕಾರ್ಯನಿರ್ವಹಿಸುತ್ತೇವೆ. 

Tap to resize

Latest Videos

undefined

ಆಗಸ್ಟ್‌ ಮೊದಲ ವಾರವೇ ಭದ್ರಾ ನಾಲೆಗೆ ನೀರು: ಸಚಿವ ಮಲ್ಲಿಕಾರ್ಜುನ್‌

ಒಟ್ಟಾರೆ, ರಾಜ್ಯದಲ್ಲಿ ಈ ಬಾರಿ 22ರಿಂದ 25 ಸಂಸದರು ಆಯ್ಕೆಗೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಂತು ನಿಜ ಎಂದು ನುಡಿದರು. ಕಲಬುರಗಿ ನಗರದ ಸುತ್ತಲೂ ಎರಡನೇ ರಿಂಗ್‌ ರಸ್ತೆ ನಿರ್ಮಾಣ ಕುರಿತಂತೆ ಇತ್ತೀಚೆಗೆ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ತಾವು ಚರ್ಚಿಸಿದ್ದು, ನಿತ್ಯ ಸುಮಾರು 40 ಸಾವಿರ ವಾಹನಗಳು ಹಾಲಿ ರಿಂಗ್‌ ರಸ್ತೆ ಮೂಲಕ ಹಾದು ಹೋಗುತ್ತವೆ ಎಂದು ಪ್ರಮುಖ ಮಾಹಿತಿಯನ್ನು ಅವರ ಗಮನಕ್ಕೆ ತಂದಿದ್ದೇನೆ. ಎಲ್ಲ ಮಾಹಿತಿ ಆಲಿಸಿದ ಸಚಿವರು ಆದಷ್ಟುಶೀಘ್ರ ಪೂರಕ ವರದಿ ತರಿಸಿಕೊಂಡು ಕಾಮಗಾರಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ, ಶಶೀಲ್‌ ನಮೋಶಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್‌ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ…, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹರ್ಷಾನಂದ ಗುತ್ತೇರ್ದಾ, ರವಿರಾಜ ಕೊರವಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾರ್ದಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಂಸದರ ನಿಧಿ ಬಳಕೆ, ನಿಯಮ ಬದಲು: ಈ ಹಿಂದೆ ಸಂಸದರ ನಿಧಿಯನ್ನು ಖರ್ಚು ಮಾಡಿದ ಬಳಿಕ ಬಳಕೆಯ ಪ್ರಮಾಣಪತ್ರ (ಯುಟಿಲೈಸೇಷನ್‌ ಸರ್ಟಿಫಿಕೆಚ್‌) ನೀಡಿದರೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿತ್ತು. ಆದರೆ, ಇತ್ತೀಚೆಗೆ ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ನಿಯಮಾವಳಿ ಬದಲಿಸಿದೆ. ಹೀಗಾಗಿ, ಇನ್ನು ಮುಂದೆ ಯುಟಿಲೈಸೇಷನ್‌ ಸರ್ಟಿಫಿಕೆಟ್‌ ಇಲ್ಲದೆಯೂ ನೇರವಾಗಿ ಸಂಸದರ ಖಾತೆಗೆ ಅನುದಾನ ಜಮಾ ಆಗಲಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಕುರಿತಾದ ಆದೇಶ ಹೊರಬೀಳಲಿದೆ. ಈವರೆಗೆ ತಾವು ಸುಮಾರು ಎರಡುವರೆ ಕೋಟಿ ಅನುದಾನ ಪಡೆದಿದ್ದು, ಇನ್ನೂ ಎಂಟರಿಂದ 10 ಕೋಟಿ ರು. ಅನುದಾನ ಬರಬಹುದು ಎಂದು ಸಂಸದ ಡಾ.ಉಮೇಶ್‌ ಜಾಧವ್‌ ಮಾಹಿತಿ ನೀಡಿದರು.

ರೈಲ್ವೆ ಡಿವಿಷನ್‌, ವರದಿ ಬಳಿಕ ಕ್ರಮ: ಕಲಬುರಗಿ ಸೇರಿದಂತೆ ದೇಶದ ಯಾವ ಯಾವ ಭಾಗಗಳಲ್ಲಿ ರೈಲ್ವೆ ಡಿವಿಷನ್‌ ಸ್ಥಾಪನೆಯ ಅಗತ್ಯವಿದೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಈ ಹಿಂದಿನ ರೈಲ್ವೆ ಖಾತೆ ರಾಜ್ಯ ಸಚಿವ ದಿ.ಸುರೇಶ್‌ ಅಂಗಡಿಯವರು ರಚಿಸಿರುವ ಪರಿಶೀಲನಾ ಸಮಿತಿ ವರದಿ ಸಂಗ್ರಹಿಸುತ್ತಿದೆ. ಈ ವರದಿ ಬಂದ ಬಳಿಕ ಕಲಬುರಗಿ ನಗರದಲ್ಲಿ ರೈಲ್ವೆ ಡಿವಿಷನ್‌ ಸ್ಥಾಪಿಸುವ ಕುರಿತು ಸ್ಪಷ್ಟಚಿತ್ರಣ ದೊರೆಯಲಿದೆ ಎಂದು ಸಂಸದ ಡಾ.ಉಮೇಶ್‌ ಜಾಧವ್‌ ಸ್ಪಷ್ಟೀಕರಣ ನೀಡಿದರು.

ಪತ್ರ ರಾದ್ಧಾಂತ, ಎಫ್‌ಎಸ್‌ಎಲ್‌ ತನಿಖೆ ಆಗಲಿ: ಆಳಂದ ಶಾಸಕ ಬಿ.ಆರ್‌. ಪಾಟೀಲ್‌ ನೇತೃತ್ವದಲ್ಲಿ ಕೆಲವು ಶಾಸಕರು ಬರೆದಿದ್ದ ಬಹಿರಂಗ ಪತ್ರದಲ್ಲಿ ಕೆಲವು ವಿವಾದಾತ್ಮಕ ಅಂಶಗಳು ಸೇರ್ಪಡೆಗೊಂಡಿರುವುದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಬಿ.ಆರ್‌.ಪಾಟೀಲ್‌ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನೀಡಿರುವ ದೂರಿನ ಕುರಿತು ವಿಧಿ ವಿಜ್ಞಾನ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್‌ ಒತ್ತಾಯಿಸಿದರು. ಒಂದುವೇಳೆ, ಬಿಜೆಪಿಯವರು ಪಾಟೀಲ್‌ ಹಾಗೂ ಅವರ ಕೆಲವು ಬೆಂಬಲಿಗ ಶಾಸಕರು ಬರೆದಿರುವ ಪತ್ರದಲ್ಲಿ ಅನಗತ್ಯ ಅಂಶಗಳನ್ನು ಸೇರ್ಪಡೆ ಮಾಡಿರುವುದೇ ನಿಜವಾಗಿದ್ದಲ್ಲಿ ಆ ಕುರಿತು ವಿಧಿ ವಿಜ್ಞಾನ ಸಂಸ್ಥೆಯಿಂದ ಸತ್ಯ ಬಹಿರಂಗಗೊಳ್ಳಲಿದೆ. 

ಆ.15ರಿಂದ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ: ಸಚಿವ ಕೃಷ್ಣ ಬೈರೇಗೌಡ

ಈ ನಿಟ್ಟಿನಲ್ಲಿ ಕೂಡಲೇ ಪೊಲೀಸ್‌ ವರಿಷ್ಠಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಇಷ್ಟಕ್ಕೂ ಬಿ.ಆರ್‌. ಪಾಟೀಲ್‌ ಹಾಗೂ ಅವರ ಬೆಂಬಲಿಗರು ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ವರ್ಗಾವಣೆಗೆ ಸಂಬಂಧಿಸಿದಂತೆ ಡೀಲ್‌ ಮಾಡಿಕೊಂಡಿದ್ದರು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆಯವರ ಗಮನಕ್ಕೆ ಬಂದ ಕಾರಣಕ್ಕೆ ಅವರು ತಮ್ಮ ವಿವೇಚನೆ ಬಳಸಿ ಟ್ರಾನ್ಸ್‌ಫರ್‌ ವಿಷಯದಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ತಾವು ಬಯಸಿದಂತೆ ವರ್ಗಾವಣೆ ಆಗಿಲ್ಲ ಎನ್ನುವ ಕಾರಣಕ್ಕಾಗಿ ಬಿ.ಆರ್‌. ಪಾಟೀಲ್‌ ಇಂತಹ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಗುತ್ತೇದಾರ್‌ ಲೇವಡಿ ಮಾಡಿದರು.

click me!