ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಬಿಜೆಪಿ ಪಕ್ಷಕ್ಕೆ ರೆಬಲ್ ಆಗಿ ಸ್ವಪಕ್ಷದ ನಾಯಕರ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ಇನ್ನು ಉಚ್ಚಾಟಿತ ಮಾಜಿ ಶಾಸಕ ಗುರುಸಿದ್ದನಗೌಡರನ್ನು ಭೇಟಿ ಆಗಿ ಬಿಜೆಪಿ ಪಕ್ಷದ ನಾಯಕರಿಗೆ ಕೆರಳಿಸುವಂತೆ ಮಾಡಿದೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಸೆ.11): ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ವಿಧಾನಸಭೆಯಲ್ಲಿ ಸೋತು ಮಂಡಿಯೂರಿದೆ, ಬಿಜೆಪಿ ಸೋತ ಬಳಿಕ ಅದೇ ಪಕ್ಷದ ನಾಯಕರು ಸ್ವಪಕ್ಷದ ವಿರುದ್ಧವೇ ಟೀಕಾಪ್ರಹಾರಕ್ಕೆ ಮುಂದಾಗಿದ್ದಾರೆ. ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಬಿಜೆಪಿ ಪಕ್ಷಕ್ಕೆ ರೆಬಲ್ ಆಗಿ ಸ್ವಪಕ್ಷದ ನಾಯಕರ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ಇನ್ನು ಉಚ್ಚಾಟಿತ ಮಾಜಿ ಶಾಸಕ ಗುರುಸಿದ್ದನಗೌಡರನ್ನು ಭೇಟಿ ಆಗಿ ಬಿಜೆಪಿ ಪಕ್ಷದ ನಾಯಕರಿಗೆ ಕೆರಳಿಸುವಂತೆ ಮಾಡಿದೆ. ಇದಲ್ಲದೆ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿ ಬಿಜೆಪಿ ಪಕ್ಷದಿಂದಲೇ ವಜಾ ಆಗಿರುವ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರನ್ನು ಭೇಟಿ ಮಾಡಿರುವುದು ರೇಣುಕಾಚಾರ್ಯರ ನಡೆ ನಿಗೂಢವಾಗಿದೆ.
undefined
ರಾಜ್ಯ ವಿಧಾನ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದೆ. ಬಿಎಸ್ ವೈ ಕಡೆಗಣಿಸಿದ್ದೆ ಚುನಾವಣೆಯಲ್ಲಿ ಸೋಲಿಗೆ ಕಾರಣ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕೆರಳಿ ಕೆಂಡವಾಗಿ, ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ, ಪಕ್ಷದಿಂದ ನೋಟಿಸ್ ನೀಡಿದ್ರು ಕ್ಯಾರೆ ಎನ್ನದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಜಿಲ್ಲೆಯಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬೇಕಾಬಿಟ್ಟು ಪಕ್ಷದ ವಿರುದ್ಧ ಹೇಳಿಕೆಗಳನ್ನು ಕೊಡ್ತಾ ಪಕ್ಷದ ನಾಯಕರ ಕೆಂಗ್ಗಣ್ಣಿಗೆ ಗುರಿಯಾಗಿದ್ದಾ ರೇಣುಕಾಚಾರ್ಯ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
ಡಿಕೆಶಿ ಒತ್ತಡದಿಂದಲೇ ರಾಮನಗರ ಮೆಡಿಕಲ್ ಕಾಲೇಜು ಸ್ಥಳಾಂತರ: ನಿಖಿಲ್ ಕುಮಾರಸ್ವಾಮಿ
ಅಲ್ಲದೆ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಪಕ್ಷದಿಂದಲೇ ಉಚ್ಚಾಟಿಸಲ್ಪಟ್ಟಿರುವ ಜಗಳೂರಿನ ಮಾಜಿ ಶಾಸಕ ಗುರುಸಿದ್ದನಗೌಡ್ರನ್ನು ಕಳೆದ ದಿನ ಭೇಟಿಯಾಗಿ ಪರೋಕ್ಷವಾಗಿ ನಾನು ನಿಮ್ಮೊಂದಿಗೆ ಇದ್ದೇನೆ ಎಂಬ ಸಂದೇಶ ರವಾನಿಸಿದ್ದರು. ಗುರುಸಿದ್ದನಗೌಡ್ರರನ್ನು ಭೇಟಿಯಾಗಿದ್ದಕ್ಕೆ ಜಿಲ್ಲಾ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಗುರುಸಿದ್ದನಗೌಡ್ರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಅಭ್ಯರ್ಥಿಯಾಗಿದ್ದಾ ಎಸ್ ವಿ ರಾಮಚಂದ್ರಪ್ಪ ಪಕ್ಷದ ಜಿಲ್ಲಾಧ್ಯಕ್ಷರಿಗೆ ದೂರು ನೀಡಿದ್ದರಿಂದ ಗುರುಸಿದ್ದನಗೌಡ ಅವರನ್ನು ಉಚ್ಚಾಟಿಸಿದ್ದರು, ಹೀಗಾಗಿ ಗುರುಸಿದ್ದನಗೌಡ ಮನೆಗೆ ಭೇಟಿ ನೀಡಿದ ರೇಣುಕಾಚಾರ್ಯ, ಜಿಲ್ಲಾಧ್ಯಕ್ಷನ ಏಕಪಕ್ಷೀಯ ನಿರ್ಧಾರಕ್ಕೆ ಕೆಂಡಕಾರಿದ್ದಾರೆ ಎಂ ಪಿ ರೇಣುಕಾಚಾರ್ಯ "
ಮಾಡಾಳ್ ವಿರೂಪಾಕ್ಷಪ್ಪನವರನ್ನು ಭೇಟಿಯಾದ ರೇಣುಕಾಚಾರ್ಯ: ಪಕ್ಷಕ್ಕೆ ರೆಬಲ್ ಆಗಿ ಹೇಳಿಕೆ ಕೋಡ್ತಿದ್ದಾ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಧಿಡೀರ್ ಎಂಬಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿ ಪಕ್ಷದಿಂದ ವಜಾ ಆಗಿರುವ ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಗೆ ರೇಣುಕಾಚಾರ್ಯ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಚನ್ನೇಶಪುರ ಗ್ರಾಮದಲ್ಲಿರುವ ಮಾಡಾಳ್ ವಿರೂಪಾಕ್ಷಪ್ಪ ರವರ ನಿವಾಸಕ್ಕೆ ಉಚ್ಚಾಟಿತ ಮಾಜಿ ಶಾಸಕ ಗುರುಸಿದ್ದನಗೌಡ್ರು ಹಾಗು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಭೇಟಿ ನೀಡಿ ಕೆಲ ಕಾಲ ಮಾತುಕತೆ ನಡೆಸಿದರು.
ರೇಣುಕಾಚಾರ್ಯರವರು ಹೆಚ್ಚಿನದಾಗಿ ದಾವಣಗೆರೆ ಜಿಲ್ಲೆಯ ಬಿಜೆಪಿ ಅತೃಪ್ತರನ್ನು ಭೇಟಿಯಲ್ಲಿ ನಿರತರಾದ್ದಾರೆ. ಲೋಕಾಯುಕ್ತ ಪ್ರಕರಣದಲ್ಲಿ ಸಿಲುಕಿ ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದ ಮಾಡಾಳ್ ವಿರೂಪಾಕ್ಷಪ್ಪ ಭೇಟಿಗೆ ಮಾಡಿ ಜಿಎಂ ಸಿದ್ದೇಶ್ವರ್ ರವರಿಗೆ ನಾವೇಲ್ಲ ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಿದ್ರು. ಇನ್ನು ಈ ಎರಡು ಭೇಟಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ರೇಣುಕಾಚಾರ್ಯ ನಡೆ ನಿಗೂಢವಾಗಿದೆ. ಇನ್ನು ಲೋಕಾಸಭಾ ಚುನಾವಣೆಯ ಟಿಕೇಟ್ ಅಕಾಂಕ್ಷಿ ಯಾಗಿರುವ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅತೃಪ್ತರನ್ನು ಉಚ್ಚಾಟಿತರನ್ನು ಭೇಟಿ ಆಗಿ ಸಂಸದ ಸಿದ್ದೇಶ್ವರ್ ವಿರುದ್ಧ ಸಮರ ಸಾರಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಅನುಮಾನ ಹುಟ್ಟು ಹಾಕಿದೆ.
ಮಾಡಾಳ್ ವಿರೂಪಾಕ್ಷಪ್ಪನವರನ್ನು ಭೇಟಿಯಾಗಿ ಪ್ರತಿಕ್ರಿಯಿಸಿದ ಎಂಪಿ ರೇಣುಕಾಚಾರ್ಯ ಯಾವತ್ತು ಬಕೆಟ್ ಹಿಡಿಯುವ ಕೆಲಸ ಮಾಡೋದಿಲ್ಲ ಕಹಿ ಘಟನೆಗಳ ಸತ್ಯಾಂಶ ಹೊರ ಬರುತ್ತದೆ. ವಿರೂಪಾಕ್ಷಪ್ಪನವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ,ಆದರೆ ಕೆಲ ಘಟನೆಯಿಂದ ಅವರ ಕುಟುಂಬಕ್ಕೆ ಸಂಕಷ್ಟ ಬಂದಿದೆ, ನಾನು ಅಗಿನಿಂದಲೂ ಅವರ ಕುಟುಂಬದ ಜೊತೆ ಇದ್ದು ಧೈರ್ಯ ತುಂಬಿದ್ದೇನೆ, ಬಿಜೆಪಿಯಿಂದ ನನಗೂ ನೋಟೀಸ್ ನೀಡಿದ್ದಾರೆ, ಸಂಘಟನೆ ಕತ್ತರಿಯಾಗಬಾರದು ದಾರ ಸೂಜಿಯಾಗಬೇಕು.
ಕೆಲವರು ಯಾರು ಬಂದರೇನು ಇದ್ದರೇನು ಎಂದು ನಿರ್ಲಕ್ಷ್ಯದ ಮಾತುಗಳನ್ನಾಡುತ್ತಿದ್ದಾರೆ. ಯಡಿಯೂರಪ್ಪ ನವರು ಜಾತಿ ವಾದಿಯಲ್ಲ, ಮಾಸ್ ಲೀಡರ್, ಆದರೆ ಈಗ ಹೇಗೆ ನಡೆಸಿಕೊಂಡಿದ್ದಾರೆ ಎಂದು ನೋವಾಗಿ ಮಾತುಗಳನ್ನಾಡಿದ್ದೇವೆ, ಸತ್ಯ ಹೇಳಿದ್ದಕ್ಕೆ ಕೆಲವರು ನಮ್ಮ ಮೇಲೆ ಸಿಟ್ಟಾಗಿದ್ದಾರೆ.ಬಿಜೆಪಿಯನ್ನು ಕೆಲವರು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ನೋಡುತ್ತಿದ್ದಾರೆ.ಬಿಜೆಪಿ ಯಾರೋಬ್ಬರ ಆಸ್ತಿಯಲ್ಲ ಕಾರ್ಯಕರ್ತರ ಆಸ್ತಿ. ಯಡಿಯೂರಪ್ಪ ಏನ್ ಹೇಳ್ತಾರೆ ಅದನ್ನು ರೇಣುಕಾಚಾರ್ಯ ಮಾತನಾಡುತ್ತಾರೆ ಎನ್ನುತ್ತಾರೆ. ಯಡಿಯೂರಪ್ಪ ನವರು ಇಂತಹ ಕೀಳು ಮಟ್ಟದ ರಾಜಕಾರಣ ಮಾಡೋದಿಲ್ಲ, ಇನ್ನು ದಾವಣಗೆರೆಯಿಂದ ಲೋಕಸಭೆ ಬಿಜೆಪಿ ಆಕಾಂಕ್ಷಿ ಎಂದು ರೇಣುಕಾಚಾರ್ಯ ಮತ್ತೇ ಗುಡುಗಿದ್ರು
5 ಭರವಸೆಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದ ಕಾಂಗ್ರೆಸ್: ಸಂಸದ ಸುರೇಶ್
ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ತಟಸ್ಥಳ: ನಾವು ನೋವಿನಲ್ಲಿದ್ದೇವೆ, ಯಾವುದೇ ರಾಜಕೀಯ ಬದಲಾವಣೆ ಬೆಳವಣಿಗೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಿಲ್ಲ, ಚುನಾವಣೆ ಸಮೀಪಿಸಿದಾಗ ಒಂದು ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ, ಸಧ್ಯ ಮಟ್ಟಿಗೆ ತಟಸ್ಥ ನಿಲುವು ವ್ಯಕ್ತಪಡಿಸಿದರು, ಗುರುಸಿದ್ದನಗೌಡ ಹಾಗು ರೇಣುಕಾಚಾರ್ಯ ಭೇಟಿ ಸಹಜ ಬೇಟಿಯಾಗಿದೆ, ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ, ಬೆಂಗಳೂರಿನಲ್ಲಿ ದಾವಣಗೆರೆ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಭೇಟಿ ಸಹಜ ಭೇಟಿ, ನಮಗೆ ರಾಜಕಾರಣದಲ್ಲಿ ಎಲ್ರೂ ಬೇಕಾಗ್ತಾರೆ, ಮೊನ್ನೆ ವಿರೋಧಿಗಳು ಕೂಡ ಅನುಕಂಪ ವ್ಯಕ್ತಪಡಿಸಿದರು.