
ವಿಜಯಪುರ (ಮೇ.31): ನನ್ನ ಅನುಭವವನ್ನ ಪಕ್ಷ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ ಎಂದು ಸಂಸದ ರಮೇಶ್ ಜಿಗಜಿಣಗಿ ಅಸಮಧಾನ ವ್ಯಕ್ತಪಡಿಸಿದರು.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದರು, ಲೋಕಸಭಾ ಚುನಾವಣೆಯಲ್ಲಿ ಪಕ್ಷದವರು ನನ್ನ ಅನುಭವವನ್ನು ಹಂಚಿಕೊಳ್ಳಲಿಲ್ಲ. ಪಕ್ಷದಿಂದ ನಡೆಯಿಂದ ನೋವಾಗಿದೆ. 45 ವರ್ಷದ ರಾಜಕಾರಣದಲ್ಲಿ 20 ವರ್ಷ ಮಂತ್ರಿ ಆಗಿದ್ದೆ. ನಾನು ರಾಜಕಾರಣದಲ್ಲಿಯೇ ಹಿರಿಯನಾಗಿದ್ದೇನೆ. ನನ್ನಂತಹ ಹಿರಿಯ ಮನುಷ್ಯ ಪಕ್ಷದಲ್ಲಿ ಯಾರೂ ಇಲ್ಲ. ನನ್ನ ಹಿರಿತನ, ನನ್ನ ಅನುಭವ ಪಕ್ಷ ಬಳಸಿಕೊಳ್ಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ವೇಳೆಯೂ ಅಸಮಾಧಾನ ಹೊರಹಾಕಿದ್ದ ಸಂಸದ ರಮೇಶ್ ಜಿಗಜಿಣಗಿ. ಇದೀಗ ಲೋಕಸಭಾ ಚುನಾವಣೆ ಬಳಿಕ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.
ಪೊಲೀಸರು ಸಂವಿಧಾನ ಪ್ರಕಾರ ಕೆಲಸ ಮಾಡುತ್ತಿಲ್ಲ: ಶಾಸಕ ಭರತ್ ಶೆಟ್ಟಿ ಆಕ್ರೋಶ
ಮಂತ್ರಿ ಸ್ಥಾನ ಕೊಟ್ಟರೆ ಬೇಡ ಅನ್ನಲ್ಲ:
ನಾನು ಈ ಬಾರಿ ಕೇಂದ್ರದಲ್ಲಿ ಮಂತ್ರಿ ಸ್ಥಾನ ಬೇಕು ಅನ್ನೊಲ್ಲ, ಅವರು ಕೊಟ್ಟರೆ ಬೇಡ ಅನ್ನೊಲ್ಲ. ನನ್ನನ್ನು ಮಂತ್ರಿ ಮಾಡಿ ಎಂದು ಯಾರ ಮನೆಗೂ ಹೋಗಿ ಕೇಳೊಲ್ಲ ಅವರಾಗೇ ಮಾಡಿದ್ರೆ ಮಾಡಲಿ. ಅದು ಆಗು, ಇದು ಆಗು ಅಂದ್ರೆ ಆಗೊಲ್ಲ. ನನ್ನ ವಯಸಿಗೆ ತಕ್ಕಂತೆ ಏನಾದರೂ ಕೊಡಬೇಕು ಸಣ್ಣ ಹುಡುಗರಂತೆ ಏನೋ ಒಂದು ಕೊಡಬಾರದು. ಹಿಂದೆ ಮಂತ್ರಿ ಮಾಡಿದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅದನ್ನಾದರೂ ಪರಿಗಣಿಸಿ ಸಚಿವ ಸ್ಥಾನ ಕೊಡುವುದಿದ್ರೆ ಕೊಡಲಿ. ನಾನು ಯಾರ ಬಳಿಯೂ ಒತ್ತಾಯ ಮಾಡುವುದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.