ಸಿಎಂ, ಡಿಸಿಎಂ ಮಧ್ಯೆ ಏನು ಚರ್ಚೆ ಆಗುತ್ತೆ ಅನ್ನೋದನ್ನ ಸಲೀಂ ಅಹ್ಮದ್ ತಿಳಿದುಕೊಳ್ಳಲಿ: ಸಂಸದ ಬೊಮ್ಮಾಯಿ

By Kannadaprabha News  |  First Published Jun 30, 2024, 4:12 PM IST

ಸಿಎಂ, ಡಿಸಿಎಂ ಮಧ್ಯೆ ಏನು ಚರ್ಚೆ ಆಗುತ್ತೆ ಅನ್ನೋದನ್ನ ಸಲೀಂ ಅಹ್ಮದ್ ತಿಳಿದುಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಸಂಸದರೂ ಆಗಿರುವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಹಾವೇರಿ (ಜೂ.30): ಸಿಎಂ, ಡಿಸಿಎಂ ಮಧ್ಯೆ ಏನು ಚರ್ಚೆ ಆಗುತ್ತೆ ಅನ್ನೋದನ್ನ ಸಲೀಂ ಅಹ್ಮದ್ ತಿಳಿದುಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಸಂಸದರೂ ಆಗಿರುವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸರ್ಕಾರ ಬೀಳುತ್ತೆ ಅಂತ ಬೊಮ್ಮಾಯಿ ಹಗಲು ಕನಸು ಕಾಣುತ್ತಿದ್ದಾರೆ ಎಂಬ ಸಲೀಂ ಅಹ್ಮದ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರ್ ಯಾರದ್ದೋ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಸಲೀಂ ಅಹ್ಮದ ಪರಿಷತ್ ಸದಸ್ಯರು. ಸಿಎಂ, ಡಿಸಿಎಂ ಮಧ್ಯೆ ಏನು ಚರ್ಚೆ ಆಗುತ್ತೆ ಅನ್ನೋದನ್ನ ಸ್ವಲ್ಪ ತಿಳಿದುಕೊಳ್ಳಲಿ. ಅವರು ಗೊತ್ತಿದ್ದೂ ಹೀಗೆ ಹೇಳ್ತಿದ್ದಾರೆ. ಪಾಪ ಸಲೀಂ ಅಹ್ಮದ್ ಬಗ್ಗೆ ಕನಿಕರ ಬರುತ್ತೆ. ಅವರ ಕಾಲ ಕೆಳಗೇನೆ ನೆಲ ಸರಿಯುತ್ತಿದ್ದರೂ ಗೊತ್ತಾಗ್ತಿಲ್ಲ. ಅಂದ್ರೆ ನಾನೇನು ಮಾಡಲಿ ಎಂದು ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿನ ಡೆಂಗ್ಯೂ ಪ್ರಕರಣಗಳ‌ ಹೆಚ್ಚಳ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಒಂದು ಕಾಲದಲ್ಲಿ ಕಾಲರಾ, ಇತರೆ ವೈರಲ್ ಇತ್ತೋ ಹಾಗೇ ಈಗ ಡೆಂಗ್ಯೂ ಬಂದಿದೆ. ಡೆಂಗ್ಯೂ ಬಗ್ಗೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು. ಈ ಅಧಿಕಾರಿಗಳು ಯಾವುದೇ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವುದಿಲ್ಲ.ಜಿಲ್ಲಾಧಿಕಾರಿಗೆ, ಡಿಹೆಚ್ಓ,ಮತ್ತು ಜಿಲ್ಲಾ ಸರ್ಜನ್ ಅವರಿಗೆ ನಾನು ಆಗ್ರಹ ಮಾಡ್ತೇನೆ. ಡೆಂಗ್ಯೂ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಡೆಂಗ್ಯೂ ನಿಯಂತ್ರಣಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು?. ಕೇಸ್ ಬಂದಿಲ್ಲ ಅಂತಾ ನೆಪ ಹೇಳೋ ಅವಶ್ಯಕತೆ ಇಲ್ಲಾ ಡೆಂಗ್ಯೂ ನಿಯಂತ್ರಣ ಮಾಡೋದಕ್ಕೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಅಂತಾ ಆಗ್ರಹ ಮಾಡ್ತೆನೆ ಎಂದರು.

Tap to resize

Latest Videos

undefined

ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ, ಸಿದ್ದರಾಮಯ್ಯ ಖುರ್ಚಿಯಲ್ಲಿ ಕುಳಿತಿದ್ದಾರೆ: ಸಚಿವ ಜಮೀರ್‌ ಅಹ್ಮದ್‌ ಖಾನ್

ಮೊನ್ನೆ ಹಾನಗಲ್‌ನಲ್ಲಿ ನಾವೇ ಡೆಂಗ್ಯು ರೋಗಿಯನ್ನು ಎಸ್,ಡಿ,ಎಮ್ ಗೆ ಸೇರತಿಸಿದ್ವಿ. ಅದು ಕೂಡಾ ಡೆತ್ ಆಗಿದೆ. ಈ ತರಾ ಹಲವಾರು ಪ್ರಕರಣಗಳು ಆಗಿವೆ. ಮೊನ್ನೆ ನಾನು ಮೀಟಿಂಗ್ ನಲ್ಲೂ ಹೇಳಿದ್ದೇನೆ. ಶಿಶು ಮರಣ,ಮತ್ತು ಗರ್ಬಿಣಿಯರ ಮರಣದ ಲೆಕ್ಕ ಖಾಸಗಿ ಆಸ್ಪತ್ರೆಲ್ಲಿ ಇಡುತ್ತಿಲ್ಲ. ಬರೀ ಸರ್ಕಾರಿ ಆಸ್ಪತ್ರೆಯಲ್ಲಿ ಲೆಕ್ಕ ಇಡ್ತಿದ್ದಾರೆ. ಹಾವೇರಿಯಲ್ಲಿ ಚಿಕಿತ್ಸೆ ಸಿಗದೆ ದಾವಣಗೇರೆಗೆ ಹೋಗುವ ಜನ ಇದ್ದಾರೆ . ಅದನ್ನೂ ಕೂಡಾ ನೀವು ಲೆಕ್ಕ ಹಿಡಿದು ಮಾಡಬೇಕು. ಅಂದಾಗ ಸರಿಯಾದ ಚಿಕಿತ್ಸೆಯಾಗುತ್ತೆ, ಲೆಕ್ಕ ಬರುತ್ತೆ. ಬರೀ ಹಾವೇರಿ ಅಷ್ಟೇ ಅಲ್ಲ. ಜನ ಬೇರೆ ಬೇರೆ ಕಡೆ ಚಿಕಿತ್ಸೆ ತಗೋತಿದ್ದಾರೆ. ನನಗೆ ಗೊತ್ತಿದ್ದಂತೆ ನಾವೇ ಅಡ್ಮಿಂಟ್ ಮಾಡಿಸಿದ್ದೇವೆ. ಆ ಪ್ರಕರಣಗಳನ್ನೂ ಲೆಕ್ಕ ತಗೊಂಡು ವರದಿ ಕಳಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

click me!