ಲೋಕಸಭಾ ಚುನಾವಣೆ 2024: ಸಿಪಿಐ ಗೆದ್ದರೆ ರಾಜ್ಯಪಾಲ ಹುದ್ದೆ ರದ್ದು, ಖಾಸಗಿಯಲ್ಲೂ ಮೀಸಲು

By Kannadaprabha NewsFirst Published Apr 7, 2024, 11:48 AM IST
Highlights

ಸಿಪಿಐ ಪಕ್ಷ ಅಧಿಕಾರಕ್ಕೆ ರಾಜ್ಯಪಾಲ ಹುದ್ದೆಯನ್ನೇ ರದ್ದು, ಸಿಎಎ ಕಾಯ್ದೆ ರದ್ದು, ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಕ್ಕೆ ಇರುವ ಇರುವ ಶೇ.50ರ ಮೀಸಲು ಮಿತಿ ರದ್ದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.

ನವದೆಹಲಿ(ಏ.07): ಲೋಕಸಭಾ ಚುನಾವಣೆ ಹಿನ್ನೆಲೆ ಸಿಪಿಐ ಪಕ್ಷ ಶನಿವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪಕ್ಷ ಅಧಿಕಾರಕ್ಕೆ ರಾಜ್ಯಪಾಲ ಹುದ್ದೆಯನ್ನೇ ರದ್ದು, ಸಿಎಎ ಕಾಯ್ದೆ ರದ್ದು, ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಕ್ಕೆ ಇರುವ ಇರುವ ಶೇ.50ರ ಮೀಸಲು ಮಿತಿ ರದ್ದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.

ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್‌ ಪ್ರಣಾಳಿಕೆ ರೀತಿ ಇದೆ: ಪ್ರಧಾನಿ ಮೋದಿ

ಪ್ರಣಾಳಿಕೆ ಮುಖ್ಯಾಂಶ

• ಸಿಎಎ ಕಾಯ್ದೆ ರದ್ದು/ ರಾಜ್ಯಪಾಲರ ಕಚೇರಿ ರದ್ದು. ರಾಜ್ಯಗಳಿಗೆ ಹೆಚ್ಚಿನ ಅಧಿಕಾರದ ಭರವಸೆ. ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಇರುವ ಶೇ.50 ಮೀಸಲಾತಿ ರದ್ದತಿ.
• ನರೇಗಾ ದಿನಗೂಲಿ 700ಕ್ಕೆ ಹೆಚ್ಚಳ.
. ಅಸಮಾನತೆ ತೊಡೆದು ಹಾಕಲು ಕ್ರಮ.
• ಶ್ರೀಮಂತರಿಗೆ ಹೆಚ್ಚು ತೆರಿಗೆ/ ಖಾಸಗಿ ವಲಯದಲ್ಲೂ ಮೀಸಲು
• ಸಿಬಿಐ ಮತ್ತು ಇ.ಡಿ ಸಂಸತ್ತಿನ ಕಣ್ಣಾವಲು ವ್ಯಾಪ್ತಿಗೆ

click me!