ಮೋದಿ ಸರ್ಕಾರ ಕಾರ್ಮಿಕ ಯೋಜನೆಗಳನ್ನು ದುರ್ಬಲಗೊಳಿಸಿದೆ, ನರೇಗಾ ಹಣವೂ ಪಾವತಿಯಾಗ್ತಿಲ್ಲ: ಖರ್ಗೆ ಆರೋಪ

By Sathish Kumar KHFirst Published Mar 16, 2024, 12:22 PM IST
Highlights

ಕಳೆದ 10 ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಕಾರ್ಮಿಕ ಕಾನೂನುಗಳನ್ನ ದುರ್ಬಲಗೊಳಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಬೆಂಗಳೂರು (ಮಾ.16): ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕನಿಷ್ಠ ವೇತನ, ಇಎಸ್‌ಐ ಸೇರಿದಂತೆ ಅನೇಕ ಕಾನೂನುಗಳನ್ನ ಜಾರಿಗೆ ತಂದಿದೆ. ಆದರೆ, ಕಳೆದ 10 ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಕಾರ್ಮಿಕ ಕಾನೂನುಗಳನ್ನ ದುರ್ಬಲಗೊಳಿಸಲಾಗಿದೆ. ಇನ್ನು ನರೇಗಾ ಯೋಜನೆ ಅಡಿ ಕಾರ್ಮಿಕರ ಹಣವೂ ಪಾವತಿ ಆಗುತ್ತಿಲ್ಲ. ಆದ್ದರಿಂದ ನಾವು ಹಿಂದುಳಿದ ವರ್ಗಗಳು, ಬಡವರಿಗೆ ಅನುಕೂಲ ಆಗುವಂತ ಘೋಷಣೆಗಳಾದ ಯುವ ನ್ಯಾಯ್, ಕಿಸಾನ್ ನ್ಯಾಯ್, ಮಹಿಳಾ ನ್ಯಾಯ್ ಗ್ಯಾರಂಟಿ ಘೋಷಣೆ ಮಾಡಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೆಲ ಘೋಷಣೆ ಮಾಡುವ ತೀರ್ಮಾನ ಮಾಡಿದ್ದೇವೆ. ಕಾರಣ ಇಂದು ಮಧ್ಯಾಹ್ನ ಎಲೆಕ್ಷನ್ ಕಮಿಷನ್ ಲೋಕಸಭೆ ಚುನಾವಣೆ ಘೋಷಣೆ ಮಾಡಲಿದೆ. ಹೀಗಾಗಿ ಬೆಂಗಳೂರಲ್ಲೇ ಘೋಷಣೆ ಮಾಡುತ್ತಿದ್ದೇವೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಬಾಂಬೆನಲ್ಲಿ ಅಂತ್ಯವಾಗುತ್ತಿದೆ. ಯುವ ನ್ಯಾಯ್, ಕಿಸಾನ್ ನ್ಯಾಯ್, ಮಹಿಳಾ ನ್ಯಾಯ್ ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಒಂದು ಶ್ರಮಿಕ್ ನ್ಯಾಯ್, ಹಿಸ್ಸೇದಾರ್ ನ್ಯಾಯ್ ಘೋಷಣೆ ಮಾಡ್ತಿದ್ದೇವೆ. ಇವು ಹಿಂದುಳಿದ ವರ್ಗಗಳು, ಬಡವರಿಗೆ ಅನುಕೂಲ ಆಗುವಂತ ಘೋಷಣೆಗಳು ಎಂದು ಹೇಳಿದರು.

ಯಾವನೋ ಒಬ್ಬ ತಗಡುನ ಮಂತ್ರಿ ಮಾಡಿಬಿಟ್ಟು ಬೇಡಾ ಕಣಯ್ಯ ಕಾಟಾ; ಮಂಡ್ಯದಲ್ಲಿ ಗೌಡರ ಡೈಲಾಗ್!

ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಹಲವು ನಿಯಮಗಳನ್ನ ಕಾರ್ಮಿಕರಿಗೆ ಜಾರಿಗೊಳಿಸಿದೆ. ಕನಿಷ್ಠ ವೇತನ, ಇಎಸ್‌ಐ ಸೇರಿದಂತೆ ಅನೇಕ ಕಾನೂನುಗಳನ್ನ ಕಾಂಗ್ರೆಸ್ ತಂದಿದೆ. ಆದರೆ, ದುರಾದೃಷ್ಟವಶಾತ್ ಈ 10 ವರ್ಷದಲ್ಲಿ ಕಾರ್ಮಿಕ ಕಾನೂನುಗಳನ್ನ ಮೋದಿ ಸರ್ಕಾರ ವೀಕ್ ಮಾಡಿದೆ. ನರೇಗಾ ಯೋಜನೆ ಅಡಿ ಕಾರ್ಮಿಕ ಹಣ ಪಾವತಿ ಆಗ್ತಿಲ್ಲ. ನಮ್ಮ ಸರ್ಕಾರ ಒಕ್ಕೂಟ ವ್ಯವಸ್ಥೆ ಗೌರವಿಸುತ್ತದೆ. ಕೇಂದ್ರ ಸರಿಯಾದ ಸಮಯಕ್ಕೆ ಅನುದಾನ ನೀಡಿದರೆ ಯೋಜನೆಗಳು ಸರಿಯಾದ ಸಮಯಕ್ಕೆ ಶುರುವಾಗುತ್ತದೆ. ಆದರೆ, ಕೇಂದ್ರ ಸರ್ಕಾರಕ್ಕೆ ರಾಜ್ಯದ ಪಾಲು ಕೇಳಲು ಅನೇಕ ಪತ್ರ ಬರೆದಿದ್ದಾರೆ. ಸಿಎಂ ಡಿಸಿಎಂ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಈ ನರೇಗಾ ಯೋಜನೆಗಳ ಬಗ್ಗೆ ಮೋದಿಗೆ ಆಸಕ್ತಿ ಇಲ್ಲ. ಇಂತಹ ಯೋಜನೆಗಳ ಬಗ್ಗೆ ಮೋದಿ ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪ ಮಾಡಿದರು.

ಕಾರ್ಮಿಕರ ಕಲ್ಯಾಣದ ವಿಚಾರವಾಗಿ ಪ್ರಧಾನಿ ಮೋದಿಯವರಿಗೆ ಹಲವು ಸಲಹೆ‌ ನೀಡಿದ್ದೆವು. ಆದರೆ ಯಾವುದನ್ನೂ ಅವರು ತರಲಿಲ್ಲ. ನರೇಗಾ ಹೆಚ್ಚಳಕ್ಕೆ ಕೇಳಿದ್ದೆವು. ಅದನ್ನೂ ಅವರು ತಲೆಗೆ ಹಾಕಿಕೊಳ್ಳಲಿಲ್ಲ. ನರೇಗಾ ಯೋಜನೆಯನ್ನ ನಾವು‌ ತಂದಿದ್ದೆವು. ಬರಪೀಡಿತ ಏರಿಯಾಗಳಲ್ಲಿ ಇದು ಅನುಕೂಲವಾಗಿದೆ. 100 ದಿನಗಳ ಕೂಲಿ ಕೆಲಸ ಸಿಗಲಿದೆ. ಇಡೀ ದೇಶದಲ್ಲಿ ಇದು ಅನುಕೂಲವಾಗಿದೆ. ಶ್ರಮಿಕರಿಗೆ ಹೆಚ್ಚಿನ ಕಾರ್ಯಕ್ರಮ ತರಬೇಕು. ನಾವು ಸಲವು ಕಾರ್ಮಿಕ ಸಂಘಟನೆ ಜೊತೆ ಚರ್ಚಿಸಿದ್ದೆವು ಎಂದು ಹೇಳಿದರು. 

ಮಾತುಗಾರರಿಗೆ ಮಣೆ ಹಾಕದ ಬಿಜೆಪಿ : ನಾಲಿಗೆ ಹರಿಬಿಟ್ಟವರಿಗೆ ಟಿಕೆಟ್ ಕಟ್ ಮಾಡಿತಾ ಹೈಕಮಾಂಡ್!

ನಾವು ದೇಶಾದ್ಯಂತ ಸಂಚರಿಸಿ ಕಾರ್ಮಿಕರ ಸಮಸ್ಯೆಗಳನ್ನ ಆಲಿಸಿದ್ದೆವು. ಅವರ ಪರವಾಗಿ ಕಾರ್ಯಕ್ರಮವನ್ನ ತಂದಿದ್ದೇವೆ. ಹಲವು ಕಡೆ ನಾವು ಕಾರ್ಮಿಕರಿಗೆ ಆಸ್ಪತ್ರೆ ತಂದಿದ್ದೆವು. ಹುಬ್ಬಳ್ಳಿ, ಮಂಗಳೂರು, ಮೈಸೂರು, ಕಲಬುರಗಿ, ಬೆಂಗಳೂರಿನಲ್ಲಿ ಆಸ್ಪತ್ರೆಗಳನ್ನ ತಂದಿದ್ದೆವು. ಕಲಬುರಗಿಯಲ್ಲಿ ದೊಡ್ಡ ಮೆಡಿಕಲ್ ಕಾಲೇಜು ತಂದಿದ್ದೆವು. ಒಂದೇ ಸೂರಿನಡಿ ಹಲವು ಕಾಲೇಜು ತಂದಿದ್ದೆವು. ಆದರೆ ಈಗಿನ ಪ್ರಧಾನಿ ಅವಕಾಶ ಕೊಡಲಿಲ್ಲ. ಭೂಮಿ, ಕಟ್ಟಡ ಎಲ್ಲವೂ ರೆಡಿಯಾಗಿದೆ. ಆದರೆ ಅಲ್ಲಿ ಪ್ರಾರಂಭಕ್ಕೆ ಅವಕಾಶ ಕೊಡಲಿಲ್ಲ. ಪ್ರಧಾನಿಯವರನ್ನ ಕೇಳಿದ್ರೆ ಸಿದ್ದರಾಮಯ್ಯ ಸಹಕರಿಸ್ತಿಲ್ಲ ಅಂತಿದ್ದರು. ಇಂದು ಅವರೇ ಕಲಬುರಗಿಯಲ್ಲಿ ಚಾಲನೆ ಕೊಡ್ತಿದ್ದಾರೆ. ಪ್ರಧಾನಿ ಇವತ್ತು ಕಲಬುರಗಿಗೆ ಬರ್ತಿದ್ದಾರೆ. ಕಲಬುರಗಿ ಜನರ ಪರವಾಗಿ ನಾನು ಮೋದಿ ಅವರನ್ನ ಸ್ವಾಗತ ಮಾಡ್ತೇನೆ. ಕಲಬುರಗಿಗೆ ಏನೂ ಮಾಡದೇ ಇರುವ ಕಾರಣಕ್ಕೆ ಸ್ವಾಗತ ಮಾಡುತ್ತೇನೆ ಎಂದು ಮೋದಿ ಭೇಟಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದರು.

click me!