ನೆಚ್ಚಿನ ಕಾರಿನಲ್ಲಿ ಬಂದು ಪತ್ನಿ ಸಮೇತ ನಾಮಪತ್ರ ಸಲ್ಲಿಸಿದ Basavaraj Horatti

By Suvarna News  |  First Published May 24, 2022, 5:08 PM IST
  • ನೆಚ್ಚಿನ ಅಂಬಾಸೆಡರ್‌ನಲ್ಲಿ ಪತ್ನಿ ಸಮೇತ ಬಂದು ನಾಮಪತ್ರ ಸಲ್ಲಿಸಿದ ಹೊರಟ್ಟಿ
  • 8 ನೇಯ ಭಾರಿಗೆ ನಾಮಪತ್ರ ಸಲ್ಲಿಸಿ ದಾಖಲೆಗೆ ಮುಂದಾದ ಹೊರಟ್ಟಿ 
  • ಈ ಭಾರಿ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಹೊರಟ್ಟಿ

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್  

 ಧಾರವಾಡ (ಮೇ.24) : ಪಶ್ಚಿಮ ಶಿಕ್ಷಕರ ಕ್ಷೆತ್ರದ ಬಿಜೆಪಿ ಅಭ್ಯರ್ಥಿ ಯಾದ ಬಸವರಾಜ  ಹೊರಟ್ಟಿ ಅವರು ಇಂದು ತಮ್ಮ ಧರ್ಮ ಪತ್ನಿ ಯ ಜೊತೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆಯನ್ನ ಸಲ್ಲಿಸಿದ್ದಾರೆ. ಇ‌ನ್ನ ಈ ಮೊದಲು 7 ಭಾರಿ ಶಿಕ್ಷಕರ ಕ್ಷೆತ್ರದಿಂದಲೇ ವಿಧಾನ ಪರಿಷತ್ (MLC Election) ಪ್ರವೇಶ ಮಾಡಿರುವ ಹೊರಟ್ಟಿ ಈ ಭಾರಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ಇನ್ನು ಎರಡು ಸೆಟ್ ನಲ್ಲಿ ನಾಮಪತ್ರವನ್ನ ಸಲ್ಲಿಸಿದ್ದಾರೆ. 

Tap to resize

Latest Videos

 ಅಂಬಾಸಿಡರ್ 5757 ಕಾರು ವಿಷೇಷತೆ : ಅದು 1994ರ ವಾಹನ ಆ ವಾಹನ ಎಂದರೆ ಅವರಿಗೆ ಅಚ್ಚು ಮೆಚ್ಚು ಅಲ್ಲದೇ ಅದು ಅವರಿಗೆ ಲಕ್ಕಿ ವಾಹನವಂತೆ ಹೀಗಾಗಿ ಐಷಾರಾಮಿ ವಾಹನ ಬಿಟ್ಟು ಇಂದು ಅಂಬಾಸಿಡರ್ ವಾಹನ ಏರಿದ ಮಾಜಿ ಸಭಾಪತಿ  ಬಸವರಾಜ ಹೊರಟ್ಟಿ ಅವರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಎಂಟನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಈಗಾಗಲೇ ಏಳು ಬಾರಿ ಜಯಭೇರಿ ಬಾರಿಸಿರುವ ಹೊರಟ್ಟಿ ಇಂದು ಎಂಟನೇ ಬಾರಿಗೆ ತಮ್ಮ ಪತ್ನಿ ಸಮೇತ ಬಂದು ಜಿಲ್ಲಾ ಚುನುವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. 

ಕೈ ತಪ್ಪಿದ ಟಿಕೆಟ್, SR Patil ಮನವೊಲಿಕೆಗೆ ಮುಂದಾದ ಹೈಕಮಾಂಡ್

ಇಲ್ಲಿ ಪ್ರಮುಖವಾಗಿ ಗಮನಸೆಳೆದಿದ್ದು, ಬಸವರಾಜ ಹೊರಟ್ಟಿ ಅವರ ಅಚ್ಚುಮೆಚ್ಚಿನ ಅಂಬಾಸಿಡರ್ ವಾಹನ. ಪತ್ನಿ ಸಮೇತ ಅದೇ ವಾಹನದಲ್ಲಿ ಬಂದ ಹೊರಟ್ಟಿ, ನಾಮಪತ್ರ ಸಲ್ಲಿಸಿದ ಬಳಿಕವೂ ಅದೇ ವಾಹನದಲ್ಲಿ ತೆರಳಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಇದುವರೆಗೂ ಸತತ ಏಳು ಬಾರಿ ಯಾರೂ ಗೆದ್ದಿಲ್ಲ. ಎಂಟನೇ ಬಾರಿಗೆ ಗೆಲ್ಲಿಸಿ ಹ್ಯಾಟ್ರಿಕ್ ಮಾಡಬೇಕು ಎಂದು ಶಿಕ್ಷಕರ ಪಣ ತೊಟ್ಟಿದ್ದಾರೆ ಎಂದರು.

ಬಸವರಾಜ  ಹೊರಟ್ಟಿ ಅವರ ನಾಮಪತ್ರ ಸಲ್ಲಿಕೆಗೆ ಅನೇಕ ಶಿಕ್ಷಕರು ಸಾಕ್ಷಿಯಾದರು. ಹೊರಟ್ಟಿ ಅವರು ಎರಡು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಮೊದಲ ಪ್ರತಿ ನಾಮಪತ್ರ ಸಲ್ಲಿಸುವಾಗ ಪತ್ನಿ ಹೇಮಲತಾ ಹೊರಟ್ಟಿ ಹಾಗೂ ಎನ್.ಎನ್‌.ಸವಣೂರ ಇದ್ದರು ಎರಡನೇ ಪ್ರತಿ ನಾಮಪತ್ರ ಸಲ್ಲಿಸುವಾಗ ವಿ.ಎಸ್.ಹುದ್ದಾರ, ಶ್ಯಾಮ ಮಲ್ಲನಗೌಡರ ಜೊತೆಗಿದ್ದರು. ಮೇ.26 ರಂದು ಹೊರಟ್ಟಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಮುಖ್ಯಮಂತ್ರಿ ಬಸವರಾಜ, ಕೇಂದ್ರಸಚಿವ ಪ್ರಹ್ಲಾದ್ ಜೋಶಿ, ಮತ್ತು ಬಿಜೆಪಿ ಘಟಾನುಘಟಿ ನಾಯಕರುಗಳು ಬಾಗಿಯಾಗಲಿದ್ದಾರೆ. ಬೊಮ್ಮಾಯಿ ಕೂಡ ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಲಿದ್ದಾರೆ ಎಂದು ಹೇಳಿದರು‌.

Vijayapura ಮಕ್ಕಳ ಮಾರಾಟ ಜಾಲ ಸಕ್ರಿಯ, ಮತ್ತೆ ಮುನ್ನಲೆಗೆ ಜಯಮಾಲಾ ಕೇಸ್

ಜೆಡಿಎಸ್ ನಿಂದ ಬಂದಿದ್ದ ಹೊರಟ್ಟಿ:  ಇನ್ನು ತಲೆಯ ಮೇಲಿದ್ದ ಹೊರೆಯನ್ನು ಕೆಳಗಿಳಿಸಿ ಕಮಲವನ್ನು ಹಿಡಿದಿದ್ದ ಮಾಜಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಬಿಜೆಪಿ ಕೈ ಹಿಡಿದಿದ್ದು, ಧಾರವಾಡ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ ಚುನಾವಣಾ ಕಣಕ್ಕೆ ಧುಮುಕವಂತೆ ಮಾಡಿದೆ.

ಸುಮಾರು 40ಕ್ಕೂ ಹೆಚ್ಚು ವರ್ಷಗಳ ಕಾಲ ರಾಜಕೀಯ ಜೀವನದ ಅನುಭವ ಹೊಂದಿರುವ ಹೊರಟ್ಟಿ ಸತತ ಎಂಟು ಬಾರಿ ಶಿಕ್ಷಕರ ಕ್ಷೇತ್ರದಿಂದ ಗೆಲವು ಸಾಧಿಸಿ ದಾಖಲೆ ಬರೆದವರು. ಮೊನ್ನೆಯಷ್ಟೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು. ಇನ್ನೆನೂ ನಾಮಪತ್ರ ಸಲ್ಲಿಕೆ ಮುಹೂರ್ತ ಫಿಕ್ಸ್ ಮಾಡಿದ್ದ ಹೊರಟ್ಟಿಯವರನ್ನು  ಬಿಜೆಪಿ ಇಂದು ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.

ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಈಗಾಗಲೇ ಸಾಕಷ್ಟು ಆಂತರಿಕ ತಿಕ್ಕಾಟಗಳು ಏರ್ಪಟ್ಟಿದ್ದವು. ಅಲ್ಲದೇ ಬಿಜೆಪಿ ಹಿರಿಯ ನಾಯಕರಾಗಿದ್ದ ಮೋಹನ ಲಿಂಬಿಕಾಯಿ ಅವರನ್ನು ಸೈಡ್ ಲೈನ್ ಮಾಡುವ ಮೂಲಕ ವಲಸೆ ಬಿಜೆಪಿಗರಿಗೆ ಕಮಲ ಪಾಳೆಯ ಮಣೆ ಹಾಕಿದ್ದು, ಮತ್ತಷ್ಟು ಆಂತರಿಕ ಭಿನ್ನಮತ ಸ್ಪೋಟಕ್ಕೆ ಕಾರಣವಾಗಲಿದೆ.

ಇನ್ನೂ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಧಿಕೃತ ಘೋಷಣೆ ಮಾಡಿದ್ದು, ಹೊರಟ್ಟಿ ಜೊತೆಗೆ ಚಲುವಾದಿ ನಾರಾಯಣ ಸ್ವಾಮಿ, ಹೇಮಲತಾ ನಾಯಕ, ಎಸ್.ಕೇಶವ ಪ್ರಸಾದ, ಲಕ್ಷ್ಮಣ ಸವದಿಗೆ ಟಿಕೆಟ್ ನೀಡಿದೆ.

click me!