ಸ್ಟಿಂಗ್ ಆಪರೇಷನ್ ಫುಲ್ ಡಿಟೇಲ್ಸ್ ಅವರ ಹತ್ರನೇ ಇರೋದಾ? ಸಿಟಿ ರವಿ ಹೇಳಿದ ಆ ನಾಯಕ ಯಾರು?

Published : Oct 15, 2026, 01:14 PM IST
MLC CT Ravi reacts on Sting Operation

ಸಾರಾಂಶ

ಸ್ಟಿಂಗ್ ಆಪರೇಷನ್: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿದೆ, ರೈತರಿಗೆ ಕೃಷಿಗೆ ನೀರಿಲ್ಲ, ಕುಡಿಯಲು ನೀರಿಲ್ಲ. ರಾಜ್ಯದ ಬರಗಾಲದ ಬಗ್ಗೆ ಚರ್ಚೆಯಾಗಬೇಕಿತ್ತು. ದುರಾದೃಷ್ಟ ಸಂಪುಟದಲ್ಲಿ ಸ್ಟಿಂಗ್ ಆಪರೇಷನ್, ಜಿಲೇಬಿ, ಜಾಮೂನು ಬಗ್ಗೆ ಚರ್ಚೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿ (ಅ.15): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಡಿದ್ದಾರೆನ್ನಲಾದ ಸ್ಟಿಂಗ್ ಆಪರೇಷನ್ ಕಾಂಗ್ರೆಸ್ ಪಕ್ಷದಲ್ಲೇ ಕೋಲಾಹಲ ಸೃಷ್ಟಿಸಿದೆ. ಇತ್ತ ಬಿಜೆಪಿ ನಾಯಕರಿಗೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಸ್ಟಿಂಗ್ ಆಪರೇಷನ್ ಹಲವು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದು, ಇದೀಗ ಎಂಎಲ್‌ಸಿ ಸಿಟಿ ರವಿ ಅವರು ಕೂಡ ಸ್ಟಿಂಗ್ ಆಪರೇಷನ್ ಕುರಿತಂತೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಸ್ಟಿಂಗ್ ಆಪರೇಷನ್ ಹೆಚ್ಚಿನ ಮಾಹಿತಿ ಸಿಎಂ ಬಳಿ ಇದೆ:

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್ಸಿ ಸಿಟಿ ರವಿ ಅವರು, ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿದೆ, ರೈತರಿಗೆ ಕೃಷಿಗೆ ನೀರಿಲ್ಲ, ಕುಡಿಯಲು ನೀರಿಲ್ಲ. ರಾಜ್ಯದ ಬರಗಾಲದ ಬಗ್ಗೆ ಚರ್ಚೆಯಾಗಬೇಕಿತ್ತು. ದುರಾದೃಷ್ಟ ಸಂಪುಟದಲ್ಲಿ ಸ್ಟಿಂಗ್ ಆಪರೇಷನ್, ಜಿಲೇಬಿ, ಜಾಮೂನು ಬಗ್ಗೆ ಚರ್ಚೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಿಎಂ ಬಗ್ಗೆ ಒಂದು ಅಭಿಪ್ರಾಯ ಮೂಡಿಸುವಂತೆ ಬಿಟ್ಟಿರೋ ವಿಡಿಯೋ ಕಾಂಗ್ರೆಸ್‌ನ ಆಂತರಿಕ ರಾಜಕಾರಣದ ಕುತಂತ್ರದ ಭಾಗ ಸಿಎಂ ಪ್ರಮಾಣಿಕರಾಗಿರಿ ಅಂತಾ ಹೇಳಲಿಲ್ಲ. ಅದರ ಬದಲು ಹುಷರಾಗಿರಿ ಅಂತಾ ಹೇಳಿದರು. ಸ್ಟಿಂಗ್ ಆಪರೇಷನ್ ಅಂತಹ ಕೆಲಸ ವಿರೋಧ ಪಕ್ಷದವರು ಮಾಡೋದಾಗಿದ್ರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಳೇ ವಿಡಿಯೋ ಬಿಡ್ತಿದ್ರು. ಸಿದ್ದರಾಮಯ್ಯರನ್ನ ಬಗ್ಗಿಸಲು ಆಡಳಿತ ಪಕ್ಷದವರೇ ಇದನ್ನ ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸ್ಟಿಂಗ್ ಮಾಡಿದವರನ್ನ ಬಿಟ್ಟು ಪೋಸ್ಟ್ ಮಾಡಿದವರ ಬಂಧನ!

'ರೀ ಪ್ರಿಯಾಂಕ್ ಖರ್ಗೆಯವರೇ ಸ್ಟಿಂಗ್ ಆಪರೇಷನ್ ಮಾಡಿದವರನ್ನು ಹಿಡಿಯುವುದು ಬಿಟ್ಟು ಅದರ ಬಗ್ಗೆ ಪೋಸ್ಟ್ ಹಂಚಿಕೊಂಡವರನ್ನ ಅರೆಸ್ಟ್ ಮಾಡಿದ್ದೀರಲ್ಲ ಏನು ಹೇಳಬೇಕು ನಿಮಗೆ? ಸ್ಟಿಂಗ್ ಆಪರೇಷನ್ ಪ್ರಕರಣದ ಪಾತ್ರದಾರಿಗಳು ನಿಮ್ಮದೆ ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಇದರಲ್ಲಿ ಭಾಗಿಯಾದವರನ್ನು, ಸ್ಟಿಂಗ್ ಮಾಸ್ಟರ್‌ಗಳ ಮೇಲೆ ಕ್ರಮ ಜರುಗಿಸಲು ನಿಮ್ಮಿಂದಾಗದೆ? ಎಂದು ಸವಾಲೆಸೆದರು.

ಇವಿಎಂ ಮೇಲೆ ಗೆದ್ದವರು ರಾಜೀನಾಮೆ ಕೊಡಲಿ:

ಇವಿಎಂ ಸರಿಯಿಲ್ಲ ಎಂದು ಹೇಳುವ ಕಾಂಗ್ರೆಸ್ ನಾಯಕರು ಇವಿಎಂ ಮೇಲೆ ಗೆದ್ದವರು ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಲಿ ಆಮೇಲೆ ಅವರು ಜ್ಞಾನೇಶಕುಮಾರ್ ರಾಜೀನಾಮೆ ಕೇಳಲಿ. ಇವಿಎಂ ಆಗಲಿ, ಎಸ್‌ಐಆರ್ ಆಗಲಿ ಅನುಮಾನವನ್ನು ಪ್ರಶ್ನಿಸಲಿಕ್ಕೂ ಅದರದ್ದೇ ಸಾಂವಿಧಾನಿಕ ವಿಧಾನಗಳಿವೆ. ಅದುಬಿಟ್ಟು ಸುಪ್ರೀಂ ಕೋರ್ಟ್‌ ವರೆಗೆ ಹೋರಾಟ ತೆಗೆದುಕೊಂಡು ಹೋಗಿದ್ದು ಸರಿಯಾ? ಈ ಹಿಂದೆ ಯಾರೂ ಇಂಥ ಯತ್ನ ಮಾಡಿರಲಿಲ್ಲ. ಆದರೆ ಕಾಂಗ್ರೆಸ್ ಅಧಿಕಾರ ಇಲ್ಲದೆ ಎಷ್ಟೊಂದು ಹತಾಶೆಗೊಂಡಿದೆ ಎಂದರೆ ದೆಹಲಿ ಹೋರಾಟ, ಗಲಾಟೆ, ಸಂಘರಷಕ್ಕೆ ಪ್ರಚೋದನೆ ನೀಡುತ್ತಿದೆ. ತಮ್ಮ ಹೊಣೆಗಾರಿಕೆ ಮರೆತು ಸರ್ಕಾರದ ವಿರುದ್ಧ, ಎಸ್‌ಐಆರ್ ವಿರುದ್ಧ ಸುಳ್ಳು,ಅಪಪ್ರಚಾರ ಮಾಡುತ್ತಿದ್ದಾರೆ. ಚುನಾವಣಾ ಆಯುಕ್ತರೇ ಹೇಳಿದ್ದಾರಲ್ಲ, ಮೊದಲು ಅಫಿಡವಿಟ್ ಸಲ್ಲಿಸಿ ಅಂತಾ? ಈ ಕಾಂಗ್ರೆಸ್ ಅಫಿಡವಿಟ್ ಸಲ್ಲಿಸದೆ, ಸಹಿ ಹಾಕದೆ, ಸರಿಯಾದ ವಿಳಾಸ ನೀಡದೆ ಸುಪ್ರೀಂ ಕೋರ್ಟ್ ವಿರುದ್ಧ ದೂರುತ್ತಿದ್ದಾರೆ ಎಂದು ವಾಗ್ದಾಳಿ ನಡಸಿದರು.

ಇನ್ನು ಇದೇ ವೇಳೆ ರಾಜ್ಯದ ಕಬ್ಬು ಬೆಳೆಗಾರರ ಪ್ರತಿಭಟನೆ ತೀ್ವ್ರಗೊಂಡಿರುವ ವಿಚಾರವಾಗಿ ಮಾತನಾಡಿದ ಸಿಟಿ ರವಿ, ಕಬ್ಬು ಬೆಳೆಗಾರರ ಹೋರಾಟ ಬೆಂಬಲಿಸಿದರು. ಸರ್ಕಾರ ರೈತರ ಹಿತವನ್ನು ಕಾಪಾಡಬೇಕು. ಗ್ರಾಹಕರಿಗೆ ಹೊರೆಯಾಗದಂತೆ ಕೂಡಾ ನೋಡಿಕೊಳ್ಳಬೇಕು

ನಮ್ಮ ಸರ್ಕಾರ ರೈತರ ಪರವಾಗಿದೆ. ಗ್ರಾಹಕರಿಗೂ ಹೆಚ್ಚಿನ ಹೊರೆಯಾಗದಂತೆ ರೈತರ ಬೇಡಿಕೆ ಈಡೇರಿಸುತ್ತದೆ ಎಂದು ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕುಮಾರಸ್ವಾಮಿ ಗೋಸುಂಬೆ... ಸ್ಟಿಂಗ್ ಆಪರೇಷನ್ ವಿಚಾರ, ಸಚಿವ ಬಾಲಕೃಷ್ಣ ಹೇಳಿಕೆ ಸಂಚಲನ
ಕರ್ನಾಟಕ ಒಂದರಲ್ಲೇ 30 ಲಕ್ಷ ಅಕ್ರಮ ಬಾಂಗ್ಗನ್ನರು! ವೋಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್ SIR ವಿರೋಧ, ಮಾಜಿ ಡಿಸಿಎಂ ಆಕ್ರೋಶ