ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!

Published : Dec 06, 2025, 05:42 PM IST
mla yatnal

ಸಾರಾಂಶ

ಸಿಎಂ ಸಿದ್ಧರಾಮಯ್ಯ, ಡಿಸಿಎಂ ಇಬ್ಬರು ಸೇರಿ ರಾಜ್ಯ ಲೂಟಿ ಮಾಡುತ್ತಿದ್ದಾರೆ. ಕೈಗಾರಿಕೆ ತರುವುದು ಸೇರಿದಂತೆ ಯಾವುದೇ ಅಭಿವೃದ್ದಿ ಬಗ್ಗೆ ಮಾತಾಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಕಾರವಾರ, ಉತ್ತರ ಕನ್ನಡ (ಡಿ.06): ಸಿಎಂ ಡಿಸಿಎಂ ಇಬ್ಬರು ಸೇರಿ ರಾಜ್ಯ ಲೂಟಿ ಮಾಡುತ್ತಿದ್ದಾರೆ. ಕೈಗಾರಿಕೆ ತರುವುದು ಸೇರಿದಂತೆ ಯಾವುದೇ ಅಭಿವೃದ್ದಿ ಬಗ್ಗೆ ಮಾತಾಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಂತರ ಮಾತನಾಡಿದ ಅವರು, ಬೆಳಿಗ್ಗೆ ಎದ್ರೆ ದುಬಾರಿ ವಾಚ್ ಕಟ್ಕೊಂಡು ತಿಂಡಿಗೆ ಹೋಗುವುದಾಗಿದೆ. ತಿಂಡಿಗೆ ಬೇರೆ ಯಾರೂ ಹೋಗಲ್ವಾ..? ಇಬ್ರು ಜನರನ್ನು ಹುಚ್ಚರನ್ನಾಗಿ ಮಾಡುತ್ತಿದ್ದಾರೆ. ಇದು ಕೇವಲ ತಿಂಡಿಗೆ ನಿಂತಿಲ್ಲ, ಶಾಸಕರನ್ನು ಪ್ರತ್ಯೇಕವಾಗಿ ಕರೆದು ಮಾತನಾಡುತ್ತಿದ್ದಾರೆ. ಇಬ್ರು ಶಾಸಕರಿಗೆ ಆಸೆ ಆಮಿಷ ಒಡ್ಡುತ್ತಿದ್ದಾರೆ. ಇವರ ನಡುವೆ ಸತೀಶ ಜಾರಕಿಹೊಳಿ, ಪರಮೇಶ್ವರ ಕೂಡಾ ಪೈಪೋಟಿ ನಡೆಸಿದ್ದಾರೆ ಎಂದರು.

ಜಾತಿಯ ಆಧಾರದಲ್ಲಿ ಮುಖ್ಯಮಂತ್ರಿ ಆದ್ರೆ ಉಪಯೋಗ ಇಲ್ಲ. ಇಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಕುರುಬ ಸಮಾಜಕ್ಕೆ ಒಳ್ಳೆಯದಾಯ್ತಾ..? ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ. ಬೆಳಿಗ್ಗೆ ಎದ್ರು ಸಾಬ್ರು ಮಲಕ್ಕೋಬೇಕಾದ್ರೆ ಜಮೀರ್ ಸಾಬ್ರು. ಕನ್ನಡ ಶಾಲಾ ಕೊಠಡಿ ಕುಸಿದು ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಕನ್ನಡ ಶಾಲೆಗಳ ಅಭಿವೃದ್ದಿ ಮಾಡಲು ಸರ್ಕಾರದಿಂದ ಆಗುತ್ತಿಲ್ಲ. ಆದ್ರೆ, ಉರ್ದು ಶಾಲೆಗಳ ಅಭಿವೃದ್ಧಿಗೆ ನಮ್ಮ ಬಳಿ ಬಹಳಷ್ಟು ಹಣ ಇದೆ ಅಂತಾರೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ವಕ್ಫ ಆಸ್ತಿ ಉಳಿಸುವುದಾಗಿ ಹೇಳಿದ್ದಾರೆ.ಹಿಂದೂ ದೇವಸ್ಥಾನಗಳ ಆದಾಯವನ್ನ ಮಸಿದಿಗಳಿಗೆ ಬಳಸಲಾಗುತ್ತಿದೆ.

ನಿನ್ನೆ ಸುಪ್ರಿಂ ಕೋರ್ಟ್ ಮುಖ್ಯನ್ಯಾಯಾಧೀಶರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೂ ದೇವಸ್ಥಾನಗಳ ದುಡ್ಡು ಅದೇ ದೇವಸ್ಥಾನಕ್ಕೆ ಬಳಸಬೇಕು. ರಾಜ್ಯದಲ್ಲಿ ಹಿಂದೂ ದೇವಸ್ಥಾನಗಳ ಹಣ ಮಸೀದಿ ಮತ್ತು ಮದರಸಾಗಳಿಗೆ ಬಳಸಲಾಗುತ್ತಿದೆ. ಅಲ್ಪಸಂಖ್ಯಾತ ಇಲಾಖೆಯಿಂದ 400 ಮುಸ್ಲಿಂ ಯುವಕರಿಗೆ PSI ಟ್ರೆನಿಂಗ್ ಕೊಡಲಾಗುತ್ತಿದೆ. ದಲಿತರು, ಹಿಂದುಳಿದ ಯುವಕರಿಗೆ ಯಾಕೆ ಟ್ರೇನಿಂಗ್ ಕೊಡ್ತಾ ಇಲ್ಲ, ಸಿದ್ದರಾಮಯ್ಯ ಸಿಎಂ ಆಗಿ ಕುರುಬರಿಗೆ ಮಾಡಿದ್ದಾದ್ರು ಏನು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸರ್ಕಾರದ ವಿರುದ್ಧ ಮಾತನಾಡಲು ಬಿಜೆಪಿಯಲ್ಲಿ ನಾಯಕರೇ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಡುಬ್ಲಿಕೇಟ್ ಸಹಿ ಮಾಡಿದ್ರು. ಡುಬ್ಲಿಕೇಟ್ ಸಹಿ ಮಾಡಿದ ದಾಖಲೆ ಸಿಎಂ, ಡಿಸಿಎಂ ಬಳಿ ಇವೆ. ವಿಜಯೇಂದ್ರ ಮಾತಾಡಿದ್ರೆ ದಾಖಲೆ ಬಿಡಬೇಕಾ ಅಂತಾ ಡಿಕೆ ಕೇಳ್ತಾರೆ. ಹೀಗಾಗಿ ಸಿಎಂ ಒಳ್ಳೆಯ ಬಜೆಟ್ ಮಂಡನೆ ಮಾಡಿದ್ರು ಅಂತಾ ವಿಜಯೇಂದ್ರ ವರ್ಣನೆ ಮಾಡ್ತಾರೆ. ಈ ಹಿಂದೆ ಛಲವಾದಿ ನಾರಾಯಣಸ್ವಾಮಿ ಗಟ್ಟಿಯಾಗಿ ಮಾತಾಡ್ತಾ ಇದ್ರು. ಅವರನ್ನು ಮನೆಗೆ ಕರೆಯಿಸಿ ಮಾತನಾಡದಂತೆ ಯಡಿಯೂರಪ್ಪ ಸೂಚಿಸಿದ್ದಾರೆ. ಯಡಿಯೂರಪ್ಪ ಸೂಚನೆ ಬೆನ್ನಲ್ಲೇ ಛಲವಾದಿ ನಾರಾಯಣ ಸ್ವಾಮಿ ಸೈಲೆಂಟ್ ಆಗಿದ್ದಾರೆ ಎಂದರು.

ಆ ಅಶೋಕನಿಗೂ ಡಿಕೆ ಶಿವಕುಮಾರ ಸೈಲೆಂಟ್ ಮಾಡಿದ್ದಾರೆ. ಸದ್ಯ ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ವಿರೋಧ ಪಕ್ಷ ಇಲ್ಲದಂತಾಗಿದೆ. ಸದ್ಯ ನಾನೇ ಪ್ರಾಮಾಣಿಕ ವಿರೋಧ ಪಕ್ಷ ನಾಯಕನಾಗಿ ಕೇಲಸ ಮಾಡುತ್ತಿದ್ದೇನೆ. ಮೆಕ್ಕೆಜೋಳ, ಕಬ್ಬು ದರ ನಿಗದಿ ವಿಚಾರದಲ್ಲಿ ಕೇಂದ್ರ ಮತ್ತ ರಾಜ್ಯ ಸರ್ಕಾರ ಇಬ್ರದ್ದು ಜವಾಬ್ದಾರಿ ಇದೆ. ವಿಜಯೇಂದ್ರ ದೆಹಲಿಗೆ ಹೋಗಿ ರಾಜ್ಯದ ಸಮಸ್ಯೆ ಮೋದಿ ಗಮನಕ್ಕೆ ತರಬೇಕು. ಸಮಸ್ಯೆ ಬಗೆ ಹರಿಸಿ ರೈತರ ಪರವಾಗಿ ಕೆಲಸ ಮಾಡಬೇಕು. ಇವರ್ಯಾರಿಗೂ ಮೋದಿ ಬಳಿ ಹೋಗಿ ಕೇಳುವ ಶಕ್ತಿ ಇಲ್ಲ. ನಾನು ಈ ಹಿಂದೆ ಪ್ರವಾಹ ಸಂದರ್ಭದಲ್ಲಿ ಮೋದಿ ವಿರುದ್ದ ಧ್ವನಿ ಎತ್ತಿದ್ದೆ.

ಕರ್ನಾಟಕದ ವಿಚಾರವಾಗಿ ಯಾಕೆ ತಾರತಮ್ಯ?

ಮೋದಿ ಕರ್ನಾಟಕದ ಪ್ರವಾಹದ ಬಗ್ಗೆ ಟ್ವೀಟ್ ಮಾಡಿರಲಿಲ್ಲ. ಬಿಹಾರದಲ್ಲಿ ಪ್ರವಾಹ ಆದ್ರೆ ಟ್ವೀಟ್ ಮಾಡ್ತಿರಾ ಕರ್ನಾಟಕದ ವಿಚಾರವಾಗಿ ಯಾಕೆ ತಾರತಮ್ಯ..? ನಾನು ಪ್ರಶ್ನೆ ಮಾಡಿದಕ್ಕೆ ನಂಗೆ ನೋಟಿಸ್ ಕೊಟ್ರು. ಪಕ್ಷದಿಂದ ಕಿತ್ತು ಹಾಕ್ತೇನಿ ಅಂತ ಯಡಿಯೂರಪ್ಪ ಹೇಳಿದ.ಕಿತ್ತು ಹಾಕೋದಿದ್ರೆ ಹಾಕು ಅಂತ ನಾನು ನೇರವಾಗಿ ಹೇಳಿದ್ದೆ. ನಂಗೆ ಮೊದ್ಲು ನಮ್ಮ ಜನ, ರಾಜ್ಯ, ಆಮೇಲೆ ಪಕ್ಷ. ಬಿಜೆಪಿ ಹೇಳಿದ್ದು ಅದೇ ಮೊದಲು ದೇಶ, ಆಮೇಲೆ ಪಕ್ಷ. ವಿಜಯೇಂದ್ರ ಪಕ್ಷದಲ್ಲಿ ಇರುವವರೆಗೂ ನಾನು ಬಿಜೆಪಿ ಸೇರಲ್ಲ. ಮುಂದಿನ‌ ದಿನಗಳಲ್ಲಿ ನಾನೇ ಪಕ್ಷ ನಿರ್ಮಾಣ ಮಾಡಿ, ಚುನಾವಣೆಗೆ ನಿಲ್ಲುತ್ತೇನೆ ಎಂದು ಯತ್ನಾಳ್ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!