ಸಂಪುಟದಲ್ಲಿ ನನಗೂ ಅವಕಾಶ ಮಾಡಿಕೊಡಿ: ಹೈಕಮಾಂಡ್‌ಗೆ ಮನವಿ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲ

Published : Nov 04, 2025, 06:51 PM IST
Yashavant Rayagoud Patil

ಸಾರಾಂಶ

ಸಂಪುಟದಲ್ಲಿ ಎಂ.ಬಿ.ಪಾಟೀಲ ಮೂರು ಬಾರಿ, ಶಿವಾನಂದ ಪಾಟೀಲ ಎರಡುಬಾರಿ ಹಾಗೂ ನಾಡಗೌಡ ಅವರಿಗೂ ಅವಕಾಶ ಸಿಕ್ಕಿದೆ. ನನಗೂ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ವಿಜಯಪುರ (ನ.04): ಇಂಡಿ ಮತಕ್ಷೇತ್ರವು ಸಚಿವ ಸ್ಥಾನದಿಂದ ವಂಚಿತವಾಗಿ ಶಾಪಗ್ರಸ್ತ ಕೇತ್ರವಾಗಿದೆ. ಸಂಪುಟದಲ್ಲಿ ಎಂ.ಬಿ.ಪಾಟೀಲ ಮೂರು ಬಾರಿ, ಶಿವಾನಂದ ಪಾಟೀಲ ಎರಡುಬಾರಿ ಹಾಗೂ ನಾಡಗೌಡ ಅವರಿಗೂ ಅವಕಾಶ ಸಿಕ್ಕಿದೆ. ನನಗೂ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ವೇಣುಗೋಪಾಲ ಅವರಿಗೂ‌ ಮನವಿ ಮಾಡಿದ್ದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಎಲ್ಲರೂ ಕೂಡಿ ರಾಜಕಾರಣ ಮಾಡಬೇಕಾಗುತ್ತದೆ. ಆದರೆ, ಎಂದಾದರೂ ಜಿಲ್ಲೆಯವರು ಕೂಡಿ ಚರ್ಚೆ ಮಾಡಿದ್ದೇವಾ?, ಈಗ ನೀವು ಹೇಳಿದ್ದೀರಿ, ಅದಕ್ಕೆ ಸ್ವಾಗತ ಮಾಡುತ್ತೇನೆ. ಇದಕ್ಕೆ ನಾನು ಸಹಕಾರ ಕೊಡುತ್ತೇನೆ. ಆದರೆ, ಅಂತಿಮ ತೀರ್ಮಾನವನ್ನು ಹೈಕಮಾಂಡ್‌ಗೆ ಬಿಡೋಣ ಎಂದು ಹೇಳಿದರು.ನಮ್ಮ ಮನವಿಯನ್ನು ಬೆಂಗಳೂರು ಹಾಗೂ ದೆಹಲಿಗೆ ತಲುಪಿಸೋಣ. ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಹಾಗೂ ರಾಜ್ಯದಲ್ಲಿ 2028ರಲ್ಲಿ‌ ಮತ್ತೊಮ್ಮೆ ಸರ್ಕಾರ ಬರಬೇಕು. ‌ಇದು ನಮ್ಮ ಗುರಿಯಾಗಬೇಕು. ಮಂತ್ರಿ ಮಂಡಳ ರಚನೆ ಸಿಎಂ ಪರಮಾಧಿಕಾರ. ಸಿಎಂ ಹಾಗೂ ಪಕ್ಷಕ್ಕೆ ಬದ್ಧರಾಗಿದ್ದೇವೆ.

ಬೆಳೆ ಹಾನಿ ವಿತರಣೆಗೂ ಕ್ರಮ

ಸಣ್ಣ ಅಧಿಕಾರಕ್ಕೆ ನಮ್ಮ ಮಧ್ಯೆ ಮನಸ್ತಾಪ ಮಾಡಿಕೊಳ್ಳುವುದು ಬೇಡ. ಇಬ್ಬರೂ ಧಾರ್ಮಿಕ ಹಿನ್ನೆಲೆ ಹಾಗೂ ಪಕ್ಷದ ಒಂದೇ ಸಿದ್ಧಾಂತವನ್ನು ಒಪ್ಪಿದವರು ಎಂದರು. ಸಕ್ಕರೆ ಕಾರ್ಖಾನೆಗಳ ಕುರಿತು ನಿಯೋಗದೊಂದಿಗೆ ತೆರಳಿ ಕೇಂದ್ರಕ್ಕೆ‌ ಮನವಿ ಸಲ್ಲಿಸಲಾಗಿದೆ. ಇಂದಿಗೂ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲಾಗಿಲ್ಲ. ಕಾರ್ಖಾನೆಗಳು ಹಾಗೂ ರೈತರಲ್ಲಿ ಸಮನ್ವಯ ಬರಬೇಕಿದೆ. ಸರ್ಕಾರ ಸಹ ಸ್ಪಂದಿಸುವ ಕೆಲಸ ಮಾಡುತ್ತಿದೆ. ಇಂಡಿ ತಾಲೂಕಿನಲ್ಲಿ ರೈತರಿಗೆ ಬೆಳೆ ಹಾನಿ ವಿತರಣೆಗೂ ಕ್ರಮ ವಹಿಸಲಾಗುತ್ತಿದೆ ಎಂದು ಭರವಸೆ ನೀಡಿದರು. ಕಾಂಗ್ರೆಸ್ ಪಕ್ಷದಲ್ಲಿ ಮನಿ ಪವರ್ ಬಗ್ಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ತತ್ವ ಹಾಗೂ ಸಿದ್ಧಾಂತಕ್ಕೆ ಬೆಲೆ ಇದೆ. ಸಚಿವ ಸಂಪುಟದಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಹೀಗಾಗಿ, ಸಚಿವ ಸ್ಥಾನಕ್ಕೆ ಸಮಾನವಾದ ನಿಗಮ ಮಂಡಳಿಯಲ್ಲಿ ಅವಕಾಶ ಕೊಡಲಾಗಿದೆ ಎಂದರು.

2013ರಲ್ಲಿ ಶಿವಾನಂದ ಪಾಟೀಲ ಹಾಗೂ ಸಿ.ಎಸ್‌.ನಾಡಗೌಡ, ನಾನು ಒಟ್ಟಿಗೆ ಹೋಗಿ, ಶಿವಾನಂದ, ನಾಡಗೌಡ ಇಬ್ಬರಲ್ಲಿ ಒಬ್ಬರಿಗೆ ಸಚಿವರನ್ನಾಗಿ ಮಾಡಿ ಎಂದು ಹೇಳಿದ್ದೆ. ಈಗಲೂ ನಾನಾಗಿ ಸಚಿವ ಸ್ಥಾನವನ್ನು ನೀಡಿ ಎಂದು ಯಾರನ್ನು ಕೇಳಿಲ್ಲ. ರಾಜ್ಯದಲ್ಲಿ 136 ಮತ್ತು ಬೇರೆಡೆಯಿಂದ ಬಂದ 5 ಜನ ಸೇರಿ ಒಟ್ಟು 141 ಜನ ಶಾಸಕರು ಇದ್ದೇವೆ. ನನ್ನ ವಿಷಯದಲ್ಲಿ ಚುನಾವಣಾ ಪೂರ್ವದಲ್ಲಿ ಮಾತುಕೊಟ್ಟಂತೆ ನಡೆಯಬೇಕು ಎಂಬುದು ಅಪೇಕ್ಷೆ ಇದೆ. ಆ ಪ್ರಕಾರ ನಡೆಯಬೇಕು ಎಂದೂ ನಾನು ಹೇಳಲ್ಲ. ನಮ್ಮಲ್ಲಿ ನಡೆದ ಮಾತುಕತೆಗೆ ಬೆಲೆ ಇದಿಯೋ‌ ಇಲ್ಲವೋ? ಎಂಬುದು ಅಷ್ಟೇ ನನ್ನ ನಿಲುವು.
- ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!