ಕೊಬ್ಬರಿಗೆ ಬೆಂಬಲ ಬೆಲೆ ಕೊಡುವ ಅಧಿಕಾರ ಡಿಕೆಶಿಗೆ ಇಲ್ಲ: ಶಾಸಕ ಶಿವಲಿಂಗೇಗೌಡ

By Govindaraj S  |  First Published Dec 3, 2023, 1:04 PM IST

ಚುನಾವಣೆ ವೇಳೆ ಡಿ.ಕೆ. ಶಿವಕುಮಾರ್ ಭಾಷಣ ಮಾಡಿ ಕೊಬ್ಬರಿಗೆ ಬೆಂಬಲ ಬೆಲೆ ಕೊಡುವುದಾಗಿ ಟೊಳ್ಳು ಭರವಸೆ ನೀಡಿದ್ದಾರೆ. ಅವರಿಗೆ ಪರಿಷ್ಕರಣೆ ಮಾಡುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರವು ಬೆಂಬಲ ಬೆಲೆ ಕೊಡಬೇಕೆಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದರು.


ಹಾಸನ (ಡಿ.03): ಚುನಾವಣೆ ವೇಳೆ ಡಿ.ಕೆ. ಶಿವಕುಮಾರ್ ಭಾಷಣ ಮಾಡಿ ಕೊಬ್ಬರಿಗೆ ಬೆಂಬಲ ಬೆಲೆ ಕೊಡುವುದಾಗಿ ಟೊಳ್ಳು ಭರವಸೆ ನೀಡಿದ್ದಾರೆ. ಅವರಿಗೆ ಪರಿಷ್ಕರಣೆ ಮಾಡುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರವು ಬೆಂಬಲ ಬೆಲೆ ಕೊಡಬೇಕೆಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಬ್ಬರಿಗೆ ಬೆಂಬಲ ಬೆಲೆ ಕೊಡಲು ಆಗ್ರಹಿಸಿ ಡಿ.ಕೆ.ಶಿವಕುಮಾರ್ ಅವರು ಬೆಲೆ ಪರಿಷ್ಕರಣೆ ಮಾಡಲು ಅಧಿಕಾರ ಇಲ್ಲ. ಚುನಾವಣೆಯಲ್ಲಿ ಭಾಷಣ ಮಾಡುತ್ತಾರೆ ಅಷ್ಟೆ. ರಾಜ್ಯ ಸರ್ಕಾರ ಸಹಾಯಧನ ಕೊಡಬಹುದು ಅಷ್ಟೇ, ಬೆಲೆ ಪರಿಷ್ಕರಣೆ ಸಾಧ್ಯ ಇಲ್ಲ. ನಗರದಲ್ಲಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡಿದ್ದು, ಆದರೇ ಅವರು ರಾಜ್ಯ ಸರ್ಕಾರವನ್ನು ಕೇಳಲು ಹೇಗೆ ಆಗುತ್ತದೆ. ಕೇಂದ್ರವನ್ನು ಕೇಳಬೇಕು. ಈ ಪುಣ್ಯಾತ್ಮರು ಅವರ ಜೊತೆಯಲೇ ಹೋಗಿದಾರಲ್ಲ ಮೈತ್ರಿಮಾಡಿಕೊಂಡು ಅಲ್ಲಿ ಕೇಳಲಿ ಎಂದು ತಾಕೀತು ಮಾಡಿದರು. ಬೆಂಬಲ ಬೆಲೆಗಾಗಿ ನಾವೂ ಕೂಡ ಹೋರಾಟ ಮಾಡುತ್ತೇವೆ ಎಂದರು.

Tap to resize

Latest Videos

ಸಿದ್ದು ಸರ್ಕಾರದಿಂದ 6 ತಿಂಗಳಲ್ಲಿ 60 ತಪ್ಪು: ಆರ್‌.ಅಶೋಕ್‌ ವಾಗ್ದಾಳಿ

ಕೊಬ್ಬರಿ ಬೆಲೆ ಸಂಪೂರ್ಣ ಕುಸಿದು ಹೋಗಿದೆ. ೧೯ ಸಾವಿರ ಇದ್ದ ಬೆಲೆ ೭ ಸಾವಿರಕ್ಕೆ ಕುಸಿದಿದ್ದು, ಅದನ್ನು ಯಾರು ಕೇಳೋರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ೧೧೮೦೦ ರು.ಗೆ ಕೇಂದ್ರ ಸರ್ಕಾರ ಕೊಬ್ಬರಿ ಖರೀದಿ ಮಾಡಿತ್ತು. ೧೨೦೦ ರಾಜ್ಯ ಕೊಟ್ಟರೆ ೧೩ ಸಾವಿರ ಆಗುತ್ತೆ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆವು. ಸಿಎಂ ಕೂಡ ಇದಕ್ಕೆ ಒಪ್ಪಿ ಆದೇಶ ಮಾಡಿದ್ರು. ಆದರೆ ಸದನ ಮುಗಿದ ಕೆಲವೇ ದಿನದಲ್ಲಿ ಕೊಬ್ಬರಿ ಖರೀದಿ ನಿಂತು ಹೋಗಿದೆ. ಕೊಬ್ಬರಿ ಖರೀದಿಗೆ ನಫೆಡ್ ಕೇಂದ್ರ ತೆರೆಯೋದಿ ಕೇಂದ್ರದ ಜವಾಬ್ದಾರಿ. ಆದರೆ ಅವರು ಖರೀದಿ ಮಾಡದೆ ಅನ್ಯಾಯ ಮಾಡಿ ತಾರತಮ್ಯ ಮಾಡಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಯಾವುದೇ ಕೃಷಿ ಉತ್ಪನ್ನ ಕನಿಷ್ಠ ಬೆಲೆಗಿಂದ ಕೆಳಗೆ ಕುಸಿದರೆ ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಬೇಕು ಮತ್ತು ರೈತರ ಬೆಂಬಲಕ್ಕೆ ನಿಲ್ಲಬೇಕು. ಬೆಂಬಲ ಬೆಲೆ ಘೋಷಣೆ ಮಾಡಬೇಕು ಎನ್ನೋದು ಕಾನೂನು. ದೆಹಲಿಯಲ್ಲಿ ರೈತರು ಧರಣಿ ಕೂತಾಗ ಪ್ರದಾನಿಯವರು ಬೆಂಬಲ ಬೆಲೆ ಬಗ್ಗೆ ಮಾತನಾಡಿದ್ರು. ಆಗಿಂದಾಗ್ಗೆ ಬೆಂಬಲ ಬೆಲೆ ಪರಿಷ್ಕರಣೆ ಮಾಡೋದಾಗಿ ಹೇಳಿ ಹೋರಾಟ ನಿಲ್ಲಿಸಲು ಮನವಿ ಮಾಡಿದ್ರು. ಕೊಬ್ಬರಿ ಬೆಲೆ ಇಷ್ಟು ಕುಸಿದರೂ ಕೇಂದ್ರ ಯಾಕೆ ಖರೀದಿ ಆರಂಭ ಮಾಡಿಲ್ಲ. ಇವರಿಗೆ ರೈತರ ಬಗ್ಗೆ ಕಾಳಜಿ ಇದೆಯಾ? ಆತ್ಮಸಾಕ್ಷಿ ಇದೆಯಾ ಎಂದರು.

ಉದ್ದುದ್ದ ಭಾಷಣ ಮಾಡ್ತೀರಲ್ಲ ಯಾಕೆ ರೈತರ ರಕ್ಷಣೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಯಾವ ಉದ್ದೇಶಕ್ಕಾಗಿ ನೀವು ಇನ್ನು ಕೊಬ್ಬರಿ ಖರೀದಿ ಮಾಡಿಲ್ಲ. ಈ ಬಗ್ಗೆ ಕೇಂದ್ರ ಉತ್ತರ ಹೇಳಬೇಕು. ಲೋಕಸಭಾ ಸದಸ್ಯರು ಇದಕ್ಕೆ ಉತ್ತರ ಹೇಳಬೇಕು ಎಂದು ಒತ್ತಾಯಿಸಿದರು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ದೂರಬೇಡಿ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಾಯ ಒತ್ತಡ ಹೇರಬಹುದು ಅಷ್ಟೇ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಆದರೆ ರಾಜ್ಯ ಸರ್ಕಾರ ೧೨೦೦ ಬೆಂಬಲ ಬೆಲೆ ಕೊಡಲು ತಯಾರಿದೆ. ಆದರೆ ಕೇಂದ್ರ ಕೊಬ್ಬರಿ ಖರೀದಿಗೆ ತಯಾರಿಲ್ಲ. ಏನು ಮಾಡೋದು ಎಂದರು.

ಎಂಎಲ್‌ಸಿ ಸಿ.ಪಿ.ಯೋಗೇಶ್ವರ್‌ ಭಾವ ಮಹದೇವಯ್ಯ ನಾಪತ್ತೆ: ಕಿಡ್ನಾಪ್‌ ಶಂಕೆ

ಈ ರಾಜ್ಯದ ಬಿಜೆಪಿ ಮುಖಂಡರು, ವಿಪಕ್ಷ ನಾಯಕ ಅಶೋಕ್ ಅವರೇ ಹೇಳಲಿ. ಕೂಡಲೆ ಕೊಬ್ಬರಿ ಖರೀದಿ ಮಾಡಲು ಕೇಂದ್ರ ಸರ್ಕಾರಕ್ಕೆ ಹೇಳಲಿ. ಜನರು ಇದನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಭಾವಿಸುತ್ತಾರೆ. ಆದರೆ ಖರೀದಿ ಮಾಡಬೇಕಿರೋದು ಕೇಂದ್ರ ಸರ್ಕಾರ. ಸಿದ್ದರಾಮಯ್ಯ ಅವರು ಖರೀದಿ ಮಾಡಲು ಆಗುವುದಿಲ್ಲ. ಇಷ್ಟೆಲ್ಲ ರೈತರ ಸಮಸ್ಯೆ ಇದ್ದರೂ ಮೋದಿಯವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆಯಾಗಿದೆ. ಸಂಕಷ್ಟ ಎದುರಿಸಲು ಕೇಂದ್ರ ಬರದಿದ್ದರೆ ಮೋದಿಯವರು ಕೇಂದ್ರ ಸರ್ಕಾರವೇ ಮುಂದೆ ಆಗೋ ಅನಾಹುತಕ್ಕೆ ಹೊಣೆ ಆಗಬೇಕಾಗುತ್ತದೆ ಎಂದ ಅವರು ಕೂಡಲೇ ಎಚ್ಚೆತ್ತುಕೊಂಡು ಕೊಬ್ಬರಿ ಖರೀದಿ ಮಾಡುವಂತೆ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೇಯಸ್ ಪಟೇಲ್, ಲಕ್ಷ್ಮಣ್, ಇತರರು ಉಪಸ್ಥಿತರಿದ್ದರು.

click me!