ಸೋನಿಯಾಗಾಂಧಿಗೆ ತಲೆಬಾಗಲಿಲ್ಲವೆಂದು ಜೈಲಿಗೆ ಹೋಗಬೇಕಾಯ್ತು: ಜನಾರ್ದನ ರೆಡ್ಡಿ

By Kannadaprabha NewsFirst Published Dec 1, 2023, 6:41 PM IST
Highlights

ರಾಜಕೀಯ ಸ್ವಾರ್ಥ, ಮುಖ್ಯಮಂತ್ರಿಯಾಗುವ ಆಸೆಯಿಂದ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿ ಅಧಿಕಾರ ಪಡೆದರು. ಅವರಿಗೂ ಗೊತ್ತು, ನಾನು ಏನೂ ತಪ್ಪು ಮಾಡಿಲ್ಲ ಅಂತ. ನಾನು ಸೋನಿಯಾ ಗಾಂಧಿಗೆ ತಲೆಬಾಗಲಿಲ್ಲ ಎಂಬ ಕಾರಣಕ್ಕೆ ಜೈಲಿಗೆ ಹೋಗಬೇಕಾಯಿತು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. 

ಗಂಗಾವತಿ (ಡಿ.01): ರಾಜಕೀಯ ಸ್ವಾರ್ಥ, ಮುಖ್ಯಮಂತ್ರಿಯಾಗುವ ಆಸೆಯಿಂದ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿ ಅಧಿಕಾರ ಪಡೆದರು. ಅವರಿಗೂ ಗೊತ್ತು, ನಾನು ಏನೂ ತಪ್ಪು ಮಾಡಿಲ್ಲ ಅಂತ. ನಾನು ಸೋನಿಯಾ ಗಾಂಧಿಗೆ ತಲೆಬಾಗಲಿಲ್ಲ ಎಂಬ ಕಾರಣಕ್ಕೆ ಜೈಲಿಗೆ ಹೋಗಬೇಕಾಯಿತು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ಕನಕದಾಸ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಹಾಲುಮತ ಸಮಾಜ ಏರ್ಪಡಿಸಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನನ್ನಿಂದ ಉಪಕಾರ ಪಡೆದು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹೈಕಮಾಂಡ್ ಹಾಗೂ ಕೆಲವು ವ್ಯಕ್ತಿಗಳು ನನ್ನ ವಿರುದ್ಧ ರಾಜ್ಯ ಸರ್ಕಾರ ದಾಖಲಿಸಿದ್ದ ಕೇಸ್‌ಗಳನ್ನು ವಾಪಸ್ ಪಡೆಯಲಿಲ್ಲ. ಪ್ರಸ್ತುತ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ನಿಷ್ಠರಾಗಿದ್ದಾರೆ. ಅವರ ಮೇಲಿನ ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ವ್ಯಕ್ತಿಗೆ ನೀಡಿದ ಗೌರವ ಇದಾಗಿದೆ. ಈ ಬುದ್ಧಿ ಆಗ ನಮ್ಮ ಬಿಜೆಪಿಯವರಿಗೆ ಬರಲಿಲ್ಲ. ನಾನು ಜೈಲಿಗೆ ಹೋಗುವುದು ಅವರಿಗೆ ಬೇಕಿತ್ತು. 

ರಾಜ್ಯ ಕ್ಯಾಬಿನೆಟ್‌ನಲ್ಲಿ ಕಳ್ಳರ ತಂಡವೇ ಕೂತಿದೆ: ಶೋಭಾ ಕರಂದ್ಲಾಜೆ

ನನ್ನ ಜತೆ ದೇವರ ಆಶೀರ್ವಾದ ಹಾಗೂ ಜನತೆಯ ಸಹಕಾರದಿಂದ ಪುನಃ ಗಂಗಾವತಿ ಮತದಾರ ರಾಜಕೀಯ ಮರುಜೀವ ನೀಡಿದ್ದಾರೆ. ಅವರ ಋಣ ತೀರಿಸುವ ಕಾರ್ಯ ಮಾಡುತ್ತೇನೆ. ಇನ್ನು ಮುಂದೆ ಎಂದಿಗೂ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದರು. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಗೆ ಸಂಪೂರ್ಣ ಬಹುಮತವಿಲ್ಲದಿದ್ದರೂ ಕಷ್ಟಪಟ್ಟು ಅಧಿಕಾರ ಕೊಡಿಸಿದೆ. ನನ್ನ ಸಂಕಷ್ಟ ಕಾಲದಲ್ಲಿ ಬಿಜೆಪಿ ಹೈಕಮಾಂಡ್ ನನ್ನ ನೆರವಿಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ದಾಸಶ್ರೇಷ್ಠ ಕನಕದಾಸರ ತತ್ವ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದರು.

ಜೋಡೆತ್ತುಗಳಾದ ಸಿದ್ದು, ಡಿಕೆಶಿ ಈಗ ಪರಸ್ಪರ ಕಾಲೆಳೆಯುತ್ತಿದ್ದಾರೆ: ಆರ್‌.ಅಶೋಕ್‌

ಸಾನ್ನಿಧ್ಯವನ್ನು ಹಾಲುಮತ ಸಮಾಜದ ಗುರುಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಮಾಜಿ ಶಾಸಕ ಜಿ.ವೀರಪ್ಪ, ಹಾಲುಮತ ಸಮಾಜದ ಮುಖಂಡರಾದ ವಿಠಲಾಪುರ ಯಮನಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ನೀಲಪ್ಪ, ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ, ನವಲಿ ಯಮನಪ್ಪ, ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟೇಶ, ನೀಲಕಂಠಪ್ಪ ಹೊಸಳ್ಳಿ, ತಹಸೀಲ್ದಾರ ವಿಶ್ವನಾಥ ಮುರುಡಿ, ಬಿಇಒ ವೆಂಕಟೇಶ, ಯಮನೂರಪ್ಪ ಚೌಡ್ಕಿ, ಮೋರಿ ದುರಗಪ್ಪ ಇದ್ದರು.

click me!