ಕೊರಟಗೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವೆ: ಶಾಸಕ ಪರಮೇಶ್ವರ್‌

By Govindaraj SFirst Published Sep 4, 2022, 12:58 AM IST
Highlights

ಗಣಪತಿಯ ಆಶೀರ್ವಾದದಿಂದ ನಾನು ಕೊರಟಗೆರೆ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಕೊರಟಗೆರೆ ಪಟ್ಟಣವನ್ನು ಮಾದರಿ ಪಟ್ಟಣ ಮಾಡುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಪಟ್ಟಣದ ಮೂಲಕ ಹಾದುಹೋಗಿರುವ ಪ್ರಧಾನ ರಸ್ತೆಯನ್ನು 10 ಕೋಟಿ ರು.ವೆಚ್ಚದಲ್ಲಿ ವೈಟ್‌ಟಾಪಿಂಗ್‌ ರಸ್ತೆಯನ್ನಾಗಿ ಮಾಡಲಾಗಿದೆ. 

ಕೊರಟಗೆರೆ (ಸೆ.04): ಕೊರಟಗೆರೆ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ನನ್ನದು ಎಂದು ಶಾಸಕ ಡಾ.ಜಿ.ಪರಮೇಶ್ವರ್‌ ಹೇಳಿದರು. ಪಟ್ಟಣದ ಕಟ್ಟೆಗಣಪತಿ ದೇವಾಲಯದ ಅಭಿವೃದ್ಧಿ ಮಂಡಲಿ, ಮಹಿಳಾ ಮಂಡಲಿ ಹಾಗೂ ಯುವಕ ಮಂಡಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಕಟ್ಟೆಗಣಪತಿ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿರುವ ಪರಿಸರ ಗಣಪತಿ ಹಾಗೂ ಉದ್ಭವ ಕಟ್ಟೆಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. 

ಗಣಪತಿಯ ಆಶೀರ್ವಾದದಿಂದ ನಾನು ಕೊರಟಗೆರೆ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಕೊರಟಗೆರೆ ಪಟ್ಟಣವನ್ನು ಮಾದರಿ ಪಟ್ಟಣ ಮಾಡುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಪಟ್ಟಣದ ಮೂಲಕ ಹಾದುಹೋಗಿರುವ ಪ್ರಧಾನ ರಸ್ತೆಯನ್ನು 10 ಕೋಟಿ ರು.ವೆಚ್ಚದಲ್ಲಿ ವೈಟ್‌ಟಾಪಿಂಗ್‌ ರಸ್ತೆಯನ್ನಾಗಿ ಮಾಡಲಾಗಿದೆ. ಅದರೊಂದಿಗೆ ಪಟ್ಟಣದ ಒಳ ರಸ್ತೆಗಳನ್ನು ಸಿ.ಸಿ ರಸ್ತೆಗಳನ್ನಾಗಿ ಮತ್ತು ಉತ್ತಮ ರೀತಿಯ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. 

ತುಮಕೂರು: ಪದೇ ಪದೇ ಮೂತ್ರ ಮಾಡಿದ ಬಾಲಕನ ಗುಪ್ತಾಂಗ ಸುಟ್ಟ ಶಿಕ್ಷಕಿ

ಪಟ್ಟಣಕ್ಕೆ ಹೊಂದಿಕೊಡಂತೆ ಇರುವ ಗೋಕುಲದ ಕೆರೆಯ ಅಭಿವೃದ್ಧಿ ಮಾಡಿ ಹಿರಿಯ ನಾಗರಿಕರು ಮತ್ತು ಮಹಿಳೆಯರು, ಯುವಕರಿಗೆ ಕೆರೆಯ ಸುತ್ತಾ ವಾಕಿಂಗ್‌ ಪಾತ್‌ ನಿರ್ಮಾಣ ಹಾಗೂ ಮಕ್ಕಳಿಗೆ ಪಾರ್ಕ್ ನಿರ್ಮಾಣ, ಕೆರೆ ಮಧ್ಯ ಭಾಗದಲ್ಲಿ ನೀರಿನ ಚಿಲುಮೆಯೊಂದಿಗೆ ಮಕ್ಕಳಿಗೆ ಬೋಟಿಂಗ್‌ ವ್ಯವಸ್ಥೆಯ ಯೋಜನೆಗೆ ನಮ್ಮ ಕಾಂಗ್ರೆಸ್‌ ಸರ್ಕಾರದಲ್ಲಿ 3.5 ಕೋಟಿ ಹಣ ಮಂಜೂರು ಮಾಡಿಸಲಾಗಿತ್ತು. ಕೆರೆ ಕಾಮಗಾರಿ ಪ್ರಾರಂಭಕ್ಕೂ ಮುನ್ನವೆ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದಲ್ಲಿ ಹಣ ವಾಪಸ್‌ ಪಡೆಯಲಾದ ಹಿನ್ನೆಲೆಯಲ್ಲಿ ಕೆರೆ ಕಾಮಗಾರಿಗೆ ಹಿನ್ನೆಡೆ ಉಂಟಾಯಿತು. ಆದರೂ ಮುಂದಿನ ದಿನಗಳಲ್ಲಿ ಹಣ ಮತ್ತೆ ಮಂಜೂರು ಮಾಡಿಸಿ ಗೋಕುಲದ ಕೆರೆ ಅಭಿವೃದ್ಧಿ ಮಾಡಿಸುವ ಭರವಸೆ ನೀಡಿದರು.

ಈ ಸಂದರ್ಭಧಲ್ಲಿ ಕಟ್ಟೆಗಣಪತಿ ದೇವಾಲಯದ ಅಭಿವೃದ್ಧಿ ಮಂಡಲಿಯ ಎನ್‌.ಪದ್ಮನಾಭ್‌, ಪಪಂ ಮಾಜಿ ಉಪಾಧ್ಯಕ್ಷ ಕೆ.ವಿ.ಮಂಜುನಾಥ್‌, ಯುವಕ ಮಂಡಲಿಯ ಅಧ್ಯಕ್ಷ ಬೆನಕ ವೆಂಕಟೇಶ್‌, ಮಹಿಳಾ ಮಂಡಲಿ ಅಧ್ಯಕ್ಷೆ ಗಿರಿಜಮ್ಮ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್‌, ಅರಕೆರೆ ಶಂಕರ್‌, ಪಪಂ ಸದಸ್ಯ ಕೆ.ಆರ್‌.ಓಬಳರಾಜು, ನಂದೀಶ, ಗಟ್ಲಹಳ್ಳಿ ಕುಮಾರ್‌, ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್‌, ಕಟ್ಟೆಗಣಪತಿ ಯುವಕ ಸಂಘದ ಪದಾಧಿಕಾರಿಗಳಾದ ದತ್ತಾತ್ರೇಯ ದೀಕ್ಷಿತ್‌, ಸಂಜಯ್‌, ಗುರುದತ್‌ ದೀಕ್ಷಿತ್‌, ಕೆ.ಪಿ.ಅಭಿಲಾಷ್‌, ಪಿಎಲ್‌ಡಿ ಬ್ಯಾಂಕ್‌ ವಿಜಯ್‌ಕುಮಾರ್‌, ಜಿ.ಎಲ್‌.ಸುರೇಶ್‌, ರಂಜಿತ್‌, ಸಿದ್ದೇಶ್‌, ಗೋಪಿನಾಥ್‌, ದಿಲೀಪ್‌ಕುಮಾರ್‌, ಚಿರು, ಜಗ್ನನಾಥ್‌, ದೀಪು, ಮಧು, ಕಿರಣ್‌ಕುಮಾರ್‌, ಚಂದ್ರಶೇಖರ್‌ ಇತರರಿದ್ದರು.

ಮನೆಮನೆಗೆ ನೀರು ಒದಗಿಸುವುದೇ ನಮ್ಮ ಕರ್ತವ್ಯ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧಕುಡಿಯುವ ನೀರನ್ನು ಸೇರಿದಂತೆ ವ್ಯಕ್ತಿಯ ಬಳಕೆಯ ನೀರನ್ನು ಹಾಗೂ ಸ್ವಚ್ಛ ಪರಿಸರವನ್ನು ಒದಗಿಸುವುದು ನಮ್ಮ ಕರ್ತವ್ಯ. ಕೊರಟಗೆರೆ ಕ್ಷೇತ್ರದಲ್ಲಿ ಈ ಕಾರ್ಯವನ್ನು ಹಂತ ಹಂತವಾಗಿ ಒದಗಿಸಿಕೊಂಡು ಬರುತ್ತಿದ್ದೇವೆ. ಜನರು ಹಾಗೂ ಗ್ರಾಮಗಳಿಗೆ ನೀರು ಒದಗಿಸುವ ನೌಕರರÜರು ನೀರಿನ ಮಹತ್ವನ್ನು ಅರಿತು ಅವಶ್ಯಕ ಮತ್ತು ಮಿತವಾಗಿ ಬಳಸಿ. ನೀರು ವ್ಯರ್ಥವಾಗದಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಮನಸ್ಸಿಲ್ಲ: ಮುಖ್ಯಮಂತ್ರಿ ಚಂದ್ರು

ತಾಲೂಕಿನ ಕಸಬಾ ಯೋಜನೆಯ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಶಪುರ ಗ್ರಾಮದಲ್ಲಿ ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಹಂಚಿಹಳ್ಳಿ ಗ್ರಾಮ ಪಂಚಾಯಿತಿಯ ಮುದ್ದರಂಗಯ್ಯನ ಪಾಳ್ಯ, ಹಂಚಿಹಳ್ಳಿ, ಜಿ.ನಾಗೇನಹಳ್ಳಿ, ಮಲ್ಲೇಶಪುರ, ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯ ಚಿಂಪುಗಾನಹಳ್ಳಿ, ಕೋಡ್ಲಹಳ್ಳಿ, ಬೂದಗವಿ ಗ್ರಾಮ ಪಂಚಾಯಿತಿಯ ನೇಗಲಾಲ ಗ್ರಾಮಗಳಲ್ಲಿ ಮನೆಗಳಿಗೆ ಕಾರ್ಯಾತ್ಮಕ ಕುಡಿಯುವ ನೀರಿನ ನಳ ಸಂಕರ್ಪ ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರದಲ್ಲಿ ಚಾಲನಾ ನಾಮ ಫಲಕದಲ್ಲಿ ಶಾಸಕರ ಹೆಸರು ಹಾಕದೆ ಗುತ್ತಿಗೆದಾರರ ಹೆಸರು ಇದ್ದದಕ್ಕೆ ಕಾರ್ಯಕರ್ತರು ಆಕ್ಷೇಪ ವ್ಯಕ್ತ ಪಡಿಸಿದರು. ಈ ಸಂಬಂಧ ಶಾಸಕರು ಅಧಿಕಾರಿಗೆ ಗಮನ ವಹಿಸುವಂತೆ ಸೂಚಿಸಿದರು.

click me!