ರಾಜ್ಯದಲ್ಲಿ ಔರಂಗಜೇಬ್ ಸರ್ಕಾರ: ಸಿದ್ಧರಾಮಯ್ಯ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ!

Published : Sep 10, 2025, 09:40 PM IST
ರಾಜ್ಯದಲ್ಲಿ ಔರಂಗಜೇಬ್ ಸರ್ಕಾರ: ಸಿದ್ಧರಾಮಯ್ಯ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ!

ಸಾರಾಂಶ

ರಾಜ್ಯದಲ್ಲಿ ಔರಂಗಜೇಬ ಸರ್ಕಾರ ಇದ್ದಂತಿದೆ. ಚಿತ್ರದುರ್ಗ ಜಿಲ್ಲೆಯೇನೂ ಪಾಕಿಸ್ತಾನ ಅಲ್ಲ ಎಂದು ಶರಣ್ ಪಂಪ್‌ವೆಲ್‌ಗೆ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಚಿತ್ರದುರ್ಗ (ಸೆ.10): ರಾಜ್ಯದಲ್ಲಿ ಔರಂಗಜೇಬ ಸರ್ಕಾರ ಇದ್ದಂತಿದೆ. ಚಿತ್ರದುರ್ಗ ಜಿಲ್ಲೆಯೇನೂ ಪಾಕಿಸ್ತಾನ ಅಲ್ಲ ಎಂದು ಶರಣ್ ಪಂಪ್‌ವೆಲ್‌ಗೆ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು. ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ದರ್ಶನ ಬಳಿಕ ಮಾತನಾಡಿದ ಅವರು, ಹಿಂದೂಗಳ ಮೇಲೆ ಸಿದ್ಧರಾಮಯ್ಯ ಸರ್ಕಾರದಿಂದ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದು, ಈ ಸರ್ಕಾರದ ಅಂತ್ಯ ಬಂದಿದೆ, ಇದೇ ಕೊನೆಯ ಅವಧಿ. ರಾಜ್ಯ ಸರ್ಕಾರದಿಂದ ಮುಸ್ಲಿಂ ತುಷ್ಟೀಕರಣ ನಡೆಯುತ್ತಿದೆ. ಮಸೀದಿಯಲ್ಲಿ 5 ಸಲ‌ ಧ್ವನಿವರ್ಧಕ ಬಳಕೆಗೆ ಅವಕಾಶ ಕೊಡ್ತಾರೆ. ರಾಜ್ಯದಲ್ಲಿ ಪರವಾನಿಗೆ ಇಲ್ಲದ ಅನೇಕ ಮಸೀದಿಗಳಿವೆ.

ಅಂಥ ಮಸೀದಿಗಳ ಮೇಲೆ ನಿಂತು ಕಲ್ಲೆಸೆಯಲು ಅವಕಾಶ ಕೊಡ್ತಾರೆ. ಮದ್ದೂರು ಗಲಭೆಗೆ ಗೃಹ ಸಚಿವರು ಸಣ್ಣ ಘಟನೆ ಎಂದು ಹೇಳ್ತಾರೆ. ಯಾವ ಘಟನೆ ಭೀಕರ ಎಂಬುದೇ ಅವರಿಗೆ ಗೊತ್ತಾಗ್ತಿಲ್ಲ ಎಂದು ವ್ಯಂಗ್ಯವಾಡಿದರಲ್ಲದೇ ಗೃಹ ಸಚಿವರಿಂದ ಬೇಜವಬ್ದಾರಿತನದ ಉತ್ತರ ಎಂದು ಕಿಡಿಕಾಡಿದರು. ಡಿಸಿಎಂ ಡಿಕೆಶಿ ಬ್ರದರ್ಸ್ ಮದ್ದೂರಲ್ಲಿ‌ ಕಲ್ಲೆಸೆದಿದ್ದಾರೆ. 18 ವರ್ಷದಿಂದ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಉತ್ಸವ ನಡೆಯುತ್ತಿದೆ. ಇಷ್ಟು ವರ್ಷಗಳು ಡಿಜೆ ಕೊಟ್ಟಿದ್ದಾರೆ, ಏನಾದರೂ ಗಲಾಟೆ ಆಗಿದೆಯೇ? ಮಸೀದಿ ಮೇಲಿರುವ ಮೈಕ್ ಗಳನ್ನು ಕಿತ್ತು ಹಾಕಿ, ಸುಪ್ರೀಂಕೋರ್ಟ್ ಸೂಚನೆ ಪ್ರಕಾರ ಮೈಕ್ ಕಿತ್ತು ಹಾಕಿ.

ಸಿಎಂ, ಡಿಸಿಎಂ, ಗೃಹಸಚಿವರ ಬಳಿ ತಾಕತ್ತಿದ್ದರೆ ಮೈಕ್ ಕಿತ್ತು ಹಾಕಿ, ಆ ಬಳಿಕ ನಮ್ಮ ಡಿಜೆನೂ ನೀವು ಬಂದ್ ಮಾಡಿಸಿ. ಪಾಕಿಸ್ತಾನ, ಪ್ಯಾಲೆಸ್ಟೈನ್ ಧ್ವಜ ಹಾರಿಸ್ತಾರೆ. ಇದೇ ರೀತಿ ಹೋದರೆ ಈ ಸರ್ಕಾರ ಕೆಲ ದಿನದಲ್ಲಿ ಪತನ ಆಗುತ್ತದೆ ಎಂದರು. ಪೊಲೀಸ್ ಅಧಿಕಾರಿಗಳು ಸಹ ಎಚ್ಚೆತ್ತುಕೊಳ್ಳಬೇಕಿದೆ. ಆರ್‌ಸಿಬಿ ವಿಜಯೋತ್ಸವ ವೇಳೆ‌ ಕಾಲ್ತುಳಿತ ಪ್ರಕರಣದಲ್ಲಿ ತಪ್ಪು ಸರ್ಕಾರದ್ದು, ಶಿಕ್ಷೆ ಆಗಿದ್ದು ಪೊಲೀಸರಿಗೆ ಎಂದು ಗೊತ್ತಿರಲಿ. ದುರ್ದೈವದ ಸಂಗತಿ ರಾಜ್ಯದಲ್ಲಿ ವಿಪಕ್ಷವೇ ಇಲ್ಲ. ಸರ್ಕಾರದ ವಿರುದ್ಧ ಮಾತಾಡುವ ಧಮ್‌ ಅಂತೂ ಇಲ್ಲ. ಪೂಜ್ಯ ತಂದೆ, ಮಕ್ಕಳು ರಾತ್ರಿ ಡಿಕೆಶಿ ಮನೆಯಲ್ಲಿ ಊಟ, ಬೆಳಗ್ಗೆ ಸಿಎಂ ಮನೇಲಿ ತಿಂಡಿ ಮಾಡ್ತಾರೆ. ಹೊಂದಾಣಿಕೆ ರಾಜಕೀಯದಿಂದ ಹಿಂದೂ ಕಾರ್ಯಕರ್ತರ ರಕ್ಷಣೆ ಆಗ್ತಿಲ್ಲ.

ಬಿಜೆಪಿ ಹೈಕಮಾಂಡ್ ಈ ಬಗ್ಗೆ ತಿಳಿದುಕೊಳ್ಳಬೇಕು. ಅಯೋಗ್ಯರೊಂದಿಗೆ ಹೋದರೆ ಬಿಜೆಪಿ ನೆಲಕಚ್ಚುತ್ತದೆ. ಬಿಜೆಪಿಗೆ ಹಿಂದೂಗಳೇ ಮತ ಹಾಕುವುದು, ಸಾಬರು ಹಾಕಲ್ಲ. ಸಾಬರು ಗೂಟ ಹೊಡೆಯೋದು ಬಿಜೆಪಿಗೆ, ಓಟ್ ಹಾಕೋದು ಕಾಂಗ್ರೆಸ್ಸಿಗೆ. ಚಿತ್ರದುರ್ಗದಲ್ಲಿ ಶೋಭಾಯಾತ್ರೆಗೆ 8ಲಕ್ಷಕ್ಕೂ ಅಧಿಕ ಜನ ಸೇರುತ್ತಾರೆ. ಈವರೆಗೆ ಯಾವುದೇ ಗಲಭೆ, ಗಲಾಟೆ ನಡೆಸಿಲ್ಲ. ಡಿಜೆ ಕೊಡಲ್ಲ ಎಂದಿರುವ ಸಚಿವ ಡಿ.ಸುಧಾಕರ್‌ಗೆ ಶಾಸಕ ಯತ್ನಾಳ್ ಟಾಂಗ್ ಕೊಟ್ಟರಲ್ಲದೇ ಉಸ್ತುವಾರಿ ಸಚಿವ ಡಿ ಸುಧಾಕರ್‌ಗೆ ಏನಾಗಿದೆಯೋ ಗೊತ್ತಿಲ್ಲ. ಸುಧಾಕರ್ ಯಾಕೆ ಸಾಬರ ಪರ ಆಗಿದ್ದಾರೋ ಗೊತ್ತಿಲ್ಲ. ಜಿಲ್ಲೆಯ ಸ್ವಾಭಿಮಾನ ಇಲ್ಲದ ಜಿಲ್ಲಾ ಮಂತ್ರಿ ಡಿ.ಸುಧಾಕರ್ ಎಂದರು.

ಇನ್ನು ಧರ್ಮಸ್ಥಳ ಅಪವಿತ್ರ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಜೈನ ಧರ್ಮಕ್ಕೆ, ವಿರೇಂದ್ರ ಹೆಗ್ಗಡೆ ಅವರಿಗೆ ಅಪಮಾನ ಆಗಿದೆ. ಹಿಂದೂ ಧರ್ಮದ ಪವಿತ್ರ ಕ್ಷೇತ್ರಕ್ಕೆ ಅಪಮಾನ ಆಯಿತು. ಒಬ್ಬ ಕಾಂಗ್ರೆಸ್ಸಿಗನೂ ಈ ಬಗ್ಗೆ ಮಾತಾಡಲಿಲ್ಲ ಎಂದು ಕಿಡಿಕಾರಿದರು. ಇವರಿಗೆ ಬರೀ ಕುರ್ಚಿ ಬೇಕಾಗಿದೆ, ಲೂಟಿ ಮಾಡಬೇಕಾಗಿದೆ. ಶಾಸಕ ಸಂಗಮೇಶ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗುವ ಇಂಗಿತ ವಿಚಾರವಾಗಿ ಈಗಲೇ ಸಂಗಮೇಶ ಮುಸ್ಲಿಂ ಆಗಲಿ ಎಂದು ಮೌಲ್ವಿ ಆಹ್ವಾನ ನೀಡಿದ್ದಾರೆ. ಇಸ್ಲಾಂನಲ್ಲಿ ಪುನರ್ಜನ್ಮ ಇಲ್ಲ, ಸತ್ತರೆ ಸೀದಾ ಜನ್ನತ್‌ಗೆ ಹೋಗ್ತಾರೆ. ಜನ್ನತ್‌ನಲ್ಲಿ 72 ಸುಂದರಿಯರು ಸೇವೆಗೆ ಕಾದಿರುತ್ತಾರೆಂದು ವ್ಯಂಗ್ಯವಾಡಿದರು. ಸಂಗಮೇಶ ಬೇಗ ಇಸ್ಲಾಂಗೆ ಸೇರಿ, ಕ್ರಿಮಿಕೀಟ ಹೋರ ಹೋದಂತಾಗುತ್ತದೆಂದು ಶಾಸಕ ಯತ್ನಾಳ್ ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು