ಡಿಸಿ, ಎಸಿಗೆ ಧಮ್ಕಿ ಹಾಕಿದ್ದಾನೆ ಸಚಿವ ಜಮೀರ್‌: ಶಾಸಕ ಬಸನಗೌಡ ಯತ್ನಾಳ

By Kannadaprabha News  |  First Published Nov 7, 2024, 4:49 AM IST

ಇಲ್ಲಿಗೆ ಜೆಪಿಸಿ ಚೇರ್ಮನ್ ಆಗಮಿಸುತ್ತಿದ್ದು, ಮಾಹಿತಿ ನೀಡಲು ತಯಾರಿ ಮಾಡಿಕೊಂಡಿದ್ದೇವೆ. ನ.7ರಂದು ಮಧ್ಯಾಹ್ನ 12 ಗಂಟೆಗೆ ಜೆಪಿಸಿ ಚೇರ್ಮನ್ ಬರ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 


ವಿಜಯಪುರ (ನ.07): ಇಲ್ಲಿಗೆ ಜೆಪಿಸಿ ಚೇರ್ಮನ್ ಆಗಮಿಸುತ್ತಿದ್ದು, ಮಾಹಿತಿ ನೀಡಲು ತಯಾರಿ ಮಾಡಿಕೊಂಡಿದ್ದೇವೆ. ನ.7ರಂದು ಮಧ್ಯಾಹ್ನ 12 ಗಂಟೆಗೆ ಜೆಪಿಸಿ ಚೇರ್ಮನ್ ಬರ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದ ಡಿಸಿ ಕಚೇರಿ ಬಳಿ ನಡೆಯುತ್ತಿರುವ ಹೋರಾಟದ ವೇಳೆ ಮಾತನಾಡಿದ ಅವರು, ಜಮೀರ್ ಬಂದು ಹೋದ ಮೇಲೆ ದಿಢೀರ್ ಆಗಿ ರೈತರ ಜಮೀನಿನಲ್ಲಿ ವಕ್ಫ್‌ ಎಂದು ನೋಂದಣಿಯಾಗಿವೆ. 

ಜಮೀರ್ ಡಿಸಿ, ಎಸಿಗೆ ಧಮ್ಕಿ ಹಾಕಿದ್ದಾನೆ. ನನ್ನ ಸಿಎಂ ಕಳಿಸಿದ್ದಾರೆ ಎಂದು ಧಮ್ಕಿ ಹಾಕಿದ್ದಾನೆ‌‌ ಎಂದು ಆಕ್ರೋಶ ಹೊರಹಾಕಿದರು. ಢವಳಗಿ ಮಠದ 19 ಎಕರೆ ಇಂದು ಖಬರಸ್ತಾನ್ ಆಗಿದೆ. ದಾನ ಮಾಡಿದ ಜಾಗ ಈಗ ವಕ್ಫ್‌ ಆಗಿದೆ. ವಕ್ಫ್‌ ವ್ಯಾಪ್ತಿ ಹೆಚ್ಚುತ್ತಾ ಹೋಗಿದೆ. ಇನ್ನು ರಾಜ್ಯದಲ್ಲಿ ವಕ್ಫ್‌ನ ಜಾಗ ವಿಸ್ತಾರವಾಗುತ್ತಿದೆ. ಒಂದು ಲಕ್ಷ ಎಕರೆ ಇದ್ದದ್ದು 6 ಲಕ್ಷದ ದಾಟುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ನೋಟಿಸ್ ಹೋಗುತ್ತಿವೆ. ಜಿಲ್ಲಾಡಳಿತದಿಂದ ರೈತರ ಬಳಿ ದಾಖಲೆ ಕೇಳುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿಗಳಿಂದ ಆದೇಶ ಬಂದಿದೆ.

Latest Videos

ಇಷ್ಟು ಆಸ್ತಿ ಸೇರಿಸಿ ಎಂದು ಮುಸ್ಲಿಂ ಏಜೆಂಟ್ ಪಕ್ಷಗಳು ದೇಶದಲ್ಲಿವೆ. ಅವು ಈಗ ನಮ್ಮನ್ನು ಪ್ರಶ್ನೆ ಮಾಡುತ್ತಿವೆ. ರೈತರನ್ನು ಕೇಳದೆ ವಕ್ಫ್‌ ಹೆಸರು ಸೇರ್ಪಡೆಯಾಗಿವೆ. ಇಂಡಿಯಲ್ಲಿ ರಾತ್ರೋರಾತ್ರಿ ಇಡೀ ಊರು ವಕ್ಫ್‌ ಆಗಿತ್ತು. ನಾನು ಕಾಲ್ ಮಾಡಿದ ಮೇಲೆ ಬೆಳಗ್ಗೆ ವಕ್ಫ್‌ ಹೆಸರು ಕ್ಲೀಯರ್ ಮಾಡಿದ್ದಾರೆ. ಇದು ಸಿದ್ದರಾಮಯ್ಯ ಹಾಗೂ ಜಮೀರ್ ಷಡ್ಯಂತ್ರ ಎಂದು ಆರೋಪಿಸಿದರು.

ಸಿ.ಪಿ.ಯೋಗೇಶ್ವರ್ ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್: ದೇವೇಗೌಡ ವಾಗ್ದಾಳಿ

ಸಿದ್ದರಾಮಯ್ಯ ಮುಂದಿನ ಜನ್ಮದ ತಯಾರಿ: ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದಾರೆ. ಈಗಲೇ ಸಿಎಂ ಮುಂದಿನ ಜನ್ಮದ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕುಟುಕಿದರು. ಕುರುಬ ಸ್ವಾಮೀಜಿಗಳೆ ಸಿದ್ದರಾಮಯ್ಯ ವರ್ತನೆಗೆ ಶಾಕ್ ಆಗಿದ್ದಾರೆ. ಕುರುಬ ದೇಗುಲಗಳನ್ನೇ ವಕ್ಫ್‌ ಮಾಡಿದ್ದಾರೆ. ಜೆಪಿಸಿ ಭೇಟಿ ಮಹತ್ವದ್ದು, ಮಹತ್ವದ ಘಟ್ಟಕ್ಕೆ ನಾವು ಬಂದಿದ್ದೇವೆ. ಬಿಲ್ ಪಾಸ್ ಮಾಡಲು ಅನುಕೂಲವಾಗಲಿದೆ. ದೆಹಲಿಯೇ ವಿಜಯಪುರಕ್ಕೆ ಬರ್ತಿದೆ. ಇದು ಹೆಮ್ಮೆಯ ವಿಚಾರ, ಇಲ್ಲವಾದರೆ ನಾವು ದೆಹಲಿಗೆ ಓಡಾಡಬೇಕಿತ್ತು. ಸಚಿವೆ ಶೋಭಾ ಕರಂದ್ಲಾಜೆ ಇಲ್ಲಿ ಬಂದು ನಮಗೆ ಅನುಕೂಲ ಆಗಿದೆ ಎಂದು ಶಾಸಕ ಯತ್ನಾಳ ಹೇಳಿದರು.

click me!