ಕಾಂಗ್ರೆಸ್‌ನವರು ಸಾಚಾ ಇದ್ದಾರಾ?: ಬಸನಗೌಡ ಪಾಟೀಲ ಯತ್ನಾಳ

By Govindaraj S  |  First Published Aug 15, 2022, 10:57 PM IST

ಪಾಪ ಖರ್ಗೆ ಹಾಗೆ ಮಾತನಾಡಬಾರದು. ಅವರೇನು ಸಾಚಾ ಇದ್ದಾರಾ? ಕಾಂಗ್ರೆಸ್‌ನವರು ಸಾಚಾ ಇದ್ದಾರಾ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶಾಸಕ ಪ್ರಿಯಾಂಕ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


ವಿಜಯಪುರ (ಆ.15): ಪಾಪ ಖರ್ಗೆ ಹಾಗೆ ಮಾತನಾಡಬಾರದು. ಅವರೇನು ಸಾಚಾ ಇದ್ದಾರಾ? ಕಾಂಗ್ರೆಸ್‌ನವರು ಸಾಚಾ ಇದ್ದಾರಾ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶಾಸಕ ಪ್ರಿಯಾಂಕ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಪ್ರಿಯಾಂಕ ಖರ್ಗೆ ಅವರದ್ದು ಬಹಳ ಇವೆ. ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಇನ್ನು ಮುಂದೆ ಶಾಸಕ ಖರ್ಗೆ ಅವರಿಗೆ ಭವಿಷ್ಯ ಇದೆ. ಈ ರೀತಿ ಮಾತನಾಡಿದರೆ ಅವರದ್ದು ಹೊರಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಆಡಳಿತ ಕುಂಠಿತವಾಗುತ್ತಿದೆ ಎಂಬ ಸಚಿವ ಮಾಧಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಇನ್ನೂ ವೇಗವಾಗಿ ಆಡಳಿತ ನಡೆಯಬೇಕು ಎನ್ನುವ ಆಸೆ ಎಲ್ಲರಿಗೂ ಇದೆ. ಸರ್ಕಾರ ಇನ್ನೂ ಕ್ರಿಯಾಶೀಲವಾಗಬೇಕು. ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಬೇಕು ಎಂದರು. ಶಿವಮೊಗ್ಗದಲ್ಲಿ ಸಾವರ್ಕರ್‌ ಪೋಸ್ಟರ್‌ ಹರಿದಿದ್ದು, ಕೆಲವು ಜನರಿಗೆ ಇತಿಹಾಸ ಬಗ್ಗೆ ಮಾಹಿತಿ ಇರುವುದಿಲ್ಲ. ಎರಡು ಸಲ ಕಾಳಾ ಪಾನಿ ಶಿಕ್ಷೆ ಅನುಭವಿಸಿದವರು ವೀರ ಸಾವರ್ಕರ್‌. ಅಂಡೋಮಾನ್‌ ನಿಕೋಬಾರ್‌ ಜೈಲಿಗೆ ಹೋದರೆ ಸಾವರ್ಕರ್‌ ಬಗ್ಗೆ ತಿಳಿಯುತ್ತದೆ. 

Tap to resize

Latest Videos

ಗುಮ್ಮಟ ನಗರಿಯಲ್ಲಿ ತಿರಂಗಾ ರಂಗು: ಎತ್ತೆತ್ತ ನೋಡಿದರೆತ್ತ ತ್ರಿವರ್ಣ ಧ್ವಜದ ಹಾರಾಟ

ಕೆಲವರು ಅಪ್ರಬುದ್ಧರಿರುತ್ತಾರೆ. ಅವರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ಇತಿಹಾಸ ನೆನಪಿಸಿಕೊಡಲು ಪ್ರಧಾನಮಂತ್ರಿ ಈ ಕಾರ್ಯ ಮಾಡುತ್ತಿರುವುದು. ಒಂದು ವೇಳೆ ರಾಹುಲ್‌ ಗಾಂಧಿ ಸಾವರ್ಕರ್‌ ಬಳಿ ಇದ್ದಿದ್ದರೆ ಒಂದೇ ತಾಸಿನಲ್ಲಿ ಶರಣಾಗಿ ಇಟಲಿಗೆ ಹೋಗುತ್ತಿದ್ದರು ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ ರಾಜ್ಯಾದ್ಯಂತ ಬೇಕಾದರೂ ಓಡಾಡಲಿ, ಮನೇಲಿ ಬೇಕಾದರೂ ಓಡಾಡಲಿ. ಯಾರು ಓಡಾಡಬೇಕು ಎನ್ನುವುದು ಪಕ್ಷ ನಿರ್ಧಾರ ಮಾಡುತ್ತದೆ ಎಂದರು.

ರಾಷ್ಟ್ರ ಧ್ವಜಕ್ಕಿಂತ ಬೇರೆ ಯಾವ ಧ್ವಜವೂ ದೊಡ್ಡದಲ್ಲ: ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ, ದೇಶ ವಿಭಜನೆಯ ಘೋರ ನೆನಪಿನ ದಿನಾಚರಣೆ ಕಾರ್ಯಕ್ರಮವು ಆಗಸ್ಟ್ 14ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಮಾತನಾಡಿ, ನಮ್ಮ‌ದೇಶಕ್ಕೆ ನರೇಂದ್ರ ಮೋದಿಜಿಯವರು ಪ್ರಧಾನ ಮಂತ್ರಿಗಳಾಗಿರುವುದು ನಮ್ಮೆಲ್ಲರ ಸುದೈವವಾಗಿದೆ. 

12 ಬೇಡಿಕೆಗಳ ತನಿಖೆಗಾಗಿ ಹೋರಾಟ: ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಭಾರತ ದೇಶದ ಅಭಿವೃದ್ಧಿಯ ಮಾದರಿಯು ಈಗ ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು. ರಾಷ್ಟ್ರಧ್ವಜಕ್ಕಿಂತ ಕೇಸರಿ ಧ್ವಜ ದೊಡ್ಡದಲ್ಲ: ದೇಶಕ್ಕಾಗಿ ಅನೇಕ ಮಹಾತ್ಮರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ದೇಶಾಭಿಮಾನ ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದ ಶಾಸಕರು, ರಾಷ್ಟ್ರಧ್ವಜ ನಮ್ಮ ದೇಶಕ್ಕೆ ಶ್ರೇಷ್ಠವಾಗಿದೆ. ರಾಷ್ಟ್ರ ಧ್ವಜಕ್ಕಿಂತ ಬೇರೆ ಯಾವ ಧ್ವಜವು ದೊಡ್ಡದಲ್ಲ ಎಂದು ತಿಳಿಸಿದರು. ಹರ್ ಘರ್ ತಿರಂಗಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಮನೆಗಳ ಮೇಲೆ ರಾಷ್ಟ್ರ ಧ್ವಜ ಕಂಡು ಸಂತೋಷವಾಯಿತು ಎಂದರು.

click me!