ಕಾಂಗ್ರೆಸ್ ಗ್ಯಾರಂಟಿ ಬಂದು ನಮ್ಮನೆಲ್ಲ ಸತ್ಯಾನಾಶ ಮಾಡಿದೆ: ಶಾಸಕ ಯತ್ನಾಳ

By Kannadaprabha News  |  First Published Nov 27, 2023, 2:00 AM IST

ಬಹಳ ಜನರ ನಿರೀಕ್ಷೆಯಿತ್ತು. ನಾನು ಸೋಲುತ್ತೇನೆ ಅಂತ. ಅದೆಲ್ಲವನ್ನು ನಮ್ಮ ನಗರದ ಜನ ಸುಳ್ಳು ಮಾಡಿದಿರಿ. ಎಲ್ಲೆಡೆ ಹೊಂದಾಣಿಕೆ ಮಾಡಿಕೊಂಡೆ ಗೆದ್ದಿದ್ದಾರೆ. ಆದರೆ, ನಾನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಗೆದ್ದಿರುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 


ವಿಜಯಪುರ (ನ.27): ಬಹಳ ಜನರ ನಿರೀಕ್ಷೆಯಿತ್ತು. ನಾನು ಸೋಲುತ್ತೇನೆ ಅಂತ. ಅದೆಲ್ಲವನ್ನು ನಮ್ಮ ನಗರದ ಜನ ಸುಳ್ಳು ಮಾಡಿದಿರಿ. ಎಲ್ಲೆಡೆ ಹೊಂದಾಣಿಕೆ ಮಾಡಿಕೊಂಡೆ ಗೆದ್ದಿದ್ದಾರೆ. ಆದರೆ, ನಾನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಗೆದ್ದಿರುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಜಿಲ್ಲಾ ಭೋವಿ ಸಮಾಜ ಕಲ್ಯಾಣ ಸಂಘದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಸಮಸ್ತ ಹಿಂದೂಗಳು ಒಂದಾಗಿರುವ ಸಂದೇಶವನ್ನು ಇಡೀ ದೇಶಕ್ಕೆ ನೀಡಿದೆ. ಇಲ್ಲಿರುವಷ್ಟು ಜಾತಿಗಳು, ಉಪ ಜಾತಿಗಳು ದೇಶದಲ್ಲಿ ಎಲ್ಲಿಯೂ ಇಲ್ಲ. 

ಸುಮಾರು 1.15 ಲಕ್ಷ ಇರುವ ಮುಸ್ಲಿಂ ಸಮುದಾಯಕ್ಕೆ ಮತ ನೀಡುವುದೇ ಬೇಡ ಅಂತ ಹೇಳಿ, ನಮ್ಮ ಸಮುದಾಯಗಳ ಮತಗಳನ್ನಷ್ಟೇ ಪಡೆದು ಗೆದ್ದಿರುವೆ ಎಂದರು. ನಮಲ್ಲಿರುವ ಕೆಲ ವೈರಿಗಳನ್ನು ವಿರುದ್ಧ ನಿಲ್ಲಿಸಿದ್ದಲ್ಲದೇ, ವಿವಿಧಡೆಯಿಂದ ಸಾಕಷ್ಟು ಹಣ ಹರಿದು ಬಂತು ನನ್ನ ಸೋಲಿಸಲು. ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪ್ರಯತ್ನಿಸಿದರು. ನಾನು ಅಂದರೆ ಬಿಜೆಪಿ ಅನ್ನುವರೂ ಕೂಡ ಪಕ್ಷದ ಪರ ಕೆಲಸ ಮಾಡಲಿಲ್ಲ. ಆದರೂ ನಮ್ಮ ಮೇಲಿನ ನಂಬಿಕೆ, ಪ್ರೀತಿಯಿಂದ ಪಾಲಿಕೆ ಇತಿಹಾಸದಲ್ಲೇ ಆಗದ ಫಲಿತಾಂಶ ನಮ್ಮದಾಯಿತು ಎಂದು ಹೇಳಿದರು.

Tap to resize

Latest Videos

ಯುವ ಸಂಸತ್‌ನಲ್ಲಿ ಪಾಲ್ಗೊಂಡವರಲ್ಲಿ ನಾಯಕತ್ವ ಗುಣ: ಸಚಿವ ಎಚ್.ಕೆ.ಪಾಟೀಲ್‌

ಹಿಂದಿನ ಅವಧಿಯಲ್ಲಿ ಸಿಸಿ ರಸ್ತೆ, ಸಮುದಾಯ ಭವನ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಬಡವರಿಗೆ ಸಾಕಷ್ಟು ಆಶ್ರಯ ಮನೆಗಳನ್ನು ನೀಡಿ ಸ್ವಂತ ಸೂರು ಕಲ್ಪಿಸಲಾಗಿದೆ. ಈಗ ಗ್ಯಾರಂಟಿ ಬಂದು ನಮ್ಮನೆಲ್ಲ ಸತ್ಯಾನಾಶ ಮಾಡಿದೆ. ಬಡವರ ಹೊಟ್ಟೆ ತುಂಬಿಸಲು ಮೋದಿಯವರೇ ಅಕ್ಕಿ ಉಚಿತ ನೀಡುತ್ತಿದ್ದಾರೆ. ನಿಮ್ಮ ಪಡಿತರ ಅಂಗಡಿಗೆ ಇಳಿಸುವ ಹಮಾಲಿ ಸಹಿತ ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಹೇಳಿದರು. ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ, ಸೀರೆ ಹಂಚುತ್ತಾರೆ. 

ಆದರೆ, ನಾವು ನಮ್ಮ ಬಡವರು ಹಬ್ಬ ಹರಿದಿನಗಳಲ್ಲಿ ತಮ್ಮ ಕುಟುಂಬದೊಂದಿಗೆ ಸಂತೋಷ, ಸಂಭ್ರದಿಂದ ಹಬ್ಬ ಆಚರಿಸಲೆಂದು ದೀಪಾವಳಿ ಸಂದರ್ಭ 11 ಸಾವಿರ ಕುಟುಂಬಗಳಿಗೆ ₹2 ಸಾವಿರ ಮೌಲ್ಯದ ಕಿಟ್ ದೀಪಾವಳಿ ಉಡುಗೂರೆ ನೀಡಿದೇವು. ಸಾಧ್ಯವಾದಷ್ಟು ನಮ್ಮಿಂದ ಒಳ್ಳೆಯದನ್ನು ಸದಾ ಮಾಡುತ್ತೇವೆ ಎಂದರು. ಎಲ್ಲ ಸಮುದಾಯಗಳಿಗೆ ಸಹಾಯ ಸಹಕಾರ ನೀಡಿರುವೆ. ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಲ್ಲಿ ₹10 ಲಕ್ಷ ಅನುದಾನ ನೀಡಲಾಗುವುದು. ಶಿವರುದ್ರ ಬಾಗಲಕೋಟ ಅವರ ಪಾಲಿಕೆ ಅನುದಾನದಲ್ಲಿ ₹.3 ಲಕ್ಷ ವರೆಗೆ ಅನುದಾನ ನೀಡುತ್ತಾರೆ ಎಂದು ತಿಳಿಸಿದರು.

ರೈತರ ಖಾತೆಗೆ 78.39 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ: ಶಿವರಾಮ್ ಹೆಬ್ಬಾರ್‌

ಶಿವರುದ್ರ ಬಾಗಲಕೋಟ ಮಾತಾಡಿ, ಕಳೆದ ಅವಧಿಯಲ್ಲಿ ನಮ್ಮ ಶಾಸಕರು ನಿರೀಕ್ಷೆ ಮೀರಿ ಅನುದಾನ ತಂದು ಮಾದರಿ ನಗರವನ್ನಾಗಿ ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಮೇಲೆ ನಂಬಿಕೆಯಿಟ್ಟು ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ಮತ್ತು ಜನರಿಗೆ ನೀಡಿದ ಭರವವಸೆಯಿಂದ ನಿತ್ಯ ಪ್ರಾಮಾಣಿಕವಾಗಿ ವಾರ್ಡ್‌ ಕೆಲಸ ಮಾಡುತ್ತಿದ್ದೇವೆ. ಜನರಿಗೆ ಸ್ಪಂದಿಸುತ್ತಿದ್ದೇವೆ ಎಂದರು. ಭೋವಿ ಸಮಾಜದ ಅಧ್ಯಕ್ಷ ಶಶಿಕಾಂತ ಬೋವಿ, ಪರಶುರಾಮ ಗೋಲಗೇರಿ, ಈಶ್ವರ ಗೋಲಗೇರಿ, ಸಂತೋಷ ಭೋವಿ, ಗುರುನಾಥ ಗೋಲಗೇರಿ, ಕಾಳಪ್ಪ ಭೋವಿ ಸೇರಿದಂತೆ ಮುಂತಾದವರು ಇದ್ದರು.

click me!