ಭಾರತದ ನೆಲದಲ್ಲಿ ನಿಂತು ಹೀಗೆ ಮಾತನಾಡೋದಕ್ಕೆ ನಾಚಿಕೆ ಆಗೊಲ್ವ? ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ಅರಕಲಗೂಡು ಶಾಸಕ ಎ ಮಂಜು ಹಿಗ್ಗಾಮುಗ್ಗಾ ಜಾಡಿಸಿದರು.
ಕೊಡಗು (ಆ.20): ಭಾರತದ ನೆಲದಲ್ಲಿ ನಿಂತು ಹೀಗೆ ಮಾತನಾಡೋದಕ್ಕೆ ನಾಚಿಕೆ ಆಗೊಲ್ವ? ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ಅರಕಲಗೂಡು ಶಾಸಕ ಎ ಮಂಜು ಹಿಗ್ಗಾಮುಗ್ಗಾ ಜಾಡಿಸಿದರು.
ವೈಯಕ್ತಿಕ ಕಾರಣದಿಂದ ಕುಶಾಲನಗರಕ್ಕೆ ಆಗಮಿಸಿದ್ದ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಕ್ಕೆ ರಾಜ್ಯಪಾಲರಿಗೆ ಬಾಂಗ್ಲಾದೇಶದ ಪ್ರಧಾನಿಗೆ ಬಂದ ಗತಿ ಬರುತ್ತದೆ ಎಂಬ ಐವನ್ ಡಿಸೋಜಾರ ಪ್ರಚೋದನಕಾರಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮ್ಮ ದೇಶವನ್ನು ಬಾಂಗ್ಲಾದೇಶಕ್ಕೆ ಹೋಲಿಸಿಕೊಂಡು ಮಾತನಾಡುವುದಾದರೆ ಅವನು ಇಲ್ಲಿರುವುದಕ್ಕೆ ನಾಲಾಯಕ್. ಇಂತಹ ಹೇಳಿಕೆ ನೀಡುವವನು ಬೇರೆ ದೇಶಕ್ಕೆ ಹೋಗಲಿ. ಈ ದೇಶದ ಅನ್ನ ನೀರು ತಿಂದು ದೇಶದ ವಿರುದ್ಧವಾಗಿ ಮಾತನಾಡುತ್ತಾನೆಂದರೆ ನಾಚಿಕೆ ಆಗಬೇಕು ಅವನಿಗೆ ಎಂದು ಏಕವಚನದಲ್ಲಿ ಹರಿಹಾಯ್ದರು.
ಈ ರೀತಿ ದೇಶದ ವಿರುದ್ಧ ಮಾತನಾಡಿದರೆ ಮುಂದೆ ಅವರಿಗೇ ವಿರುದ್ಧವಾಗುತ್ತೆ ಅನ್ನೋದು ನೆನಪಿರಲಿ. ಎಂಎಲ್ಸಿ ಆಗಿ ನಿಮಗೆ ರಕ್ಷಣೆ ಇರಬಹುದು. ಆದರೆ ನಿಮ್ಮ ಮನೆಯವರಿಗೆ ಅಣ್ಣ ತಮ್ಮಂದಿರಿಗೆ ರಕ್ಷಣೆ ಇರಬೇಕಲ್ವಾ? ಎಂಎಲ್ಸಿ ಸ್ಥಾನ ಬಿಟ್ಟು ನೀವು ಹೊರಗೆ ಓಡಾಡಿ. ಆಗ ಜನ ಒಡಾಡಿಸಿಕೊಂಡು ಹೊಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.