ಅಲ್ಲಿ ದಳ ಇಲ್ಲ ಪಕ್ಷೇತರ ಮಾತ್ರ ಗೆಲುವು ಸಾಧಿಸುತ್ತಿದ್ದರು. 36 ವರ್ಷಗಳ ಕಾಲ ಕಾಂಗ್ರೆಸ್ ಅಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. ನಾನು ಕಾಂಗ್ರೆಸ್‌ಗೆ ಬಂದಾಗ ಅದಕ್ಕೆ ಜೀವ ಕೊಟ್ಟು ಎರಡು ಸಾರಿ ಗೆಲ್ಲಿಸಿದ್ದೇನೆ. ಈಗ ಬಿಜೆಪಿಗೆ ಬಂದಿದ್ದೇನೆ ಬಿಜೆಪಿಯೇ ಗೆಲ್ಲುತ್ತದೆ: ಕೃಷಿ ಸಚಿವ ಬಿ.ಸಿ ಪಾಟೀಲ್
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ(ಫೆ.05): ನಮ್ಮನ್ನು ಯಾರು ಸೋಲಿಸಬೇಕು ಎಂದು ಟಾರ್ಗೇಟ್ ಮಾಡುತ್ತಾರೋ ಅಂತವರನ್ನು ನಾವು ಸೋಲಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು. ದಾವಣಗೆರೆಯಲ್ಲಿ ಕೃಷಿ ಮೇಳದಲ್ಲಿ ಭಾಗವಹಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ಚುನಾವಣೆಯಲ್ಲಿ ಎದುರಾಳಿಯನ್ನು ಸೋಲಿಸಬೇಕು ಎಂದು ಎಲ್ಲರಿಗೂ ಇರುತ್ತದೆ. ನಮ್ಮನ್ನು ಯಾರು ಸೋಲಿಸಬೇಕು ಎಂದು ಟಾರ್ಗೆಟ್ ಮಾಡ್ತಾರೋ ಅಂತವರನ್ನು ನಾವು ಸೋಲಿಸುತ್ತೇವೆ. ಯುಬಿ ಬಣಕಾರ್ ನನ್ನು ಹೊಸದಾಗಿ ನೋಡ್ತಾ ಇದೀನಾ...ಮೂರು ಬಾರಿ ಕುಸ್ತಿ ಮಾಡಿದೀವಿ, ಹೊಸದೇನಲ್ಲ. ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್ ವಿರೋಧ ಅಲೆ ಇದೆ ಅಂತ ತಿಳಿಸಿದ್ದಾರೆ.
ಅಲ್ಲಿ ದಳ ಇಲ್ಲ ಪಕ್ಷೇತರ ಮಾತ್ರ ಗೆಲುವು ಸಾಧಿಸುತ್ತಿದ್ದರು. 36 ವರ್ಷಗಳ ಕಾಲ ಕಾಂಗ್ರೆಸ್ ಅಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. ನಾನು ಕಾಂಗ್ರೆಸ್‌ಗೆ ಬಂದಾಗ ಅದಕ್ಕೆ ಜೀವ ಕೊಟ್ಟು ಎರಡು ಸಾರಿ ಗೆಲ್ಲಿಸಿದ್ದೇನೆ. ಈಗ ಬಿಜೆಪಿಗೆ ಬಂದಿದ್ದೇನೆ ಬಿಜೆಪಿಯೇ ಗೆಲ್ಲುತ್ತದೆ ಅಂತ ಹೇಳಿದ್ದಾರೆ.
Assembly election: 25ರಂದು ಹಿರೇಕೆರೂರಿನಲ್ಲಿ ಜನಸಂಕಲ್ಪ ಯಾತ್ರೆ: ಬಿ.ಸಿ.ಪಾಟೀಲ್
ಕಾಂಗ್ರೆಸ್ ನವರು ಅವರ ಬೆನ್ನನ್ನು ಅವರೇ ಚಪ್ಪರಿಸಿಕೊಳ್ಳಬೇಕು.ಮಾಜಿ ಸಿಎಂ ಸಿದ್ದರಾಮಯ್ಯ ನಿಗೆ ಕ್ಷೇತ್ರನೇ ಇಲ್ಲ ಹುಡುಕಾಡುತ್ತಿದ್ದಾರೆ.ಅವರು ಇವರನ್ನು ಸೋಲಿಸಬೇಕು ಇವರು ಅವರನ್ನು ಸೋಲಿಸಬೇಕು ಎಂದು ಹೊಡದಾಡಿಕೊಂಡು ಇದ್ದಾರೆ.ಮಾಜಿ ಸಚಿವರಾದ ಜಿ. ಪರಮೇಶ್ವರ್, ಎಂ.ಬಿ ಪಾಟೀಲ್ ಅಸಮಧಾನ ಶುರುವಾಗಿದೆ. ಈಗಾಗಲೇ ಯಾತ್ರೆ ಮುಗಿದಿವೆ,ನೋಡೋಣ ಮುಂದೆ ಎಂದು ಪ್ರತಿಕ್ರಿಯೆ ನೀಡಿದರು.
ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿಕೆಶಿ ವಿರುದ್ಧ ಅಮಿತ್ ಶಾಗೆ ದೂರು ವಿಚಾರ ಕುರಿತು ಮಾತನಾಡಿದ ಅವರು ಅಮಿತ್ ಶಾಗೆ ದೂರು ನೀಡಲು ಹೋಗಿದ್ದಾರೆ ಎಂದು ನಾನು ಟಿವಿಯಲ್ಲಿ ನೋಡಿದೆ ಕೊಡಲಿ ನೋಡೋಣ ಎಂದರು.