ಸಿಎಂ ಕುರ್ಚಿಯಲ್ಲಿ ಟಗರು ಕುಳಿತಿದೆ, ಕೆಳಗೆ ಇಳಿಸುವುದು ಅಷ್ಟು ಸುಲಭವಿಲ್ಲ: ಜಮೀರ್ ಅಹ್ಮದ್

By Kannadaprabha NewsFirst Published Oct 9, 2024, 8:31 AM IST
Highlights

ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿಯಾದ್ರೆತಾನೆ ಚರ್ಚೆ. ಆ ಕುರ್ಚಿಯಲ್ಲಿ ಟಗರು (ಸಿದ್ದರಾಮಯ್ಯ) ಕುಳಿತಿದೆ. ಆ ಟಗರನ್ನು ಕೆಳಗೆ ಇಳಿಸುವುದು ಅಷ್ಟು ಸುಲಭವಿಲ್ಲ: ಸಚಿವ ಜಮೀರ್ ಅಹ್ಮದ್

ವಿಜಯಪುರ(ಅ.09):  ಜಾತಿಗಣತಿ ಜಾರಿ ವಿಚಾರವಾಗಿ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನತೆಗೆದುಕೊಳ್ಳಲಾಗುವುದೆಂದು ಸಿಎಂ ತಿಳಿಸಿದ್ದು, ಗುರುವಾರ ನಡೆಯುವ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಬಹುದು. ಆಗ ಏನು ಚರ್ಚೆ ಆಗುತ್ತದೆ ನೋಡೋಣ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ಜಾತಿಗಣತಿ 2013ರಿಂದಲೇ ಪೆಂಡಿಂಗ್ ಇದೆ. ನಮ್ಮ ಸರ್ಕಾರ ಹೋದ ಬಳಿಕ ಸಮ್ಮಿಶ್ರ ಸರ್ಕಾರ ದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಈ ಬಗ್ಗೆ ಗಮನ ಕೊಡಲಿಲ್ಲ. ಹಾಗಾಗಿ ಈಗ ಚರ್ಚಿಸುತ್ತೇವೆ ಎಂದರು. 

Latest Videos

ವಿಜಯೇಂದ್ರ ಹೇಳಿದಾಕ್ಷಣ ಸಿದ್ದರಾಮಯ್ಯ ರಾಜೀನಾಮೆ ಕೊಡ್ಬೇಕಾ?: ಸಚಿವ ಜಮೀರ್ ಅಹಮ್ಮದ್

ಸಿಎಂ ಕುರ್ಚಿಯಲ್ಲಿ ಟಗರು ಕುಳಿತಿದೆ: 

ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿಯಾದ್ರೆತಾನೆ ಚರ್ಚೆ. ಆ ಕುರ್ಚಿಯಲ್ಲಿ ಟಗರು (ಸಿದ್ದರಾಮಯ್ಯ) ಕುಳಿತಿದೆ. ಆ ಟಗರನ್ನು ಕೆಳಗೆ ಇಳಿಸುವುದು ಅಷ್ಟು ಸುಲಭವಿಲ್ಲ ಎಂದರು.

click me!