ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿದ ಸುಧಾಕರ್ : ಅಸಮಾಧಾನ

By Kannadaprabha NewsFirst Published Dec 16, 2020, 7:50 AM IST
Highlights

ಇದೀಗ ತಮ್ಮ ಅಸಮಾಧಾನ ಹೊರಹಾಕಿರುವ ಸಚಿವ ಸುಧಾಕರ್ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಯಾರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. 

ಚಿಕ್ಕಬಳ್ಳಾಪುರ (ಡಿ.16): ನಾನು ಉಡಾಫೆ ರಾಜಕಾರಣಿಯಲ್ಲ, ಕೊಟ್ಟಭರವಸೆ ಈಡೇರಿಸಲು ಆಗದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಹೊರತು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಅಜ್ಜವಾರ ಮತ್ತು ಹೊಸಹುಡ್ಯಾ ಗ್ರಾಮಗಳಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹೆಣ್ಣೂರು-ನಾಗವಾರ ಕೆರೆಗಳ ಕಲುಷಿತ ನೀರು ಶುದ್ಧೀಕರಿಸಿ ತಂದು ಈ ಭಾಗದ ಕೆರೆಗಳನ್ನು ತುಂಬಿಸುತ್ತೇನೆ ಎಂದು ಹಿಂದೆ ಹೇಳಿದಾಗ ಅನೇಕರು ಗೇಲಿ ಮಾಡಿದ್ದರು.

ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ರು ಸಚಿವ ಸುಧಾಕರ್ : ಅವರಿಗದು ಶೋಭೆಯಲ್ಲ ಎಂದ್ರು ...

ಉಡಾಫೆ ಮಾತು ಆಡುತ್ತಿದ್ದೇನೆ, ನೀರು ತರುವುದು ಅಸಾಧ್ಯ, ಆ ನೀರು ಬಳಕೆ ಮಾಡಿದರೆ ಕ್ಯಾನ್ಸರ್‌ ಬರುತ್ತದೆ. ಮತ ಪಡೆಯಲು ಸುಳ್ಳು ಹೇಳುತ್ತಿದ್ದಾರೆ ಎಂದೆಲ್ಲಾ ಮಾತನಾಡಿದ್ದರು. ಈಗ ಆಗಿರುವುದಾದರೂ ಏನು? ಕೊಟ್ಟಮಾತು ಉಳಿಸಿಕೊಂಡು ಈ ಭಾಗದ ಕೆರೆಗಳನ್ನು ತುಂಬಿಸುತ್ತಿದ್ದೇನೆ. ಕ್ಯಾನ್ಸರ್‌ ಬಂದಿದ್ಯಾ? ಎಂದು ಪ್ರಶ್ನೆ ಮಾಡಿದರು.

ಎತ್ತಿನಹೊಳೆ ನೀರು ತಂದು ಈ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸುತ್ತೇನೆ. ಅದಕ್ಕಾಗಿ ಪ್ರತಿ ಸಚಿವ ಸಂಪುಟ ಸಭೆಯಲ್ಲಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪಿಸುತ್ತಿದ್ದೇನೆ ಎಂದರು.

click me!