​ ಶಾ ಮಾತೇ ಅಂತಿಮ: ಬೊಮ್ಮಾಯಿ ನೇತೃತ್ವದಲ್ಲಿ ಎಲೆಕ್ಷನ್‌ ಎಂದ ಸಚಿವ ಸೋಮಶೇಖರ್

By Suvarna News  |  First Published Sep 5, 2021, 7:59 PM IST

* ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಎಲೆಕ್ಷನ್ ವಿಚಾರ
* ಬಸವರಾಜ ಬೊಮ್ಮಾಯಿ ಪರ ಸೋಮಶೇಖರ್ ಬ್ಯಾಟಿಂಗ್
* ಅಮಿತ್​​ ಶಾ ಮಾತೇ ಅಂತಿಮ ಎಂದ ಸಚಿವ ಎಸ್‌ಟಿ ಸೋಮಶೇಖರ್


ಚಾಮರಾಜನಗರ, (ಸೆ.05): ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎನ್ನುವ ಕೇಂದ್ರ ಗೃಹ ಸಚಿವ ಮಾತು ಇದೀಗ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಬೊಮ್ಮಾಯಿ ನೇತೃತ್ವಕ್ಕೆ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಅಮಿತ್ ಶಾ ಹೇಳಿಕೆಗೆ ಸಹಮತ ವ್ಯಕ್ತಪಡಿಸುವ ಮೂಲಕ ಬೊಮ್ಮಾಯಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

Tap to resize

Latest Videos

undefined

ಇನ್ನು ಈ ಬಗ್ಗೆ ಸಚಿವ ಎಸ್​​​​​.ಟಿ ಸೋಮಶೇಖರ್ ಅವರು ಚಾಮರಾಜನಗರ ಇಂದು (ಸೆ.05) ಪ್ರತಿಕ್ರಿಯಿಸಿದ್ದು,  ಸಿಎಂ ಬಸವರಾಜ್​​​ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲಿದ್ದೇವೆ ಎಂದು ​ಸ್ಪಷ್ಟಪಡಿಸಿದರು.

ಕರ್ನಾಟಕ ಮುಂದಿನ ಚುನಾವಣೆಗೆ ಯಾರ ನಾಯಕತ್ವ? ದಾವಣಗೆರೆಯಲ್ಲಿ ಸೀಕ್ರೆಟ್ ಬಿಚ್ಚಿಟ್ಟ ಅಮಿತ್ ಶಾ!

ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರ ಮಾತೇ ಅಂತಿಮ. ಅಮಿತ್​​​​​​ ಶಾ ಅವರು ಹೇಳಿದಂತೆ 2023ರ ವಿಧಾನಸಭಾ ಚುನಾವಣೆ ಸಿಎಂ ಬಸವರಾಜ್​​ ಬೊಮ್ಮಾಯಿ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದರು.

ಸಿಎಂ ಬಸವರಾಜ್​ ಬೊಮ್ಮಾಯಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುತ್ತಾರೆ. ಇವರು ಬಹಳ ಬುದ್ಧಿವಂತರು ಮತ್ತು ಸಮರ್ಥರು. ಈಗಲೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

click me!