ಬಿಜೆಪಿಯಿಂದ ಬರುವವರು ಬಹಳಷ್ಟು ಜನ ಇದ್ದಾರೆ, ಆಪರೇಶನ್ ಅಗತ್ಯ ನಮಗಿಲ್ಲ. ಬಿಜೆಪಿ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಮಾಜಿ ಮುಖ್ಯಮಂತ್ರಿಗಳಿಗೆ ಪ್ರಧಾನಿ ಭೇಟಿಗೂ ಸಮಯ ಕೊಡ್ತಿಲ್ಲ. ವಿರೋಧ ಪಕ್ಷದ ನಾಯಕ ಆಯ್ಕೆ ಮಾಡುವ ಯೋಗ್ಯತೆಯೂ ಇಲ್ಲ ಎಂದು ವ್ಯಂಗ್ಯವಾಡಿದ ಸಚಿವ ಶರಣಬಸಪ್ಪ ದರ್ಶನಾಪೂರ್
ಬೀದರ್(ಅ.01): ರಾಜ್ಯದಲ್ಲಿ ಕಾಂಗ್ರೆಸ್ ಪರ ಇರುವ ಅಲೆಯಿಂದ ಬೆದರಿ ಬಿಜೆಪಿಯು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಜನರಿಗೆ ಗೊತ್ತಾಗುವದಿಲ್ಲವೆ ಎಂದು ಸಣ್ಣ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ್ ವ್ಯಂಗ್ಯವಾಡಿದರು.
ಅವರು ಶನಿವಾರ ಭೇಟಿಯಾದ ಮಾಧ್ಯಮದವರಿಗೆ ಮಾತನಾಡಿ, ಕೆಟ್ಟ ಆಡಳಿತದಿಂದಾಗಿ ಜನರ ಆಕ್ರೋಶಕ್ಕೆ ಒಳಗಾಗಿ 130 ಸೀಟುಗಳಿದ್ದವರು 65ಕ್ಕೆ ಇಳಿದರು, ಅಷ್ಟಕ್ಕೂ ರಾಜ್ಯದಲ್ಲಿ 26 ಸಂಸದ ಸ್ಥಾನಗಳನ್ನು ಹೊಂದಿರುವ ಬಿಜೆಪಿಯು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿದ್ದು ಬಿಜೆಪಿಯ ದುಸ್ಥಿತಿಯನ್ನು ತೋರಿಸುತ್ತದೆ ಎಂದರು.
ದೇಶದ ಆದಿವಾಸಿಗಳಿಗೆ ಮೋದಿ ಸರ್ಕಾರ ಗೌರವ: ಕೇಂದ್ರ ಸಚಿವ ಭಗವಂತ ಖೂಬಾ
ಬಿಜೆಪಿಯಿಂದ ಬರುವವರು ಬಹಳಷ್ಟು ಜನ ಇದ್ದಾರೆ, ಆಪರೇಶನ್ ಅಗತ್ಯ ನಮಗಿಲ್ಲ. ಬಿಜೆಪಿ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಮಾಜಿ ಮುಖ್ಯಮಂತ್ರಿಗಳಿಗೆ ಪ್ರಧಾನಿ ಭೇಟಿಗೂ ಸಮಯ ಕೊಡ್ತಿಲ್ಲ. ವಿರೋಧ ಪಕ್ಷದ ನಾಯಕ ಆಯ್ಕೆ ಮಾಡುವ ಯೋಗ್ಯತೆಯೂ ಇಲ್ಲ ಎಂದು ವ್ಯಂಗ್ಯವಾಡಿದರು.
ಸಿಆರ್‌ಡಬ್ಲುಸಿ ಮೊದಲನೇ ಸಲ 21ಸಾವಿರ ಕ್ಯುಸಕ್ಸ್ ನೀರು ಬಿಡುವಂತೆ ಸೂಚಿಸಿತು. ನಾವು ಸುಪ್ರಿಂಕೋರ್ಟ್ ಮುಂದೆ ಪ್ರಬಲ ವಾದ ಮಂಡಿಸಿ ನಂತರ ಸಿಆರ್‌ಡಬ್ಲುಸಿಗೆ ಹೋದ ಮೇಲೆ 11ಸಾವಿರ ಕ್ಯುಸೆಕ್ಸ್ ನೀರು ಬಿಡುವಂತೆ ಸೂಚಿಸಲಾಯಿತು, ಮತ್ತೊಮ್ಮೆ ಸತತ ಪ್ರಯತ್ನ, ಸ್ಥಳೀಯ ಪರಿಸ್ಥಿತಿಯನ್ನು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರಿಂದ ಇದೀಗ 3 ಸಾವಿರ ಕ್ಯುಸೆಕ್ಸ್ ನೀರು ಬಿಡುವ ಆದೇಶವಾಗಿದೆ ಎಂದರು.
ಸುಪ್ರಿಂಕೋರ್ಟನ್ನು ಮೀರಿ ಏನಾದರೂ ಮಾಡಲು ಸಾಧ್ಯವಿದೆಯೇ? ಎರಡು ರಾಜ್ಯಗಳ ಮಧ್ಯ ಜಲಬಿಕ್ಕಟ್ಟು ಉದ್ಭವಿಸಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಏನೂ ಇಲ್ಲವೆ ಅಷ್ಟಕ್ಕೂ ರಾಜ್ಯದಲ್ಲಿರುವ 26 ಬಿಜೆಪಿ ಸಂಸದರ ಕೆಲಸ ಏನು ಇಲ್ಲವೇ ಆ ಭಾಗದಲ್ಲಿ ಬಿಜೆಪಿ ಸಂಸದರಿಲ್ಲವೇ ಪ್ರಧಾನಿ ಮೋದಿ ಬಳಿ ಹೋಗಿ ಸೂಕ್ತ ನಿರ್ದೇಶನ ಕೊಡಿಸಲಿ, ಅದು ಬಿಟ್ಟು ಅನವಶ್ಯಕವಾಗಿ ರಾಜ್ಯ ಸರ್ಕಾರದ ಮೇಲೆ ದೂರುವದನ್ನು ಬಿಡಲಿ ಎಂದು ದರ್ಶನಾಪೂರ ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡರು.