ಚುನಾವಣೆ ಸಮೀಪಿಸುತ್ತಿದ್ದಂತೆ ಆಸ್ಪತ್ರೆಯಿಂದ ಎದ್ದು ಬರುವ ಜನರಿದ್ದಾರೆ. ಅವರು ಯಾರನ್ನೋ ಮನಸೋಇಚ್ಛೆ ಬೈಯ್ಯುವ ಮೂಲಕ ಸುದ್ದಿಗೆ ಬರುತ್ತಾರೆ. ಬಯ್ಯುವುದರಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಕಿತ್ತೂರು (ಬೆಳಗಾವಿ) (ಮಾ.10): ಚುನಾವಣೆ ಸಮೀಪಿಸುತ್ತಿದ್ದಂತೆ ಆಸ್ಪತ್ರೆಯಿಂದ ಎದ್ದು ಬರುವ ಜನರಿದ್ದಾರೆ. ಅವರು ಯಾರನ್ನೋ ಮನಸೋಇಚ್ಛೆ ಬೈಯ್ಯುವ ಮೂಲಕ ಸುದ್ದಿಗೆ ಬರುತ್ತಾರೆ. ಬಯ್ಯುವುದರಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೆಹಲಿಯಿಂದ ಬಂದು ಇಲ್ಲಿನ ಜನರಿಗೆ ಟೋಪಿ ಹಾಕಿ ಹೋಗುವವರನ್ನು ಕ್ಷೇತ್ರದ ಜನ ನಂಬದೆ, ಸದಾ ನಿಮ್ಮೊಂದಿಗೆ ಇರುವವರನ್ನು ಬೆಂಬಲಿಸಿ ಹೇಳಿದರು.
ಕುರಣಿ ಏತ ನೀರಾವರಿ ಯೋಜನೆಯ ಸ್ಥಳಕ್ಕೆ ಭೇಟಿ: ಬೇಸಿಗೆ ದಿನಗಳಲ್ಲಿ ರೈತರಿಗೆ ಹಾಗೂ ದನಕರುಗಳಿಗೆ ಅಗತ್ಯವಿರುವ ಕುಡಿಯುವ ನೀರು ಪೂರೈಸುವ ಹಿನ್ನೆಲೆಯಲ್ಲಿ ಶುಕ್ರವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ತಾಲೂಕಿನ ಕುರಣಿ ಏತ ನೀರಾವರಿ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಹಾಗೂ ಕೆನಾಲ್‌ಗಳನ್ನು ಪರಿಶೀಲಿಸಿದರು. ನಂತರ ಬಡಕುಂದ್ರಿಯ ಬ್ಯಾರೇಜ್‌ಗೆ ನೀರು ಪೂರೈಸುವ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬೇಸಿಗೆ ದಿನಗಳಲ್ಲಾದರೂ ಈ ವಲಯಕ್ಕೆ ನದಿ ದಡದಲ್ಲಿರುವ ಹಳ್ಳಿ ಜನರಿಗೆ ಅಗತ್ಯವಿರುವ ನೀರು ಹಿರಣ್ಯಕೇಶಿ ನದಿಗೆ ಹರಿ ಬಿಡಬೇಕು ಎಂಬ ದಿಸೆಯಲ್ಲಿ ಈ ಭೇಟಿ ಪ್ರಾಮುಖ್ಯತೆ ಪಡೆದಿದೆ. ಕಳೆದ ವಾರವಷ್ಟೇ ಸಚಿವ ಸತೀಶ ಜಾರಕಿಹೊಳಿ ಹಿರಣ್ಯಕೇಶಿ ನದಿಗೆ ನೀರು ಹರಿಸುವ ಬಗ್ಗೆ ಮಾಹಿತಿ ನೀಡಿ ಗೋಟೂರ ಹಾಗೂ ಬಡಕುಮದ್ರಿ ಬ್ಯಾರೇಜ್‌ಗಳಿಗೆ ನೀರು ತುಂಬಿಸುವ ಬಗ್ಗೆ ತಿಳಿಸಿದ್ದರು, ಈ ವಲಯದ ರೈತರ ಹಿತದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ನಿರಂತರ ನೀರು ತುಂಬುವ ಯೋಜನೆ ರೂಪಿಸುವ ಬಗ್ಗೆ ಚರ್ಚಿಸಿದ್ದರು.
ಯಾರೋ ಪಾಕ್ ಪರ ಘೋಷಣೆ ಕೂಗಿದ್ರೆ ನಾಸಿರ್ ಏಕೆ ಹೊಣೆ: ಸಚಿವ ಎಂ.ಬಿ.ಪಾಟೀಲ್
ಹಿರಣ್ಯಕೇಶಿ ನದಿಗೆ ಕಳೆದ ನಾಲ್ಕು ದಿನಗಳಿಂದ ಪ್ರತಿನಿತ್ಯ 200 ಕ್ಯುಸೆಕ್ ನೀರು ಹಿರಣ್ಯಕೇಶಿ ನದಿಗೆ ಹರಿ ಬಿಡಲಾಗುತ್ತಿದ್ದು, ಈ ನೀರಿನಿಂದ ಗೋಟೂರ ಬ್ಯಾರೇಜ್ ವಲಯದ ರೈತರ ದನ-ಕರುಗಳಿಗೆ ಕುಡಿಯಲು ನೀರಿನ ಬರ ಸದ್ಯ ನೀಗಲಿದೆ. ಈ ಸಂದರ್ಭದಲ್ಲಿ ಮಹಾಂತೇಶ ಮಗದುಮ್ಮ, ಆನಂದ ತವಗಮಠ, ಹೆಬ್ಬಾಳ ಕುರಣಿ, ಹಂಚಿನಾಳ,ಉಳ್ಳಾಗಡ್ಡಿ-ಖಾನಾಪೂರ ಜಿನರಾಳ, ಬಡಕುಂದ್ರಿ, ಹೆಬ್ಬಾಳ, ಚಿಕಾಲಗುಡ್ಡ, ಗ್ರಾಮದ ರೈತರು ಮತ್ತು ಸಾರ್ವಜನಿಕರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.