ಸುಳ್ಳು ಹೇಳುವುದೇ ಬಿಜೆಪಿಯ ಭರವಸೆ: ಸಚಿವ ಸತೀಶ್ ಜಾರಕಿಹೊಳಿ

By Kannadaprabha News  |  First Published Mar 28, 2024, 12:39 PM IST

ಕಾಂಗ್ರೆಸ್ ಪಕ್ಷವೆಂದರೆ ಬಡವರ ಅವಶ್ಯಕತೆಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುವ ಜನಸ್ನೇಹಿ ಪಕ್ಷ. ನುಡಿದಂತೆ ನಡೆಯುವುದು ಕಾಂಗ್ರೆಸ್ ಪಕ್ಷದ ನಡೆಯಾದರೆ, ಸುಳ್ಳು ಹೇಳುವುದೇ ಬಿಜೆಪಿಯ ಭರವಸೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದರು.


ಮುಗಳಖೋಡ (ಮಾ.28): ಕಾಂಗ್ರೆಸ್ ಪಕ್ಷವೆಂದರೆ ಬಡವರ ಅವಶ್ಯಕತೆಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುವ ಜನಸ್ನೇಹಿ ಪಕ್ಷ. ನುಡಿದಂತೆ ನಡೆಯುವುದು ಕಾಂಗ್ರೆಸ್ ಪಕ್ಷದ ನಡೆಯಾದರೆ, ಸುಳ್ಳು ಹೇಳುವುದೇ ಬಿಜೆಪಿಯ ಭರವಸೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪಟ್ಟಣದ ಶ್ರೀ ಸಾಯಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಿಪಂ ಮಾಜಿ ಸದಸ್ಯ ಡಾ.ಸಿ.ಬಿ.ಕುಲಗೋಡ ಮಾತನಾಡಿ, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗೆ ಪಕ್ಷದ ಎಲ್ಲ ಕಾರ್ಯಕರ್ತರು ಶ್ರಮಪಟ್ಟು ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು. 

ಮಾಳಿ/ಮಾಲಗಾರ ಸಮುದಾಯದ ಹಲವು ವರ್ಷಗಳ ಪ್ರಮುಖ ಬೇಡಿಕೆಯಾದ ಮಾಳಿ/ಮಾಲಗಾರ ನಿಗಮ ಮಂಡಳಿ ಸ್ಥಾಪನೆ ಕನಸಾಗಿ ಉಳಿದಿದೆ. ಮುಂದಿನ ದಿನಗಳಲ್ಲಿ ಅದು ನನಸಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮನವರ, ಮಾಜಿ ಶಾಸಕ ಎಸ್.ಬಿ.ಘಾಟಗೆ, ಪ್ರದೀಪ್ ಹಾಲ್ಗುಣಿ, ಡಿ.ಎಸ್.ನಾಯಕ, ಪರಗೌಡ ಖೇತಗೌಡರ, ಪಿ.ಬಿ.ಖೇತಗೌಡರ, ಶ್ರೀಶೈಲ ಅಂಗಡಿ, ಪ್ರಕಾಶ ಆದಪ್ಪಗೋಳ, ಡಾ.ಗಣಪತಿ ಕುಲಿಗೋಡ, ಡಾ.ಮಹಾಂತೇಶ ಕುಲಿಗೋಡ, ರಾಜಕುಮಾರ ನಾಯಿಕ, ಹಣಸಾಬ ನಾಯಿಕ, ದಿಲಾವರ್ ಎಲಿಗಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Latest Videos

undefined

ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿ: ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ. ಯಾವ ಪಕ್ಷದಿಂದ ಬರುತ್ತಾರೆ ಅನ್ನುವುದಕ್ಕಿಂತ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಬಿಜೆಪಿಯಿಂದ ಕಾಂಗ್ರೆಸ್‌ ಬಂದಾಗ ನಾವು ಗೌರವ ಕೊಟ್ಟಿದ್ದೇವೆ. ಈಗ ಬಿಜೆಪಿಗೆ ಹೋಗಿದ್ದು ಅವರ ವೈಯಕ್ತಿ ವಿಚಾರ. ಇನ್ನು ಬೆಳಗಾವಿ ಬಿಜೆಪಿ ಟಿಕೆಟ್‌ ಪಡೆದ ಜಗದೀಶ್‌ ಶೆಟ್ಟರ್‌ ಅವರ ಬಗ್ಗೆ ಚರ್ಚಿಸುವ ಅವಶ್ಯಕತೆ ನಮಗಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ಅಷ್ಟೇ ನಮ್ಮ ಗುರಿ ಎಂದು ತಿಳಿಸಿದರು.

ಭೂಗಳ್ಳರ ವಿರುದ್ಧ ಸಮರ ಸಾರಿದ ಹೆಮ್ಮಿಗೆಪುರ ನಿವಾಸಿಗಳು: ಅಕ್ರಮ ಕಟ್ಟಡಗಳ ವಿರುದ್ಧ ಹೋರಾಟ

ಚಿಕ್ಕೋಡಿಯಲ್ಲಿ ಶಂಭು ಕಲ್ಲೋಳಕರ್‌ ಅವರ ಸಭೆ, ಮಾಜಿ ಶಾಸಕ ರಮೇಶ ಕುಡಚಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್‌, ಶಂಭು ಕಲ್ಲೋಳಕರ್‌ ಬಂಡಾಯ ಅಭ್ಯರ್ಥಿ ಅಲ್ಲ. ಅವರು ಸಭೆ ನಡೆಸುತ್ತಿರುವ ಬಗ್ಗೆ ಗೊತ್ತಿಲ್ಲ. ಕಾಂಗ್ರೆಸ್‌ ಪಕ್ಷಕ್ಕೂ ಮತ್ತು ಶಂಭ ಕಲ್ಲೋಳಕರ್‌ ಅವರಿಗೆ ಸಂಬಂಧವಿಲ್ಲ. ಇನ್ನು ವಿಧಾನಸಭೆ ಚುನಾವಣೆ 6 ತಿಂಗಳ ಇರುವಾಗ ಬಂದು ಟಿಕೆಟ್‌ ಕೇಳಿದ್ದಾರೆ. ಹೀಗಾಗಿ ಕೊಟ್ಟಿಲ್ಲ. ಮುಂದೆಯೂ ರಾಯಬಾಗ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆಯೇ ಟಿಕೆಟ್‌ ನೀಡುತ್ತೇವೆ. ಇನ್ನು ಚುನಾವಣೆ ನಾಲ್ಕು ವರ್ಷ ಇರುವಾಗಲೇ ಹೇಳುತ್ತಿದ್ದೇನೆ ಎಂದರು.

click me!