ಯಾವ ಸಚಿವರು ತಮಗೆ ಸ್ಪಂದಿಸುತ್ತಿಲ್ಲವೆಂಬುದನ್ನು ಪಾಟೀಲರು ಬಹಿರಂಗವಾಗಿ ಹೇಳಲಿ. ಯಾವ ಸಚಿವರು? ಎಲ್ಲಾ ಸಚಿವರಾ? ನಿರ್ದಿಷ್ಟವಾಗಿ ಇಂತಹದ್ದೇ ಸಚಿವರಾ ಅಂತಾ ಪಾಟೀಲರೇ ಹೇಳಬೇಕು. ಏನು ಸಮಸ್ಯೆ ಅಂತಾ ಸಂಬಂಧಿಸಿದ ಸಚಿವರು ಅಥವಾ ಸಿಎಂ ಬಳಿ ಚರ್ಚಿಸಬೇಕು. ಈಗ ಸಿಎಂಗೆ ಯಾವ ವಿಚಾರದ ಬಗ್ಗೆ ಪತ್ರ ಬರೆದಿದ್ದಾರೋ ನನಗಂತೂ ಗೊತ್ತಿಲ್ಲ. ಯಾವ ಕಾರಣಕ್ಕೆ ಸಿಎಂಗೆ ಪತ್ರ ಬರೆದಿದ್ದಾರೆಂಬುದನ್ನು ಪಾಟೀಲರನ್ನೇ ಕೇಳಬೇಕಷ್ಟೆ ಎಂದು ತಿಳಿಸಿದ ಸಚಿವ ಸತೀಶ ಜಾರಕಿಹೊಳಿ
ದಾವಣಗೆರೆ(ನ.30): ಆಳಂದ ಶಾಸಕ ಬಿ.ಆರ್.ಪಾಟೀಲ್ ಯಾವ ಕಾರಣಕ್ಕೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೋ ಗೊತ್ತಿಲ್ಲ, ಪಾಟೀಲರನ್ನೇ ಕೇಳಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಜಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಬಿ.ಆರ್.ಪಾಟೀಲ್ ಯಾವ ಕಾರಣಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎನ್ನುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಯಾವ ಸಚಿವರು ತಮಗೆ ಸ್ಪಂದಿಸುತ್ತಿಲ್ಲವೆಂಬುದನ್ನು ಪಾಟೀಲರು ಬಹಿರಂಗವಾಗಿ ಹೇಳಲಿ. ಯಾವ ಸಚಿವರು? ಎಲ್ಲಾ ಸಚಿವರಾ? ನಿರ್ದಿಷ್ಟವಾಗಿ ಇಂತಹದ್ದೇ ಸಚಿವರಾ ಅಂತಾ ಪಾಟೀಲರೇ ಹೇಳಬೇಕು. ಏನು ಸಮಸ್ಯೆ ಅಂತಾ ಸಂಬಂಧಿಸಿದ ಸಚಿವರು ಅಥವಾ ಸಿಎಂ ಬಳಿ ಚರ್ಚಿಸಬೇಕು. ಈಗ ಸಿಎಂಗೆ ಯಾವ ವಿಚಾರದ ಬಗ್ಗೆ ಪತ್ರ ಬರೆದಿದ್ದಾರೋ ನನಗಂತೂ ಗೊತ್ತಿಲ್ಲ. ಯಾವ ಕಾರಣಕ್ಕೆ ಸಿಎಂಗೆ ಪತ್ರ ಬರೆದಿದ್ದಾರೆಂಬುದನ್ನು ಪಾಟೀಲರನ್ನೇ ಕೇಳಬೇಕಷ್ಟೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಹೊಸದಾಗಿ ಜಾತಿಗಣತಿ ನಡೆಸಲಿ: ಮಾಜಿ ಸಚಿವ ರೇಣುಕಾಚಾರ್ಯ
ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ನಿವೃತ್ತ ಪ್ರಾಧ್ಯಾಪಕ, ವಿಚಾರವಾಗಿ ಪ್ರೊ.ಎ.ಬಿ.ರಾಮಚಂದ್ರಪ್ಪ, ವೀರಣ್ಣ ಇತರರಿದ್ದರು.
ಜಾತಿ ಗಣತಿ ವರದಿ ಆಕ್ಷೇಪವಿದ್ದವರು ಸದನದಲ್ಲಿ ಚರ್ಚಿಸಲಿ
ಜಾತಿ ಗಣತಿ ವರದಿ ಮೊದಲು ಬಿಡುಗಡೆಯಾಗಲಿ. ಆ ನಂತರ ಅದರ ಬಗ್ಗೆ ಚರ್ಚೆ ಮಾಡಬಹುದು. ಯಾವುದೇ ವರದಿಗೆ ಪರ-ವಿರೋಧ ಇದ್ದೇ ಇರುತ್ತದೆ. ವರದಿ ಬಗ್ಗೆ ಯಾರಿಗೇ ವಿರೋಧವಿದ್ದರೂ ಅದನ್ನು ಕ್ಯಾಬಿನೆಟ್‌ನಲ್ಲಿ ಹೇಳಲಿ ಎಂದು ಸಲಹೆ ನೀಡಿದರು. ವರದಿ ನೀಡಿದ ನಂತರ ಬಹಿರಂಗ ಚರ್ಚೆ ಮಾಡೋಣ. ವರದಿ ಸರಿ ಇಲ್ಲವೆಂದರೆ ತಿರಸ್ಕರಿಸುವ ಶಕ್ತಿ, ಅಧಿಕಾರ ಸದನಕ್ಕೆ ಇದ್ದೇ ಇದೆ. ವರದಿ ಸಾದಕ-ಬಾಧಕಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡೋಣ. ಜಾತಿ ಗಣತಿ ವರದಿ ಮನೆ ಮನೆಗೆ ಹೋಗಿಲ್ಲವೆನ್ನುವವರು, ವರದಿ ಬಗ್ಗೆ ಆಕ್ಷೇಪ ಇದ್ದವರು ಸದನದಲ್ಲಿ ಹೇಳಲಿ. ಯಾರಿಗೇ ಅನ್ಯಾಯವಾಗಿದ್ದರೂ ಅದನ್ನು ಸದನದಲ್ಲಿ ಹೇಳುವ ಅಧಿಕಾರ ಶಾಸಕರಿಗೆ ಇದ್ದೇ ಇದೆ. ಪಕ್ಷ, ಜಾತಿ ಅಂತಾ ಅಲ್ಲ, ವರದಿ ವಿರೋಧಿ ಶಕ್ತಿ, ಅಧಿಕಾರ, ಸ್ವಾತಂತ್ರ್ಯ ಶಾಸಕರಿಗೆ ಇದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಭ್ರೂಣಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಇದಕ್ಕೆ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುತ್ತಾರೆ. ನಾನೂ ಸಂಬಂಧಿಸಿದ ಸಚಿವರ ಗಮನಕ್ಕೆ ತರುತ್ತೇನೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.