ಗುತ್ತಿಗೆದಾರರಿಂದ ಕಾಂಗ್ರೆಸ್ ಸರ್ಕಾರ ಕಮಿಷನ್ ಪಡೆದುಕೊಳ್ಳುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಯಾವುದೇ ಹೊಸ ಟೆಂಡರ್ ಕರೆದಿಲ್ಲ. ಹೊಸ ಕಾಮಗಾರಿ ಆರಂಭಿಸಿಯೇ ಇಲ್ಲ. ಹೀಗಾಗಿ, ಗುತ್ತಿಗೆದಾರರಿಂದ ಕಮೀಷನ್ ಹೇಗೆ ಕೇಳುವುದು? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದರು.
ಧಾರವಾಡ (ಆ.13): ಗುತ್ತಿಗೆದಾರರಿಂದ ಕಾಂಗ್ರೆಸ್ ಸರ್ಕಾರ ಕಮಿಷನ್ ಪಡೆದುಕೊಳ್ಳುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಯಾವುದೇ ಹೊಸ ಟೆಂಡರ್ ಕರೆದಿಲ್ಲ. ಹೊಸ ಕಾಮಗಾರಿ ಆರಂಭಿಸಿಯೇ ಇಲ್ಲ. ಹೀಗಾಗಿ, ಗುತ್ತಿಗೆದಾರರಿಂದ ಕಮೀಷನ್ ಹೇಗೆ ಕೇಳುವುದು? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹೊಸ ಕಾಮಗಾರಿ ಆರಂಭಿಸಿದ್ದರೆ ಕಮೀಷನ್ ಅಥವಾ ಭ್ರಷ್ಟಾಚಾರದ ಪ್ರಶ್ನೆ ಉದ್ಭವವಾಗಬಹುದಿತ್ತು. ಈಗ ಆ ಪ್ರಶ್ನೆ ಎದುರಾಗೋದಿಲ್ಲ. ಆದರೆ, ಬಿಜೆಪಿ ಮುಂಚಿತವಾಗಿ ಟೆಂಡರ್ ಕರೆದು ದುಡ್ಡಿಲ್ಲದೇ ಬಿಟ್ಟು ಹೋಗಿದೆ.
ಯಾರು ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದನ್ನು ನೋಡಬೇಕಿದೆ. ಆಯಾ ಇಲಾಖಾವಾರು ಕೆಲಸ ನೋಡಿ ಬಿಲ್ ಬಿಡುಗಡೆ ಮಾಡಲಾಗುತ್ತದೆ. ಈ ರೀತಿ ಸುಮ್ಮನೆ ಆಪಾದನೆ ಮಾಡೋದು ಸರಿಯಲ್ಲ. ಹಳೆಯ ಬಿಲ್ ಅನ್ನು ನಾವು ಕೊಟ್ಟೇ ಕೊಡುತ್ತೇವೆ. ಈಗಾಗಲೇ ಅನೇಕ ಜಿಲ್ಲೆಯಲ್ಲಿ ಬಾಕಿ ಬಿಲ್ ಬಿಡುಗಡೆಯಾಗುತ್ತಿವೆ ಎಂದರು. ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬರುವ ಬಾಕಿ ಅನುದಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. 2018ರಿಂದ ಇಲ್ಲಿಯವರೆಗೂ ವಿವಿಗೆ ಅನುದಾನ ಬಂದಿಲ್ಲ. ಹೀಗಾಗಿ .230 ಕೋಟಿ ಅನುದಾನ ಬರಬೇಕಿದೆ. ಇದಕ್ಕೆ ಸಂಬಂಧಿಸಿದ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಮುಂದೆ ಹಣಕಾಸು ಇಲಾಖೆ ಅನುಮತಿ ಪಡೆದು ಅನುದಾನ ನೀಡಲಾಗುವುದು ಎಂದರು.
ಬೋರ್‌ವೆಲ್ ಆನ್ ಮಾಡುವಾಗ ಕರೆಂಟ್ ಶಾಕ್: ಅಜ್ಜ, ಅಜ್ಜಿ, ಮೊಮ್ಮಗಳು ಸಾವು
ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮವಹಿಬೇಕು. ಈ ಮೂಲಕ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಹಕಾರ ನೀಡಬೇಕು. ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಒಗ್ಗಟ್ಟಿನ ಶಕ್ತಿ ತೋರ್ಪಡಿಸಿದ್ದಿರಿ. ಲೋಕಸಭೆ ಚುನಾವಣೆಯಲ್ಲೂ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು. ನಗರದ ಕೊಂಡನಾಯಕನಹಳ್ಳಿಯಲ್ಲಿರುವ ವಿಜಯನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿಯಾಗಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ. ಶಾಸಕರು, ಮಾಜಿ ಶಾಸಕರು ಕೂಡ ಕಾರ್ಯಕರ್ತರೊಂದಿಗೆ ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕು ಎಂದರು.
ಪ್ರತಿಯೊಬ್ಬರು ಸ್ವಂತ ಮನೆ ಹೊಂದಬೇಕೆಂಬುದು ನಮ್ಮ ಗುರಿ: ಸಚಿವ ಪರಮೇಶ್ವರ್
ಮುಂಬರುವ ದಿನಗಳಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಸಾಕಷ್ಟುಜನಪ್ರಿಯ ಯೋಜನೆಗಳ ಮೂಲಕ ವಿಜಯನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯಾದ್ಯಂತ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಒದಗಿಸಲಾಗುವುದು. ಬಡ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಲು ಸ್ಥಳೀಯ ಶಾಸಕರ ಜತೆಗೆ ಚರ್ಚಿಸಿ, ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.ಯುವ ಕಾಂಗ್ರೆಸ್ ಸಮಿತಿ ಮಾಜಿ ಜಿಲ್ಲಾಧ್ಯಕ್ಷ ಎಚ್.ಜಿ. ಗುರುದತ್ತ, ನಗರಸಭೆ ಸದಸ್ಯ ಕೆ. ಮಹೇಶ್, ಮುಖಂಡರಾದ ರಘು ಗುಜ್ಜಲ, ಅನಂತ ಪದ್ಮನಾಭ, ಗುಜ್ಜಲ ನಾಗರಾಜ್, ತಮ್ಮನೆಳ್ಳಪ್ಪ, ನಿಂಬಗಲ್ ರಾಮಕೃಷ್ಣ, ಸಂಗಪ್ಪ, ಬಿ. ಮಾರೆಣ್ಣ, ಮರಡಿ ಮಂಜುನಾಥ್, ಗೋವಿಂದಪ್ಪ, ರಮೇಶ, ಇಂದುಮತಿ, ಅಮೀನಾ ಬೇಗಂ, ಪಿ. ವೀರಾಂಜನೇಯ, ಕೋಟಗಿನಾಳ್ ಹುಲುಗಪ್ಪ, ಮೂಸಾ ಸಾಬ್, ರುಕ್ಸಾನಾ, ನಾಗಮ್ಮ, ಕವಿತಾ, ಮಂಜುಳಾ, ಜಯಮ್ಮ, ಖಾಜಾಬನ್ನಿ ಮತ್ತಿತರರಿದ್ದರು.