ಬಿಜೆಪಿ ಶ್ರೀಲಂಕಾ, ಪಾಕಿಸ್ತಾನ ಸರ್ಕಾರ ಬೀಳಿಸಲಿ: ಸಚಿವ ಸಂತೋಷ ಲಾಡ್ ಕಿಡಿ

By Kannadaprabha News  |  First Published Feb 4, 2024, 12:00 AM IST

ನಾವು 136 ಶಾಸಕರಿದ್ದೇವೆ. ಅವರಿಗೆ ಇನ್ನು 53 ಶಾಸಕರು ಬೇಕು, ಆಗಷ್ಟೇ ಸಮನಾಗುತ್ತಾರೆ. ಅದೇಗೆ ಬೀಳಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ಬರೀ ಸರ್ಕಾರ ಪತನ ಎಂಬ ಮಾತೇ ಆಯಿತು. ಬಿಜೆಪಿಗರು ಸರ್ಕಾರ ಪತನಗೊಳಿಸುವಲ್ಲಿ ನಿಸ್ಸಿಮರು. ಶ್ರೀಲಂಕಾ, ಪಾಕಿಸ್ತಾನದ ಸರ್ಕಾರಗಳನ್ನೇ ಬೀಳಿಸಲಿ ಎಂದ ಸಚಿವ ಸಂತೋಷ ಲಾಡ್ 


ಹುಬ್ಬಳ್ಳಿ(ಫೆ.04):  ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಂದು ಸರ್ಕಾರ ಪತನ ಆಗುತ್ತೆ ಎಂದು ಹೇಳಿ ಹೋಗುತ್ತಾರೆ. ಇವರಷ್ಟೇ ಅಲ್ಲ, ಬಿಜೆಪಿಗರೆಲ್ಲರೂ ಬರೀ ಇದನ್ನೇ ಹೇಳುವುದು ಆಗಿದೆ. ಅವರಿಗೆ ಈ ಮಾತನ್ನು ಹೇಳುವುದು ಬಿಟ್ಟು ಬೇರೆ ಕೆಲಸವೇ ಇಲ್ಲದಂತಾಗಿದೆ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು 136 ಶಾಸಕರಿದ್ದೇವೆ. ಅವರಿಗೆ ಇನ್ನು 53 ಶಾಸಕರು ಬೇಕು, ಆಗಷ್ಟೇ ಸಮನಾಗುತ್ತಾರೆ. ಅದೇಗೆ ಬೀಳಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ಬರೀ ಸರ್ಕಾರ ಪತನ ಎಂಬ ಮಾತೇ ಆಯಿತು. ಬಿಜೆಪಿಗರು ಸರ್ಕಾರ ಪತನಗೊಳಿಸುವಲ್ಲಿ ನಿಸ್ಸಿಮರು. ಶ್ರೀಲಂಕಾ, ಪಾಕಿಸ್ತಾನದ ಸರ್ಕಾರಗಳನ್ನೇ ಬೀಳಿಸಲಿ ಎಂದರು. 

Tap to resize

Latest Videos

ಕಾಂಗ್ರೆಸ್‌ಗೆ ಮಾನ-ಮರ್ಯಾದೆ ಇದ್ದರೆ ಸಂಸದ ಡಿಕೆಸು ಅಮಾನತು ಮಾಡಿ: ಪ್ರಲ್ಹಾದ್‌ ಜೋಶಿ

ದಕ್ಷಿಣ ಭಾರತದ ರಾಜ್ಯಗಳಿಗೆ 2014ರ ಮುಂಚೆ ಎಷ್ಟು ಅನುದಾನ ಬರುತ್ತಿತ್ತೋ ಅಷ್ಟು ಅನುದಾನ ಈಗ ಬರುತ್ತಿಲ್ಲ ಎಂದು ಸಂಸದ ಡಿ.ಕೆ. ಸುರೇಶ ಹೇಳಿದ್ದಾರೆ. ಇದು ಸರಿಯಾಗಿದೆ. ಆದರೆ, ಪ್ರತ್ಯೇಕ ರಾಷ್ಟ್ರವಾಗಬೇಕೆಂಬ ಬಗ್ಗೆ ಅವರೇ ಉತ್ತರಿಸುತ್ತಾರೆ. ಅವರನ್ನೇ ಕೇಳಿ ಎಂದು ಸಚಿವ ಸಂತೋಷ ಲಾಡ್ ಹೇಳಿದರು. 

ಡಿ.ಕೆ. ಸುರೇಶ ಹೇಳಿದ್ದರಲ್ಲಿ ಲಾಜಿಕ್ ಇದೆ. ದಕ್ಷಿಣದ ರಾಜ್ಯಗಳಿಗೆ ಬರುವ ದುಡ್ಡು ಕಡಿಮೆಯಾಗಿದೆ. ನಮಗೆ ಬರಬೇಕಾದ ದುಡ್ಡು ಬರುತ್ತಿಲ್ಲ. ನಮ್ಮ ಹಣ ತೆಗೆದುಕೊಂಡು ಉತ್ತರ ಭಾರತದ ಅಭಿವೃದ್ಧಿ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದರು. ಇನ್ನು ಪ್ರತ್ಯೇಕ ರಾಷ್ಟ್ರವಾಗಬೇಕೆಂದು ಡಿ.ಕೆ. ಸುರೇಶ ಹೇಳಿದ್ದಾರೆ. ಅದು ಸರಿಯೋ ತಪ್ಪೋ ಎಂಬುದನ್ನು ಅವರನ್ನೇ ಉತ್ತರ ಕೇಳಿ ಎಂದರು. ಹಾಗೆ ನೋಡಿದರೆ ಬಿಜೆಪಿಗರು ಎಷ್ಟು ಸಲ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಹತ್ತು ವರ್ಷದಲ್ಲಿ ಎಷ್ಟು ಸಲ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆ ಬಗ್ಗೆ ಅವರು ಉತ್ತರಿಸಲಿ ಎಂದರು. 10 ವರ್ಷದಲ್ಲಿ ಇವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆಯಾಗಲಿ. ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರವಿತ್ತು. ಒಂದೇ ಒಂದು ಮನೆಯನ್ನು ಕೊಟ್ಟಿಲ್ಲ ಎಂದರು. ಶಾಸಕ ಪ್ರಸಾದ ಅಬ್ಬಯ್ಯ ಇದ್ದರು.

click me!